ರಕ್ಷಾ ಬಂಧನಕ್ಕೆ ಈ ಗಿಫ್ಟ್‌ ನೀಡಿ..! ನಿಮ್ಮ ಸಹೋದರಿ ಫುಲ್‌ ಖುಷ್‌..!

  By GizBot Bureau
  |

  ರಕ್ಷಾ ಬಂಧನ ಹತ್ತಿರದಲ್ಲೇ ಇದೆ. ಹೆಚ್ಚಿನ ಅಣ್ಣಂದಿರು ಈಗ ತಂಗಿಗಾಗಿ ಶಾಪಿಂಗ್ ಮಾಡುವುದರಲ್ಲಿ ಬ್ಯುಸಿ ಆಗಿರುತ್ತಾರೆ. ತಂಗಿ ರಾಖಿ ಕಟ್ಟಿದಾಗ ಏನು ಗಿಫ್ಟ್ ಕೊಡಬಹುದು ಎಂಬುದು ಹೆಚ್ಚಿನ ಅಣ್ಣಂದಿರ ದೊಡ್ಡ ಗೊಂದಲವಾಗಿರಬಹುದು. ವರ್ಷಗಳು ಕಳೆದಂತೆ ನಿಮ್ಮ ತಂಗಿಗೆ ನೀವು ಸಪ್ರೈಸ್ ಕೊಡುವ ಮತ್ತು ಆಕೆ ನಿರೀಕ್ಷಿಸುವ ಗಿಫ್ಟ್ ನ ಮೌಲ್ಯವೂ ಹೆಚ್ಚಾಗಿರುತ್ತದೆ. ಅಣ್ಣನಿಂದ ಒಂದು ಉತ್ತಮ ಗಿಫ್ಟ್ ಬೇಕು ಎಂದು ಆಕೆ ಕೂಡ ನಿರೀಕ್ಷೆ ಇಟ್ಟುಕೊಂಡಿರಬಹುದು.

  ರಕ್ಷಾ ಬಂಧನಕ್ಕೆ ಈ ಗಿಫ್ಟ್‌ ನೀಡಿ..! ನಿಮ್ಮ ಸಹೋದರಿ ಫುಲ್‌ ಖುಷ್‌..!

  ಒಂದು ವೇಳೆ ನೀವು ನಿಮ್ಮ ರಕ್ಷಾಬಂಧನದ ಸಂದರ್ಬದಲ್ಲಿ ನಿಮ್ಮ ತಂಗಿ ಪ್ರತಿದಿನ ಬಳಸುವ ಯಾವುದೋ ತಂತ್ರಜ್ಞಾನ ಸಂಬಂಧಿತ ವಸ್ತುವನ್ನು ಕೊಡಬೇಕು ಎಂದು ಬಯಸುತ್ತಿದ್ದೀರಾದರೆ ನಾವು ನಿಮಗೆ ಉತ್ತಮ ಸಲಹೆಗಳನ್ನು ಈ ಲೇಖನದ ಮೂಲಕ ನೀಡುತ್ತಿದ್ದೇವೆ. ಆ ಮೂಲಕ ಆಕೆಯ ದೈನಂದಿನ ಅನುಕೂಲತೆಗಳಿಗೆ ಈ ಗೆಜೆಟ್ ಗಳು ನೆರವು ನೀಡುತ್ತದೆ ಅಷ್ಟೇ ಯಾಕೆ ಖಂಡಿತ ಈ ಗಿಫ್ಟ್ ನ್ನು ಆಕೆ ಇಷ್ಟ ಪಡುತ್ತಾಳೆ. ಹಾಗಾದ್ರೆ ಅದ್ಯಾವ ಗೆಜೆಟ್ ಗಳು ಬೆಸ್ಟ್ ಎಂದು ಕೇಳುತ್ತಿದ್ದೀರಾ? ಈ ಲೇಖನವನ್ನು ಸಂಪೂರ್ಣ ಓದಿದರೆ ನಿಮಗೆ ಖಂಡಿತ ಒಂದು ಐಡಿಯಾ ಸಿಗಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಬ್ಲೂಟೂತ್ ಸ್ಪೀಕರ್ ಗಳು

