ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ ಸೇವೆ ನೀಡಲು ಮುಂದಾದ ರಾಪಿಡೊ ಸಂಸ್ಥೆ!

|

ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ಆಧಾರಿತ ಸೇವೆಗಳು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿವೆ. ಇನ್ನು ಮೊಬೈಲ್‌ ಆಫ್‌ ಆಧಾರಿತ ಟ್ಯಾಕ್ಸಿ ಸೇವೆ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಈ ಸೇವೆ ವ್ಯಾಪಕವಾಗಿ ಹರಡಿದೆ. ಇನ್ನು ಮೊಬೈಲ್‌ ಆಪ್‌ ಆಧಾರಿತ ಟ್ಯಾಕ್ಸಿ ಸೇವೆಗಳಲ್ಲಿ ರಾಪಿಡೊ ಬೈಕ್‌ ಟ್ಯಾಕ್ಸಿ ಸೇವೆ ಕೂಡ ಹೆಚ್ಚು ಜನಪ್ರಿಯತೆಗಳಿಸಿದೆ. ಸದ್ಯ ಇದೀಗ ರಾಪಿಡೊ ಸಂಸ್ಥೆ ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲು ಜಿಪ್ ಎಲೆಕ್ಟ್ರಿಕ್ ಜೊತೆಗಿನ ಪಾಲುದಾರಿಕೆಯನ್ನು ಪ್ರಕಟಿಸಿದೆ.

ರಾಪಿಡೊ

ಹೌದು, ಬೈಕ್‌ ಟ್ಯಾಕ್ಸಿ ಸಂಸ್ಥೆ ರಾಪಿಡೊ ಭಾರತದಲ್ಲಿ ಎಲೆಕ್ಟ್ರಿಕ್‌ ಬೈಕ್ ಟ್ಯಾಕ್ಸಿ ಸೇವೆ ನೀಡಲು ಮುಂದಾಗಿದೆ. ಇದಕ್ಕಾಗಿ ಜಿಪ್‌ ಎಲೆಕ್ಟ್ರಿಕ್‌ ಸಂಸ್ಥೆ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ಘೋಷಿಸಿದೆ. ಇನ್ನು ಹೊಸದಾಗಿ ಪ್ರಾರಂಭಿಸಲಾದ ಈ ಸೇವೆಯನ್ನು ರಾಪಿಡೋ ಇವಿ ಎಂದು ಹೆಸರಿಸಲಾಗಿದೆ. ಅಲ್ಲದೆ ಮೂರು ತಿಂಗಳ ಪೈಲಟ್ ಚಾಲನೆಯ ಭಾಗವಾಗಿ ಇದು ಮಾರ್ಚ್ 2021 ರಿಂದ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಲಭ್ಯವಿರುತ್ತದೆ. ಹಾಗಾದ್ರೆ ಈ ಸೇವೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಾಪಿಡೊ

ರಾಪಿಡೊ ಸಂಸ್ಥೆ ತನ್ನ ಕ್ಯಾಪ್ಟನ್ ಫ್ಲೀಟ್‌ನ ಭಾಗವಾಗಿ ಜಿಪ್‌ನಿಂದ 100ಕ್ಕೂ ಹೆಚ್ಚು ಸವಾರರು ಮತ್ತು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಆನ್‌ಬೋರ್ಡಿಂಗ್ ಮಾಡಲಿದೆ ಎಂದು ಹೇಳಿದೆ. ದೇಶದಲ್ಲಿ ತನ್ನ ಶ್ರೇಣಿ I ಮಾರುಕಟ್ಟೆಯಲ್ಲಿ ಈ ವ್ಯವಹಾರ ಮಾದರಿಯನ್ನು ಇನ್ನಷ್ಟು ವಿಸ್ತರಿಸಲು ಇಂತಹ ಹೆಚ್ಚಿನ ಇವಿ ಪಾಲುದಾರರನ್ನು ಆನ್-ಬೋರ್ಡ್ ಮಾಡಲು ನೋಡುತ್ತಿದೆ ಎಂದು ಕಂಪನಿ ಹೇಳಿದೆ. ಅಲ್ಲದೆ ಪ್ರಾರಂಭದಲ್ಲಿ ಈ ಹೊಸ ಸೇವೆ ರಾಪಿಡೋ ಅಪ್ಲಿಕೇಶನ್‌ನಲ್ಲಿ ರೈಡ್ ವಿಭಾಗದ ಅಡಿಯಲ್ಲಿ ಲಭ್ಯವಿರಲಿದೆ ಎನ್ನಲಾಗಿದೆ.

