ಇಮೇಲ್‌ ಸಂಶೋಧಕ "ರೆ ಟಾಮ್‌ಲಿನ್‌ಸನ್‌" ನಿಧನ

By Suneel
|

ಇಂದು ಪ್ರತಿನಿತ್ಯ ಹಲವು ಆನ್‌ಲೈನ್‌ ಸಂವಹನ ಮಾಧ್ಯಮಗಳನ್ನು ಬಳಸುತ್ತಿದ್ದೇವೆ. ಪ್ರತಿ ಸಂವಹನ ಮಾಧ್ಯಮಗಳನ್ನ ಬಳಸುವ ನಾವು ಎಲ್ಲಾ ಸಂವಹನ ಮಾಧ್ಯಮಗಳ ಅಭಿವೃದ್ದಿಕಾರರನ್ನು ಖಂಡಿತ ನೆನೆಯಲೇ ಬೇಕು. ಕಾರಣ ಅವರ ಕೊಡುಗೆ ಇಂದು ಅಜರಾಮರ. ಈ ಮಾಹಿತಿ ಹೇಳಲು ಕಾರಣ, ಪ್ರಪಂಚದಾದ್ಯಂತ ಇಂದು ಎಲ್ಲರೂ ಬಳಸುತ್ತಿರುವ "ಇಮೇಲ್‌" ಸೇವೆ ಅಭಿವೃದ್ದಿಗೊಳಿಸಿದ "RIP ರೆ ಟಾಮ್‌ಲಿನ್‌ಸನ್‌"ರವರು ನಿಧನ ಹೊಂದಿದ್ದಾರೆ.

ಆನ್‌ಲೈನ್‌ ಸಂವಹನ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ 'ರೆ ಟಾಮ್‌ಲಿನ್‌ಸನ್‌ " ರವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ ಅವರ ಬಗೆಗಿನ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ರೆ ಟಾಮ್‌ಲಿನ್‌ಸನ್‌

ರೆ ಟಾಮ್‌ಲಿನ್‌ಸನ್‌

ರೆ ಟಾಮ್‌ಲಿನ್‌ಸನ್‌' ರವರು ಇಮೇಲ್‌ ಸೇವೆಯನ್ನು ಆವಿಷ್ಕಾರ ಮಾಡಿದರು.

 ರೆ ಟಾಮ್‌ಲಿನ್‌ಸನ್‌

ರೆ ಟಾಮ್‌ಲಿನ್‌ಸನ್‌

ಕಂಪ್ಯೂಟರ್‌ ಪ್ರೋಗ್ರಾಂನಿಂದ ಪ್ರಪಂಚದ ಸಂವಹನ ವ್ಯವಸ್ಥೆಗೆ ಕೊಡುಗೆ ನೀಡಿದ 'ರೆ ಟಾಮ್‌ಲಿನ್‌ಸನ್‌' ರವರು ದಿನಾಂಕ ಮಾರ್ಚ್‌ 5 2016 ರಂದು ಹೃದಯಘಾತದಿಂದ ನಿಧನರಾಗಿದ್ದಾರೆ. ಟಾಮ್‌ಲಿನ್‌ಸನ್‌'ರವರು ತಮ್ಮ 74 ನೇ ವಯಸ್ಸಿಗೆ ನಿಧನಹೊಂದಿದ್ದಾರೆ.

 ಇಮೇಲ್‌ ಸಂಶೋಧಕ 'ರೆ ಟಾಮ್‌ಲಿನ್‌ಸನ್‌' ನಿಧನ

ಇಮೇಲ್‌ ಸಂಶೋಧಕ 'ರೆ ಟಾಮ್‌ಲಿನ್‌ಸನ್‌' ನಿಧನ

ಎಷ್ಟು ಜನರಿಗೆ ತಿಳಿದಿದೆಯೋ ಗೊತ್ತಿಲ್ಲಾ. ಇಂದು ಸಂವಹನ ಮಾಧ್ಯಮಗಳಲ್ಲಿ ಬಳಸುವ, ಇಮೇಳ್‌ ವಿಳಾಸ ಸೂಚಿಸುವ "@" ಚಿಹ್ನೆಯನ್ನು ಆಯ್ಕೆ ಮಾಡಿ ಬಳಸಿದವರು ಇವರೇ.

