Subscribe to Gizbot

ತನ್ನದೇ ಆಪ್ ಬಿಡುಗಡೆ ಮಾಡಿದ ಕ್ರಿಕೆಟರ್ ಜಡೇಜಾ!!..ಏನೆನೆಲ್ಲಾ ಇದೆ ಆಪ್‌ನಲ್ಲಿ?

Written By:

ಜನಪ್ರಿಯ ಕ್ರಿಕೆಟ್ ತಂಡದ ಜನಪ್ರಿಯ ಆಲ್ರೌಂಡ್ ಆಟಗಾರ ರವೀಂದ್ರ ಜಡೇಜಾ ತಮ್ಮದೇ ಆಪ್ (jadeja mobile App) ಒಂದನ್ನು ಬಿಡುಗಡೆ ಮಾಡಿದ್ದಾರೆ.! ಆಪ್ ಯುಗದಲ್ಲಿ ಆಪ್ ಮೂಲಕವೇ ತಮ್ಮ ಅಭಿಮಾನಿಗಳನ್ನು ಸಂಪರ್ಕಿಸಲು ಜಡೇಜಾ ಈ ಆಪ್ ಹೊರತಂದಿದ್ದಾಗಿ ಹೇಳಿಕೊಂಡಿದ್ದಾರೆ !

ಈ ಆಪ್‌ ಅನ್ನು ಅಮೆರಿಕದ ಸಾಫ್ಟ್‌ವೇರ್‌ ಕಂಪೆನಿಯೊಂದು ಅಭಿವೃದ್ಧಿಪಡಿಸಿದ್ದು, ಈ ರೀತಿ ಆಪ್ ಹೊಂದಿರುವ ದೇಶದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಜಡೇಜಾ ಪಾತ್ರರಾಗಿದ್ದಾರೆ. ಹಾಗಾಗಿ, ಅಭಿಮಾನಿಗಳು ಆಪ್ ಮೂಲಕವೇ ಜಡೇಜಾ ಅವರನ್ನು ಸಂಪರ್ಕಿಸಬಹುದಾಗಿದೆ.!!

ಇನ್ನು ಈ ಆಪ್ ಇಷ್ಟು ಮಾತ್ರವಲ್ಲದೇ ಇನ್ನು ಹಲವು ಉಪಯೋಗಗಳನ್ನು ಒಳಗೊಂಡಿದ್ದು, ಜಡೇಜಾ ಅವರು ಆಪ್ ಮೂಲಕ ಉದ್ಯಮಕ್ಕೂ ಏನಾದರೂ ಕಾಲಿಟ್ಟಿದ್ದಾರೆ ಎನ್ನುವ ಪ್ರಶ್ನೆ ಕೂಡ ಎದುರಾಗಿದೆ.!! ಹಾಗಾದರೆ, ಆಪ್‌ನಲ್ಲಿ ಏನೆಲ್ಲಾ ಉಪಯೋಗಗಳಿವೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಡೇಜಾ ಜತೆಯಲ್ಲಿ ಮಾತನಾಡಬಹುದು.!!

ಜಡೇಜಾ ಜತೆಯಲ್ಲಿ ಮಾತನಾಡಬಹುದು.!!

ಜಡೇಜಾ ಜತೆಯಲ್ಲಿ ನೇರವಾಗಿ ವಿಡಿಯೊ ಅಥವಾ ಆಡಿಯೊ ಮೂಲಕ ಈ ಆಪ್‌ನಲ್ಲಿ ಮಾತನಾಡಬಹುದಾಗಿದೆ. ನನ್ನ ಅಭಿಮಾನಿಗಳನ್ನು ನೇರವಾಗಿ ಸಂಪರ್ಕ ಮಾಡುವುದಕ್ಕೆ ಈ ಆಪ್ ಉತ್ತಮ ವೇದಿಕೆಯಾಗಿದೆ. ಹಾಗಾಗಿ, ಇದನ್ನು ಅಭಿಮಾನಿಗಳಿಗೆ ಅರ್ಪಿಸಿರುವುದಾಗಿ ಜಡೇಜಾ ತಿಳಿಸಿದ್ದಾರೆ.