  ಮ್ಯೂಸಿಕ್ ಪ್ರಿಯಳು ಮತ್ತು ಪಾರ್ಟಿ ಫಂಕ್ಷನ್ ಗಳಲ್ಲಿ ಸ್ಪೀಕರ್ ಗಳನ್ನು ಕೊಂಡಯ್ಯಳು ಆಕೆಗೆ ಕಷ್ಟವಾಗುತ್ತಿದ್ದರೆ ಖಂಡಿತ ನೀವು ಸುಲಭದಲ್ಲಿ ಸಾಗಿಸಬಲ್ಲ ಪೋರ್ಟೆಬಲ್ ಬ್ಲೂಟೂತ್ ಸ್ಪೀಕರ್ ಗಳನ್ನು ಉಡುಗೊರೆಯಾಗಿ ನೀಡಬಹುದು. ಪಾರ್ಟಿ, ಫಂಕ್ಷನ್ ಗಳನ್ನು ಪ್ಲಾನ್ ಮಾಡುವವರಿಗೆ ಖಂಡಿತ ಈ ಗಿಫ್ಟ್ ಹೆಚ್ಚು ಉಪಯೋಗಕ್ಕೆ ಬರುತ್ತದೆ.
  ಈ ಸ್ಪೀಕರ್ ಗಳನ್ನು ಸುಲಭದಲ್ಲಿ ಸ್ಮಾರ್ಟ್ ಫೋನ್ ಗಳ ಜೊತೆ ಕನೆಕ್ಟ್ ಮಾಡಬಹುದು ಮತ್ತು ಎಲ್ಲಿ ಬೇಕಿದ್ದರೂ, ಯಾವಾಗ ಬೇಕಿದ್ದರೂ ಮ್ಯೂಸಿಕ್ ಆಲಿಸುವುದಕ್ಕೆ ಸಹಾಯ ಮಾಡುತ್ತದೆ. ಇತ್ತೀಚೆಗೆ ಅಲ್ಟಿಮೇಟ್ ಇಯರ್ಸ್ ತನ್ನ Ultimate Ears WONDERBOOM ಫ್ರೀ ಸ್ಟೈಲ್ ಕಲೆಕ್ಷನ್ ನ್ನು ಬಿಡುಗಡೆಗೊಳಿಸಿದ್ದು ಇದು ಪೋರ್ಟೇಬಲ್ ಮತ್ತು ವಾಟ್ ಫ್ರೂಫ್ ಕೂಡ ಹೊಂದಿರುವ ಸ್ಪೀಕರ್ ಗಳಾಗಿದೆ. ಈ WONDERBOOM ಫ್ರೀಸ್ಟೈಲ್ ಬ್ಲೂಟೂತ್ ಸ್ಪೀಕರ್ ನ ಬೆಲೆ ರುಪಾಯಿ 6,995 ಆಗಿದ್ದು 5 ಕಲರ್ ಗಳ ವೇರಿಯಂಟ್ ನಲ್ಲಿ ಲಭ್ಯವಿದೆ.

  ಫಿಟ್ ನೆಸ್ ಬ್ಯಾಂಡ್  ಎಂಐ ಬ್ಯಾಂಡ್ 2

  ತನ್ನ ದೈನಂದಿನ ಜೀವನಶೈಲಿಯಿಂದ ಆಕೆ ಪರದಾಡುತ್ತಿದ್ದು ಫಿಟ್ ನೆಸ್ ಪ್ರಿಯಳಾಗಿದ್ದರೆ ಅಥವಾ ಫಿಟ್ ನೆಸ್ ಕಾಯ್ದುಕೊಳ್ಳಲು ಪ್ರಯತ್ನಿಸುವವಳಾಗಿದ್ದರೆ ಮತ್ತು ಆಕೆಯ ಆರೋಗ್ಯದ ಬಗ್ಗೆ ಕಾಳಜಿ ಇರುವ ಅಣ್ಣ ನೀವಾಗಿದ್ದರೆ ಖಂಡಿತ ಆಕೆಗೆ ಉಡುಗೊರೆ ನೀಡಬಹುದಾದ ಇನ್ನೊಂದು ಗೆಜೆಟ್ ಎಂದರೆ ಅದು ಫಿಟ್ ನೆಸ್ ಬ್ಯಾಂಡ್. ಫಿಟ್ ನೆಸ್ ಬ್ಯಾಂಡ್ ಆರೋಗ್ಯದ ದಿನಚರಿಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಶಿಯೋಮಿ ಎಂಐ ಬ್ಯಾಂಡ್ ಸಿರೀಸ್ ನ ಆರಂಭಿಕ ಬೆಲೆ 1,299 ರುಪಾಯಿಗಳಾಗಿದ್ದು 19,000 ಬೆಲೆ ಬಾಳುವ ಫಿಟ್ ನೆಸ್ ಬ್ಯಾಂಡ್ ಗಳೂ ಕೂಡ ಲಭ್ಯವಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಖರೀದಿ ಮಾಡಬಹುದು.