 ರೆ ಟಾಮ್‌ಲಿನ್‌ಸನ್‌

ರೆ ಟಾಮ್‌ಲಿನ್‌ಸನ್‌

ರೆ ಟಾಮ್‌ಲಿನ್‌ಸನ್‌'ರವರು ಇಮೇಲ್‌ ಸೇವೆಯನ್ನು 1971 ರಲ್ಲಿ ಆವಿಷ್ಕಾರ ಮಾಡಿದರು. ಒಂದು ನೆಟ್‌ವರ್ಕ್‌ನಿಂದ ಇನ್ನೊಂದು ನೆಟ್‌ವರ್ಕ್‌ನಲ್ಲರುವ ಇತರರಿಗೆ ಆನ್‌ಲೈನ್‌ನಲ್ಲಿ ಸಂದೇಶ ಕಳುಹಿಸುವ ಸೇವೆಯನ್ನು ಮೊದಲಿಗೆ ಬೆಳಕಿಗೆ ತಂದರು.

ರೆ ಟಾಮ್‌ಲಿನ್‌ಸನ್‌

ರೆ ಟಾಮ್‌ಲಿನ್‌ಸನ್‌

ರೆ ಟಾಮ್‌ಲಿನ್‌ಸನ್‌'ರವರು ಇಮೇಲ್‌ ಸೇವೆ ಆವಿಷ್ಕಾರ ಮಾಡಿದಾಗ ARPANET-(ಆಧುನಿಕ ಇಂಟರ್ನೆಟ್‌ ಸಂಶೋಧನೆ ಮತ್ತು ವಿನ್ಯಾಸ ಕಂಪನಿ, ಬೋಲ್ಟ್‌ ಬೆರನೆಕ್‌ ಮತ್ತು ನ್ಯೂಮ್ಯಾನ್‌ (ಪ್ರಸ್ತುತ ಬಿಬಿಎನ್‌ ಟೆಕ್ನಾಲಜೀಸ್)ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ರೆ ಟಾಮ್‌ಲಿನ್‌ಸನ್‌

ರೆ ಟಾಮ್‌ಲಿನ್‌ಸನ್‌

ಟಾಮ್‌ಲಿನ್‌ಸನ್‌ ಇಮೇಲ್‌ ವಿಳಾಸದಲ್ಲಿ @ ಚಿಹ್ನೆಯನ್ನು ಬಳಕೆದಾರರ ಹೆಸರನ್ನು ಹೋಸ್ಟ್ ಹೆಸರಿನಿಂದ ಪ್ರತ್ಯೇಕಗೊಳಿಸಲು ಬಳಸಿದ್ದಾರೆ.

ರೆ ಟಾಮ್‌ಲಿನ್‌ಸನ್‌

ರೆ ಟಾಮ್‌ಲಿನ್‌ಸನ್‌

1990'ರಲ್ಲಿ ಇಮೇಲ್‌ ಇಂಟರ್ನೆಟ್‌ನ ಆಧಾರವಾಗಿ ಹೊರಹೊಮ್ಮಿತು, ಟಾಮ್‌ಲಿನ್‌ಸನ್‌ 2012ರಲ್ಲಿ ಇಂಟರ್ನೆಟ್‌ ಗೆ ಅಧಿಕೃತವಾಗಿ ಇಮೇಲ್‌ ಅನ್ನು ಪ್ರಖ್ಯಾತವಾಗಿ ಸೇರಿಸಿದರು ಎನ್ನಲಾಗಿದೆ. ಆದರೆ ವಾಸ್ತವವಾಗಿ ಇಮೇಲ್‌ ಅನ್ನು 1971ರಲ್ಲೇ ಕಳುಹಿಸಲಾಗಿತ್ತು ಎನ್ನಲಾಗಿದೆ.

 ರೆ ಟಾಮ್‌ಲಿನ್‌ಸನ್‌

ರೆ ಟಾಮ್‌ಲಿನ್‌ಸನ್‌

ಇಂದು 1.5 ಶತಕೋಟಿಗಿಂತ ಹೆಚ್ಚು ಜನರು ಸಾಂಪ್ರಾದಾಯಿಕವಾಗಿ ಇಮೇಲ್‌ ಅನ್ನು ಸಂವಹನಕ್ಕಾಗಿ ಬಳಸುತ್ತಿದ್ದಾರೆ ಅವರೆಲ್ಲರೂ ಸಹ ಇಂದು ಟಾಮ್‌ಲಿನ್‌ಸನ್‌'ರವರಿಗೆ ಅವರ ನಿಧನದ ಪ್ರಯುಕ್ತ ಧನ್ಯವಾದಗಳ ಸಹಿತ ಶ್ರದ್ಧಾಂಜಲಿ ಅರ್ಪಿಸಬೇಕಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

English summary
Ray Tomlinson, the creator of email, selector of @ symbol, has died. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X