ರಾಪಿಡೋ

ಇದು ಕನಿಷ್ಟ ಅನುಕೂಲ ಶುಲ್ಕದೊಂದಿಗೆ ರಾಪಿಡೋ ರೈಡ್ ದರದಲ್ಲಿ ಬೆಲೆಯನ್ನು ಹೊಂದಿದೆ. ಇನ್ನು ಈ ಸೇವೆಯನ್ನು ಬಳಸಲು ಗ್ರಾಹಕರು ತಮ್ಮ ಐಒಎಸ್ ಅಥವಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಮೂಲಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಲ್ಲದೆ ಇವರ ಖಾತೆಗೆ ಲಾಗ್ ಇನ್ ಆಗಬೇಕು ಮತ್ತು ರಾಪಿಡೋ ರೈಡ್ ಅನ್ನು ಕಾಯ್ದಿರಿಸಬೇಕಾಗುತ್ತದೆ. ಇನ್ನು ಈ ಹೊಸ ಎಲೆಕ್ಟ್ರಿಕ್‌ ಟ್ಯಾಕ್ಸಿ ಸೇವೆ ನಗರ ಪ್ರದೇಶದ ಗಾಳಿಯ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ರಾಪಿಡೊ ಸಂಸ್ಥೆ ಅಭಿಪ್ರಾಯ ಪಟ್ಟಿದೆ.

ಎಲೆಕ್ಟ್ರಿಕ್‌‌

ಸದ್ಯ ದೇಶದಲ್ಲಿ ಎಲೆಕ್ಟ್ರಿಕ್‌‌ ಬೈಕ್‌ಗಳಿಗೆ ಹೆಚ್ಚಿನ ಜನಪ್ರಿಯತೆ ಸಿಗುತ್ತಿದೆ. ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಎಲೆಕ್ಟ್ರಿಕ್‌ ಬೈಕ್‌ಗಳ ಸೇವೆ ಮಹತ್ವದಾಗಿದ್ದೆ. ಇನ್ನು ರಾಪಿಡೊ ಸಂಸ್ಥೆಯ ಈ ಹೊಸ ಸೇವೆ ಇದೇ ಮಾರ್ಚ್‌ ತಿಂಗಳಿನಿಂದ ದೆಹಲಿ ಮತ್ತು ಇತರೆ ಪ್ರದೇಶಗಳಲ್ಲಿ ಸೇವೆ ಪ್ರಾರಂಭವಾಗಲಿದೆ. ಇದಲ್ಲದೆ ರಾಪಿಡೊ ಜೊತೆ ಬೈಕು ಟ್ಯಾಕ್ಸಿ ಸೇವೆಗಳೊಂದಿಗೆ ನಮ್ಮ ಸೇವೆ ಇನ್ನಷ್ಟು ಉತ್ತಮಗೊಳ್ಳುವ ನಿರೀಕ್ಷೆ ಇದೆ ಎಂದು ಜಿಪ್‌ ಸಂಸ್ಥೆ ಹೇಳಿಕೊಂಡಿದೆ. ಸದ್ಯ ಬೈಕ್‌ ಟ್ಯಾಕ್ಸಿ ಸೇವೆ ಮೂಲಕ ಪ್ರಸಿದ್ದಿ ಗೊಂಡಿರುವ ರಾಪಿಡೊ ಎಲೆಕ್ಟ್ರಿಕ್‌ ಬೈಕ್‌ ಸೇವೆಯನ್ನು ಎಷ್ಟರ ಮಟ್ಟಿಗೆ ನೀಡಲಿದೆ ಅನ್ನೊದನ್ನ ಕಾದು ನೋಡಬೇಕಿದೆ.

Best Mobiles in India

Read more about:
English summary
Rapido partnership with Zypp Electric to launch a new electric bike taxi service in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X