ವೆಬ್ ಜಾಲಕ್ಕೂ ಸಿಕ್ಕಿಕೊಳ್ಳದ ರಜನಿ ಸೈಟ್ ನ ರಹಸ್ಯವೇನು?

By Varun
|
ವೆಬ್ ಜಾಲಕ್ಕೂ ಸಿಕ್ಕಿಕೊಳ್ಳದ ರಜನಿ ಸೈಟ್ ನ ರಹಸ್ಯವೇನು?

ಈಗಾಗಲೇ ರಜನಿ ಚಮತ್ಕಾರವನ್ನ ಫಿಲಂ ನಲ್ಲಿ ನೋಡಿದ್ದ ನಾವು, ಅವ್ರ ಅಭಿಮಾನಿ ಸೃಷ್ಟಿಸಿರೋ ವೆಬ್ಸೈಟ್, ಹೇಗೆ ಇಂಟರ್ನೆಟ್ ಇಲ್ಲದೆ ನಡೆಯುತ್ತೆ ಎಂಬ ಕುತೂಹಲಕಾರಿ ವಿಷಯ ನಮ್ಮನ್ನ ಕಾಡ್ತಾ ಇತ್ತು. ನಾವು ಆ ಸೈಟ್ ನ ಟೈಪ್ ಮಾಡಿ ನೋಡಿದಾಗ ಕಂಡ ಸ್ಕ್ರೀನ್ ನಮ್ಮನ್ನ ಬೆಕ್ಕಸ ಬೆರಗಾಗಿ ನೋಡುವಂತೆ ಮಾಡಿತ್ತು.

ಏಕೆಂದರೆ ರಜನಿಕಾಂತ್ ಚಿತ್ರಗಳಲ್ಲಿ ಸಿಗರೇಟ್ ಹಾರುವುದು, ಗಾಳಿಯಲ್ಲಿ ಬಾಲ್ ತಿರುಗುವುದು ಮುಂತಾದ ಅನೇಕ ಚಮತ್ಕಾರ ನೋಡಿದ್ದ ನಾವು, AllAboutRajni.com ನ ಕ್ಲಿಕ್ ಮಾಡಿದೊಡನೆ " ರಜನಿಕಾಂತ್, ಹೀ ಇಸ್ ನಾಟ್ ಎನ್ ಆರ್ಡಿನರಿ ಮ್ಯಾನ್. ದಿಸ್ ಇಸ್ ನೋ ಆರ್ಡಿನರಿ ವೆಬ್ಸೈಟ್. ಇಟ್ ರನ್ಸ್ ಆನ್ ರಜನಿ ಪವರ್. ದಿ ಓನ್ಲಿ ವೇ ಟು ಎಂಟರ್ ದಿಸ್ ವೆಬ್ಸೈಟ್ ಇಸ್ ಟು ಸ್ವಿಚ್ ಯುವರ್ ಇಂಟರ್ನೆಟ್" ಎಂಬ ಸಂದೇಶ ನೋಡಿ ಚಕಿತಗೊಂಡೆವು.

ನೆಟ್ ಲೋಕದ ಹಲವು ತಂತ್ರಜ್ಞರನ್ನ ಸಂಪರ್ಕಿಸಿ ಇದರ ಹಿಂದಿನ ರಹಸ್ಯ ಏನಿರಬಹುದು ಎಂದು ಕೇಳಿದಾಗ ನಮಗ ತಿಳಿದು ಬಂದ ವಿಷಯ ಏನೆಂದರೆ, ನಾವು ಆ ವೆಬ್ಸೈಟ್ ಕ್ಲಿಕ್ ಮಾಡುವಾಗ ಮಾತ್ರ ಇಂಟರ್ನೆಟ್ ಸಂಪರ್ಕ ಬೇಕಿದ್ದು, ಆ ಕೂಡಲೇ ಫ್ಲಾಶ್ ಎಂಬ ಅಪ್ಲಿಕೇಶನ್ ನಿಂದ ನಿಮ್ಮ ಹಾರ್ಡ್ ಡ್ರೈವ್ ಗೆ ರಜನಿ ಬಗೆಗಿನ ಎಲ್ಲ ಮಾಹಿತಿ ಡೌನ್ಲೋಡ್ ಅಗಲಿದ್ದು, ಇಂಟರ್ನೆಟ್ ಸಂಪರ್ಕ ಕಡಿತ ಗೊಳಿಸುವವರೆಗೂ ವೆಬ್ಸೈಟ್, ನಮ್ಮನ್ನ ತಡೆದು, ಇಂಟರ್ನೆಟ್ ಸ್ವಿಚ್ ಆಫ್ ಆದ ಮೇಲೆ ನಮ್ಮ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಆದ ಫೈಲ್ ತೆರೆದುಕೊಳ್ಳುವಂತೆ ಮಾಡುತ್ತದೆ ಎಂದು.

ನಮ್ಮ ಸುತ್ತ ಹಲವು ವಿಸ್ಮಯಗಳನ್ನ, ಕಂಡು ಕೇಳರಿಯದಂಥ ಘಟನೆಗಳನ್ನನೋಡಿ, ಕೇಳಿ ತಿಳಿದುಕೊಂಡಿದ್ದ ನಮಗೆ ಕಟ್ಟ ಕಡೆಯದಾಗಿ ಉಳಿಯುವ ಪ್ರಶ್ನೆ...

ರಜನಿ ಗೆ ಸಾಧ್ಯವಾಗದ್ದು ಏನಾದರೂಉಂಟೆ ?!!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X