  ಸ್ಮಾರ್ಟ್ ಫೋನ್ 

  ಪ್ರತಿಯೊಬ್ಬರಿಗೂ ಸ್ಮಾರ್ಟ್ ಫೋನ್ ಅಗತ್ಯವಿರುತ್ತದೆ. ಖಂಡಿತ ಇದು ನಿಮ್ಮ ತಂಗಿಗೆ ಹೆಚ್ಚು ಇಷ್ಟವಾಗುವ ವಸ್ತುವೂ ಆಗಬಹುದು. ಸ್ಮಾರ್ಟ್ ಫೋನ್ ಗಿಫ್ಟ್ ಕೊಡುವುದರಲ್ಲಿ ನಿಮಗೆ ಸಂತೋಷ ಸಿಗುವುದಾದರೆ ದೊಡ್ಡ ರೇಂಜ್ ನಿಮಗೆ ಸಿಗುತ್ತದೆ. ನಿಮ್ಮ ಬಜೆಟ್ ಗೆ ಅನುಕೂಲವಾಗಿ ಶಿಯೋಮಿ, ಹಾನರ್, ಸ್ಯಾಮ್ ಸಂಗ್ ಇತ್ಯಾದಿಗಳಲ್ಲಿ ಹೊಸ ಸ್ಮಾರ್ಟ್ ಫೋನ್ ಗಳೂ ಕೂಡ ಲಭ್ಯವಿದೆ.

  ಹೆಡ್ ಫೋನ್ ಗಳು 

  ನಿಮ್ಮ ತಂಗಿ ಮೂವಿ ಮತ್ತು ಮ್ಯೂಸಿ ಪ್ರಿಯಳಾಗಿದ್ದಲ್ಲಿ ಆಕೆಗೆ ಹೆಡ್ ಫೋನ್ ನ್ನು ಗಿಫ್ಟ್ ಆಗಿ ನೀಡಬಹುದು. ಉತ್ತಮ ಗುಣಮಟ್ಟದ, ಉತ್ತಮ ಆಡಿಯೋ ಕ್ವಾಲಿಟಿ ಇರುವ ಬೆಸ್ಟ್ ಹೆಡ್ ಫೋನ್ ಗಳು ಈ ಸಂದರ್ಬದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.ನೀವು ಒನ್ ಪ್ಲಸ್ ಬುಲೆಟ್ ವಯರ್ ಲೆಸ್ ಹೆಡ್ ಫೋನ್ ನ್ನು ಕೂಡ ಖರೀದಿಸಬಹುದು Sennheiser CX 213 ಅಥವಾ ಮತ್ತೊಂದು Triple Driver In-Ear ಹೆಡ್ ಫೋನ್ ಉತ್ತಮವಾಗಿದೆ. ಒಂದು ವೇಳೆ ಇದಕ್ಕಾಗಿ ನೀವು ಹೆಚ್ಚು ವೆಚ್ಚ ಮಾಡಲು ಇಚ್ಛೆ ಪಡದೇ ಇದ್ದಲ್ಲಿ Skullcandy ಮತ್ತು Audio Technica ದಲ್ಲಿ ಉತ್ತಮ ಆಯ್ಕೆಗಳು ಲಭ್ಯವಾಗುತ್ತದೆ.

  ಕಿಂಡಲ್ 

  ನಿಮ್ಮ ತಂಗಿ ಓದುಗಾರಳಾಗಿದ್ದರೆ, ಪುಸ್ತಕ ಪ್ರಿಯಳಾಗಿದ್ದಲ್ಲಿ ನೀವು ಒಂದು ಪುಸ್ತಕ ಇಲ್ಲವೇ ಬಂಚ್ ಗಟ್ಟಲೆ ಪುಸ್ತಕಗಳನ್ನು ನೀಡುವ ಅವಕಾಶವಿದೆ. ಕಳೆದ ಹಲವು ದಿನಗಳಿಂದ ಆಕೆ ಹುಡುಕುತ್ತಿರುವ ಪುಸ್ತಕವೊಂದನ್ನು ನೀವು ಇ-ಬುಕ್ ಮೂಲಕ ಖರೀದಿಸಿ ಕೊಡಬಹುದು. ಅಮೇಜಾನ್ ಕಿಂಡಲ್ ನಲ್ಲಿ ಹಲವು ರೇಂಜಿನ ಪುಸ್ತಕಗಳು ಇ-ರೀಡರ್ ಗಳಿಗಾಗಿ ಲಭ್ಯವಿದ್ದು ಕೆಲವು ಸಿರೀಸ್ ಗಳ ಆರಂಭಿಕ ಬೆಲೆ 5,999 ರುಪಾಯಿಗಳಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Raksha Bandhan 2018: Gadgets that you can gift your sister this Rakhi. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more