Rapido ಫುಡ್ ಡೆಲಿವರಿ ಆರಂಭ: 0 ಕಮಿಷನ್!..Swiggy ಮತ್ತು Zomato ಕಥೆ ಕ್ಲೋಸ್?!
ಬೈಕ್ ಟ್ಯಾಕ್ಸಿ ಸೇವೆಗಳಿಗೆ ಹೆಸರುವಾಸಿಯಾದ Rapido ಇದೀಗ ಆಹಾರ ವಿತರಣಾ ಮಾರುಕಟ್ಟೆಗೆ ಹೊಸ ಹೆಜ್ಜೆಯಿಟ್ಟಿದೆ. ಕಂಪೆನಿಯು ''Ownly'' ಎಂಬ ಹೆಸರಿನಲ್ಲಿ ಹೊಸ ಆಹಾರ ವಿತರಣಾ ಆ್ಯಪ್ ಅನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. ಈ ಆ್ಯಪ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಇದು ಶೂನ್ಯ ಕಮಿಷನ್ ಮಾದರಿಯನ್ನು ಆಧರಿಸಿದೆ.!
ಹೌದು, Swiggy ಮತ್ತು Zomato ನಂತಹ ದೊಡ್ಡ ಕಂಪನಿಗಳು ರೆಸ್ಟೋರೆಂಟ್‌ಗಳಿಂದ ಕನಿಷ್ಠ 30% ಕಮಿಷನ್ ಪಡೆಯುತ್ತವೆ, ಆದರೆ Rapido ಕಮಿಷನ್ ತೆಗೆದುಕೊಳ್ಳದೆ ಕೇವಲ ನಿಗದಿತ ಶುಲ್ಕವನ್ನು ವಿಧಿಸುತ್ತದೆ. ಇದರಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ಆಹಾರ ಲಭ್ಯವಾಗುತ್ತದೆ ಎಂದು Rapido ಕಂಪನಿ ಹೇಳಿದೆ.
Rapido ಪ್ರಕಾರ, 'Only' ಆ್ಯಪ್‌ನ ಮೂಲಕ ಆಹಾರವನ್ನು ಆರ್ಡರ್ ಮಾಡಿದರೆ, ಸ್ಪರ್ಧಿಗಳಿಗಿಂತ 15% ರಷ್ಟು ಕಡಿಮೆ ಬೆಲೆಯಲ್ಲಿ ಆಹಾರ ಲಭ್ಯವಾಗುತ್ತದೆ. ಇದರ ಜೊತೆಗೆ, ಯಾವುದೇ ಹೆಚ್ಚುವರಿ ಅಥವಾ ಗುಪ್ತ ಶುಲ್ಕಗಳು ಇರುವುದಿಲ್ಲ ಎಂದು ಕಂಪನಿ ಭರವಸೆ ನೀಡಿದೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೂ, ಆಫ್‌ಲೈನ್‌ನಲ್ಲಿ ಸಿಗುವ ದರದಲ್ಲಿಯೇ ಆಹಾರ ಲಭ್ಯವಾಗುವುದು.
ಇದರ ಮತ್ತೊಂದು ವಿಶೇಷ. ಇದು ಬಜೆಟ್ ಸ್ನೇಹಿ ಆಹಾರ ಪ್ರಿಯರಿಗೆ ಆಕರ್ಷಕ ಆಯ್ಕೆಯಾಗಿದೆ, ಏಕೆಂದರೆ ಹೆಚ್ಚಿನ ಭಕ್ಷ್ಯಗಳ ಬೆಲೆ ರೂ. 150ಕ್ಕಿಂತ ಕಡಿಮೆಯಿದೆ. Wow!, Eatfit, Krispy Kreme ಮತ್ತು Faasos ನಂತಹ ಜನಪ್ರಿಯ ಬ್ರ್ಯಾಂಡ್‌ಗಳು ಈಗಾಗಲೇ ಈ ವೇದಿಕೆಯಲ್ಲಿ ಸೇರಿಕೊಂಡಿವೆ.