ಆಪ್‌ನಲ್ಲಿ ಕ್ರಿಕೆಟ್ ಪಂದ್ಯಗಳ ಮಾಹಿತಿ!!

ಆಪ್‌ನಲ್ಲಿ ಕ್ರಿಕೆಟ್ ಪಂದ್ಯಗಳ ಮಾಹಿತಿ!!

ರವೀಂದ್ರ ಜಡೇಜಾ ಆಪ್‌ನಲ್ಲಿ ಎಲ್ಲಾ ಕ್ರಿಕೆಟ್ ಪಂಧ್ಯಗಳ ಮಾಹಿತಿ ದೊರೆಯಲಿದೆ ಎಂದು ಹೇಳಲಾಗಿದೆ.! ಲೈವ್ ಮ್ಯಾಚ್‌ಗಳು ಮತ್ತು ಹಳೆಯ ಹಾಗೂ ಮುಂದೆ ನಡೆಯಲಿರುವ ಪಂಧ್ಯಗಳ ಬಗ್ಗೆ ಆಪ್‌ನಲ್ಲಿ ಮಾಹಿತಿ ಸಿಗುತ್ತದೆ.!! ಕ್ರಿಕ್‌ಬಜ್ಹ್‌ನಂತೆಯೇ ಇದು ಕೂಡ ಬ್ಯುಸಿನೆಸ್‌ಗಾಗಿಯೇ ಇದೆಯಾ ಎಂಬ ಪ್ರಶ್ನೆ ಮೂಡುತ್ತದೆ.!!

ಎಲ್ಲಾ ಪೋಸ್ಟ್‌ಗಳು ಒಂದೇ ಆಪ್‌ನಲ್ಲಿ!!

ಎಲ್ಲಾ ಪೋಸ್ಟ್‌ಗಳು ಒಂದೇ ಆಪ್‌ನಲ್ಲಿ!!

ಈ ಆಪ್‌ನಲ್ಲಿ ಜಡೇಜಾ ಅವರ ಸಂಪೂರ್ಣ ಬಯೋಡೇಟಾವನ್ನು ಅಪ್‌ಲೋಡ್‌ ಮಾಡಲಾಗಿದೆ. ಜೊತೆಗೆ ಟ್ವೀಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಜಡೇಜಾ ಹಾಕುತ್ತಿದ್ದ ಎಲ್ಲಾ ಪೋಸ್ಟ್‌ಗಳು ಇನ್ಮುಂದೆ ಒಂದೇ ಆಪ್‌ನಲ್ಲಿ ಜನರಿಗೆ ಸಿಗುತ್ತವೆ.!!

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯ!!

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯ!!

ಜಡೇಜಾ ಅವರು ಬಿಡುಗಡೆ ಮಾಡಿರುವ ಜಡೇಜಾ ಆಪ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು, ಆಪ್‌ ಡೌನ್‌ಲೋಡ್ ಮಾಡಿಕೊಳ್ಳಲು ಜಡೇಜಾ ಮೊಬೈಲ್ ಆಪ್ ಎಂದು ಟೈಪ್ ಮಾಡಿ. ಈ ಆಪ್ ಎಲ್ಲಾ ಡಿವೈಸ್‌ಗಳಿಗೂ ಕನೆಕ್ಟ್ ಆಗುತ್ತದೆ.!!

ಓದಿರಿ:ಚೀನಾ ಕಂಪೆನಿಗಳಿಗೆ ಸೆಡ್ಡುಹೊಡೆಯಲು ಸ್ಯಾಮ್‌ಸಂಗ್‌ ಮೊಬೈಲ್ ಬೆಲೆ ಇಳಿಕೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Jadeja is the first cricketer of the current Indian cricket team to have his own app.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot