RBI ನಿಂದ ಹೊಸ ಪ್ರಕಟಣೆ; ಫೋನ್‌ಪೇ, ಗೂಗಲ್ ಪೇ ಬಳಸೋರು ಈ ಸುದ್ದಿ ಓದಲೇಬೇಕು!
ಭಾರತೀಯ ರಿಸರ್ವ್ ಬ್ಯಾಂಕ್ (RBI) ಯುಪಿಐ ಪಾವತಿ ಅಪ್ಲಿಕೇಶನ್ ಬಳಸುವವರಿಗೆ ಗುಡ್‌ನ್ಯೂಸ್ ನೀಡಿದೆ. ಈಗಾಗಲೇ ಫೋನ್‌ಪೇ, ಪೇಟಿಎಂ ಮತ್ತು ಗೂಗಲ್ ಪೇ ಅಪ್ಲಿಕೇಶನ್‌ಗಳಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಯುಪಿಐ ಲೈಟ್ ಆಯ್ಕೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇದರಿಂದ ಬಳಕೆದಾರರಿಗೆ ಇನ್ನಷ್ಟು ಲಾಭವಾಗೋದು ಗ್ಯಾರಂಟಿ ಎನ್ನಲಾಗಿದೆ.
ಹೌದು, ಯುಪಿಐ ಪಾವತಿ ಆಯ್ಕೆಯಲ್ಲಿ RBI ಹೊಸ ಬದಲಾವಣೆಗಳನ್ನು ಪರಿಚಯಿಸಿದೆ. ಯುಪಿಐ ಪಿನ್ ನಮೂದಿಸದಯೇ 200ರೂ. ವರೆಗೆ ಹಣ ಪಾವತಿಸಲು ಅನುಮತಿಸುವ ಯಪಿಐ ಲೈಟ್‌ನಲ್ಲಿ ಇದೀಗ ಇನ್ನಷ್ಟು ಹಣ ಪಾವತಿಸಬಹುದಾಗಿದೆ. ಇದು ಸುಲಭ ಮತ್ತು ವೇಗವಾದ ಪಾವತಿಗೆ ಅನುಕೂಲವಾಗಲಿದೆ. ಹಾಗಾದ್ರೆ RBI ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಹೊಸದಾಗಿ ಪರಿಚಯಿಸಿರುವ ಬದಲಾವಣೆಗಳು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯುಪಿಐ ವ್ಯವಸ್ಥೆಯಲ್ಲಿ RBIನಿಂದ ಹೊಸ ಬದಲಾವಣೆಗಳು
RBI ಗವರ್ನರ್ ಶಕ್ತಿಕಾಂತ ದಾಸ್ ಯುಪಿಐನಲ್ಲಿ ಹೊಸ ಪ್ರಮುಖ ಬದಲಾವಣೆಗಳನ್ನು ತಂದಿರುವುದಾಗಿ ಪ್ರಕಟಿಸಿದ್ದಾರೆ. ಅದರಂತೆ UPI ಲೈಟ್ ಮಿತಿಯನ್ನು ಇದೀಗ 200ರೂ. ಗಳಿಂದ 500ರೂ.ಗಳಿಗೆ ಏರಿಸಲಾಗಿದೆ. ಅಂದರೆ ಇನ್ಮುಂದೆ ನೀವು ಯುಪಿಐ ಲೈಟ್ ಆಯ್ಕೆಯಲ್ಲಿ ಪಿನ್ ನಮೂದಿಸದೆ 500ರೂ ಗಳ ತನಕ ಪಾವತಿಸಲು ಅನುಮತಿಸಲಿದೆ. ಆದರೆ ನೀವು ಯುಪಿಐ ಲೈಟ್ ಮೂಲಕ ಪಾವತಿಸುವ ಹಣದ ವಿವರಗಳು ಕಾಣುವುದಿಲ್ಲ. ಇದು ಕ್ಲೀನರ್ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳಲ್ಲಿ ಸಹಾಯ ಮಾಡುತ್ತದೆ. ಇದರಿಂದ ನೀವು ಸಣ್ಣ ಪ್ರಮಾಣದ ವಹಿವಾಟುಗಳನ್ನು ನಡೆಸುವಾಗ 500ರೂ.ಗಳ ತನಕ ಪಾವತಿಸಬಹುದಾಗಿದೆ.
AI ಬಳಸಿಕೊಂಡು UPI ಸಂವಾದಾತ್ಮಕ ಪಾವತಿಗಳು
ಇದಲ್ಲದೆ RBI ಶೀಘ್ರದಲ್ಲೇ ಯುಪಿಐ ಪಾವತಿ ಬಳಕೆದಾರರಿಗಾಗಿ 'ಸಂಭಾಷಣೆ ಪಾವತಿ' ಟೆಕ್ನಾಲಜಿಯನ್ನು ಪರಿಚಯಿಸುವುದಕ್ಕೆ ಅವಕಾಶ ನೀಡಿದೆ. ಇದರಲ್ಲಿ ಯುಪಿಐ ಪಾವತಿಯನ್ನು ಪ್ರಾರಂಭಿಸಲು ಮತ್ತು ಪೂರ್ಣಗೊಳಿಸುವ ಮುನ್ನ ಎಐ ವ್ಯವಸ್ಥೆಯೊಂದಿಗೆ ಮಾತನಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಆರ್‌ಬಿಐ ಈ ತಂತ್ರಜ್ಞಾನದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೆಚ್ಚಿನ ವಿವರಗಳು ಬಹಿರಂಗವಾಗುವ ಸಾಧ್ಯತೆಯಿದೆ.
UPI ಗಾಗಿ NFC ಬೆಂಬಲ
ಇನ್ನು ಯುಪಿಐ ಪಾವತಿ ವ್ಯವಸ್ಥೆಯಲ್ಲಿ RBI ಜಾರಿಗೆ ತಂದಿರುವ ಪ್ರಮುಖ ಬದಲಾವಣೆಗಳಲ್ಲಿ ಇದು ಕೂಡ ಒಂದಾಗಿದೆ. ಅಂದರೆ ನಿಯರ್ ಫೀಲ್ಡ್ ಕಮ್ಯುನಿಕೇಷನ್ (NFC) ಮೂಲಕ ಆಫ್‌ಲೈನ್ UPI ಪಾವತಿಗಳನ್ನು ಪರಿಚಯಿಸಿದೆ. ಇಂಟರ್‌ನೆಟ್ ಕಡಿಮೆ ಇರುವ ಅಥವಾ ಇಂಟರ್‌ನೆಟ್ ಇಲ್ಲದೆ ಇರುವ ಪ್ರದೇಶದಲ್ಲೂ ಯುಪಿಐ ಪಾವತಿ ಮಾಡುವುದಕ್ಕೆ ಇದು ಅವಕಾಶ ನೀಡಲಿದೆ. ಈ ಹೊಸ ಆಯ್ಕೆಯು ನಿಮಗೆ UPI ಲೈಟ್ ಮೂಲಕ ಲಭ್ಯವಾಗುವ ಸಾದ್ಯತೆಯಿದೆ. ಇದರಲ್ಲಿ ಬಳಕೆದಾರರು ತಮ್ಮ ಡಿವೈಸ್ ವ್ಯಾಲೆಟ್‌ಗೆ ಸಮತೋಲನವನ್ನು ಸೇರಿಸಬೇಕಾಗುತ್ತದೆ. ನಂತರ ಇಂಟರ್‌ನೆಟ್ ಇಲ್ಲದೆ ಹೋದರೂ ಕೂಡ ಪಾವತಿಯನ್ನು ಮಾಡಬಹುದಾಗಿದೆ.

UPI ಲೈಟ್ ಅಂದರೆ ಏನು? ಇದರ ಬಗ್ಗೆ ನಿಮಗೆ ಈ ವಿಚಾರ ತಿಳಿದಿರಲೇಬೇಕು?
UPI Lite ಮೂಲಕ ನೀವು ಪಿನ್ ನಮೂದಿಸದೇ ಹಣ ಪಾವತಿಸುವುದಕ್ಕೆ ಅವಕಾಶವಿದೆ. ಅಷ್ಟೇ ಅಲ್ಲದೆ ಕ್ಲೀನರ್ ಬ್ಯಾಂಕ್ ಸ್ಟೇಟ್‌ಮೆಂಟ್ ಒದಗಿಸಲು ಸಣ್ಣ ಪ್ರಮಾಣದ ವಹಿವಾಟುಗಳನ್ನು ದಾಖಲಿಸುವುದಿಲ್ಲ. ಇನ್ನು ನೀವು UPI ಲೈಟ್ ವ್ಯಾಲೆಟ್‌ನಲ್ಲಿ ಬಳಕೆದಾರರು ಗರಿಷ್ಠ 2,000 ರೂ.ಗಳನ್ನು ಇಡಬಹುದು. ಆದರೆ ಒಂದು ಬಾರಿ 200ರೂ.ಗಳನ್ನು ಪಾವತಿಸಬಹುದಾಗಿತ್ತು, ಆದರೆ ಇನ್ಮುಂದೆ 500ರೂ.ಗಳನ್ನು ಪಾವತಿಸುವುದಕ್ಕೆ ಅವಕಾಶವಿದೆ. ಇದಲ್ಲದೆ ಒಬ್ಬರು 24 ಗಂಟೆಗಳ ಒಳಗೆ 4,000 ರೂ.ವರೆಗೆ ಖರ್ಚು ಮಾಡುವುದಕ್ಕೆ ಕೂಡ ಅವಕಾಶ ನೀಡಲಾಗಿದೆ.


Click it and Unblock the Notifications