ಪ್ರಸ್ತುತ, ಈ ಸೇವೆ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮಾತ್ರ ಲಭ್ಯವಿದೆ. ಕೋರಮಂಗಲ, HSR ಲೇಔಟ್ ಮತ್ತು BTM ಲೇಔಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದರ ಸೇವೆಗಳು ಪ್ರಾರಂಭವಾಗಿವೆ. Google Play Store ನಲ್ಲಿ ಈ ಆ್ಯಪ್ ಈಗಾಗಲೇ ಲಭ್ಯವಿದ್ದು, Android ಬಳಕೆದಾರರು ಇದನ್ನು ಡೌನ್‌ಲೋಡ್ ಮಾಡಬಹುದು. ಆದರೆ, ಸದ್ಯಕ್ಕೆ iPhone ಬಳಕೆದಾರರಿಗೆ ಈ ಆ್ಯಪ್ ಲಭ್ಯವಿಲ್ಲ.
ಕಂಪನಿ ತನ್ನ ಅಸ್ತಿತ್ವದಲ್ಲಿರುವ ದ್ವಿಚಕ್ರ ವಾಹನಗಳ ನೆಟ್‌ವರ್ಕ್ ಅನ್ನು ಆಹಾರ ವಿತರಣೆಗೂ ಬಳಸಿಕೊಳ್ಳಲಿದೆ. ಇದು Rapido ಗೆ ವಿತರಣಾ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ವರದಿಯ ಪ್ರಕಾರ, 'Only' ಆ್ಯಪ್ ಮೂಲಕ ರೂ. 100ಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ ರೂ. 25 ಮತ್ತು 4 ಕಿಲೋಮೀಟರ್ ವ್ಯಾಪ್ತಿಯೊಳಗಿನ ಸಣ್ಣ ಆರ್ಡರ್‌ಗಳಿಗೆ ರೂ. 20 ವಿತರಣಾ ಶುಲ್ಕವನ್ನು ವಿಧಿಸಲಾಗುತ್ತದೆ. ಪ್ಲಾಟ್‌ಫಾರ್ಮ್ ಶುಲ್ಕ, ಪ್ಯಾಕೇಜಿಂಗ್ ವೆಚ್ಚ ಅಥವಾ ಇತರ ಯಾವುದೇ ಹೆಚ್ಚುವರಿ ಶುಲ್ಕಗಳು ಇರುವುದಿಲ್ಲ.

ಈ ಹೊಸ ಪ್ರಯತ್ನದೊಂದಿಗೆ, Rapido ಭಾರತದ ಆಹಾರ ವಿತರಣಾ ಮಾರುಕಟ್ಟೆಯಲ್ಲಿ ದೊಡ್ಡ ಸ್ಪರ್ಧೆಯನ್ನು ಹುಟ್ಟುಹಾಕಲು ಸಿದ್ಧವಾಗಿದೆ. ಈ ಹಿಂದೆ Thrive ನಂತಹ ಹಲವು ಕಂಪನಿಗಳು ಈ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸಿ ವಿಫಲವಾಗಿವೆ. ಆದರೆ, Rapido ನ ಶೂನ್ಯ ಕಮಿಷನ್ ಮತ್ತು ಕೈಗೆಟುಕುವ ದರಗಳ ಮಾದರಿಯು ಗ್ರಾಹಕರಿಗೆ ಮತ್ತು ರೆಸ್ಟೋರೆಂಟ್‌ಗಳಿಗೆ ಹೊಸ ಆಯ್ಕೆಗಳನ್ನು ಒದಗಿಸುತ್ತದೆ.
2015 ರಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳೊಂದಿಗೆ ಪ್ರಾರಂಭವಾದ Rapido, ಈಗ ಆಟೋ, ಪಾರ್ಸೆಲ್ ಸೇವೆಗಳ ನಂತರ ಆಹಾರ ವಿತರಣಾ ಮಾರುಕಟ್ಟೆಯಲ್ಲಿ ತನ್ನ ನೆಲೆಯನ್ನು ಕಂಡುಕೊಳ್ಳಲು ಹೊರಟಿದೆ. ಈ ಪ್ರಯತ್ನವು ಆಹಾರ ವಿತರಣಾ ಉದ್ಯಮದಲ್ಲಿ ಯಾವ ರೀತಿಯ ಬದಲಾವಣೆ ತರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಬೈಕ್ ಟ್ಯಾಕ್ಸಿ ಸೇವೆಗಳಿಗೆ ಹೆಸರುವಾಸಿಯಾದ Rapido ಇದೀಗ ಆಹಾರ ವಿತರಣಾ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಬಹುದೆ? ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.


Click it and Unblock the Notifications








