Home
ಸುದ್ದಿಜಾಲ

UPI: ಖುಷಿ ಸುದ್ದಿ.. PhonePe, Google Pay, BHIM, Paytm ಪಾವತಿ ತುಂಬಾ ಸುಲಭ!

ಯುಪಿಐ ಬಳಕೆದಾರರಿಗೆ ಖುಷಿ ಸುದ್ದಿ! ಯುಪಿಐ (UPI) ಸೇವೆಗಳಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ಆರ್‌ಬಿಐ, ಶುಭ ಸುದ್ದಿ ನೀಡಿದೆ. ಯುಪಿಐ ಲೈಟ್ ಇ-ಮ್ಯಾಂಡೇಟ್ (UPI LITE e-Mandante) ಅನ್ನು ಆರ್‌ಬಿಐ (RBI) ಘೋಷಸಿದೆ. ಇದರೊಂದಿಗೆ ಯುಪಿಐ ಹಣ ಪಾವತಿ (Payment) ವ್ಯವಸ್ಥೆ ಬಳಕೆದಾರರಿಗೆ ಇನ್ನಷ್ಟು ಸರಳ ಆಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಅವರು ಇಂದು ಯುಪಿಐ ಲೈಟ್ ಇ-ಮ್ಯಾಂಡೇಟ್ (UPI LITE e-Mandante) ಅನ್ನು ಪ್ರಕಟಿಸಿದ್ದಾರೆ.

ಹೌದು, ಆರ್‌ಬಿಐ ಬ್ಯಾಂಕ್ ಗ್ರಾಹಕರಿಗೆ ನೀಡಿರುವ ಭರ್ಜರಿ ಸಿಹಿ ಸುದ್ದಿ ಇದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಈ ಮಹತ್ವದ ನಿರ್ಧಾರದಿಂದ ಎಷ್ಟೋ ಮಂದಿಗೆ ನೆಮ್ಮದಿ ಸಿಕ್ಕಿದೆ. ಆರ್‌ಬಿಐನ ಈ ತೀರ್ಮಾನದಿಂದ PhonePay, Google Pay, BHIM ಮತ್ತು Paytm ಬಳಕೆದಾರರಿಗೆ ಪರಿಹಾರ ಸಿಗಲಿದೆ. ಹಾಗಿದ್ರೆ, RBI ತೆಗೆದುಕೊಂಡ ನಿರ್ಧಾರವೇನು? ಇದರಿಂದ ಯಾರಿಗೆ ಲಾಭ? ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

UPI: ಖುಷಿ ಸುದ್ದಿ.. PhonePe, Google Pay, BHIM, Paytm ಪಾವತಿ ತುಂಬಾ ಸುಲಭ!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ತನ್ನ ನೀತಿ ಪರಾಮರ್ಶೆಯ ಫಲಿತಾಂಶವನ್ನು ಪ್ರಕಟಿಸಿದೆ. RBI ಯುಪಿಐ ಲೈಟ್‌ಗೆ ಸಂಬಂಧಿಸಿದಂತೆ ಇ-ಮ್ಯಾಂಡೇಟ್ ಸೇವೆಗಳನ್ನು ತರುತ್ತಿದೆ ಎಂದು ಹೇಳೀದೆ. ಇದು ವಹಿವಾಟುಗಳನ್ನು ಸರಳಗೊಳಿಸುತ್ತದೆ. UPI ಲೈಟ್ ಸೇವೆಗಳನ್ನು ಮೊದಲು ಸೆಪ್ಟೆಂಬರ್ 2022 ರಲ್ಲಿ ಲಭ್ಯಗೊಳಿಸಲಾಯಿತು. ಇದರಿಂದ ಸಣ್ಣಪುಟ್ಟ ವಹಿವಾಟುಗಳು ಶೀಘ್ರವಾಗಿ ನಡೆಯುತ್ತವೆ. UPI ಲೈಟ್ ಸೇವೆಗಳಿಗೆ PIN ನಮೂದಿಸುವ ಅಗತ್ಯವಿಲ್ಲ. ಆದ್ದರಿಂದ ಪಾವತಿಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಬಹುದು.

ಯುಪಿಐ ಲೈಟ್ ಸೇವೆಗಳನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ RBI ಈ ಸೇವೆಗಳನ್ನು ಪರಿಚಯಿಸಿದೆ. ಅದರಂತೆ ಇ-ಮ್ಯಾಂಡೇಟ್ ಸೇವೆಗಳನ್ನು ಆರಂಭಿಸಲಾಗಿದೆ. ಯುಪಿಐ ಲೈಟ್ ವ್ಯಾಲೆಟ್‌ಗಳನ್ನು ಈಗ ಸ್ವಯಂಚಾಲಿತವಾಗಿ ರೀಚಾರ್ಜ್ ಮಾಡಬಹುದು. ಈ ಕಾರಣದಿಂದಾಗಿ, ಬ್ಯಾಂಕ್ ಖಾತೆಯಿಂದ ಹಣವು ಸ್ವಯಂಚಾಲಿತವಾಗಿ ಮೆಂಟೇನ್ ವಾಲೆಟ್‌ಗೆ ಹಿಂತಿರುಗುತ್ತದೆ ಮತ್ತು ನಿಗದಿತ ಮೊತ್ತವನ್ನು ಕಡಿಮೆ ಮಾಡುತ್ತದೆ.

ಯುಪಿಐ ಲೈಟ್ ಅಂದರೆ ಏನು?

2022ರ ಸೆಪ್ಟಂಬರ್‌ನಲ್ಲಿ ಯುಪಿಐ ಪಾವತಿ ಆ್ಯಪ್‌ಗಳಲ್ಲಿ ಲೈಟ್ ಫೀಚರ್ (UPI LITE) ಪರಿಚಯಿಸಲಾಗಿತ್ತು. ಲೈಟ್ ಖಾತೆಯಲ್ಲಿ 2,000 ರೂ.ವರೆಗೆ ಹಣ ಶೇಖರಿಸಿಡಬಹುದು. 200 ರೂ.ಗಿಂತ ಕಡಿಮೆ ಮೊತ್ತದ ವಹಿವಾಟಿಗೆ ಲೈಟ್ ಮೂಲಕ ಪಿನ್ ನಮೂದಿಸುವ ಅವಶ್ಯಕತೆ ಇಲ್ಲದೇ ಹಣ ಪಾವತಿಸುವ ಅವಕಾಶ ಕೊಡಲಾಗಿತ್ತು. ಬಳಿಕ, ಇದರ ಮಿತಿಯನ್ನು 500 ರೂ.ಗೆ ಹೆಚ್ಚಿಸಲಾಯಿತು. ಈಗ ಇ-ಮ್ಯಾಂಡೇಟ್ ಮಾಡುವುದರಿಂದ 2,000 ರೂ.ವರೆಗೆ ಹಣವನ್ನು ಸ್ವಯಂಚಾಲಿತವಾಗಿ ಸೇರಿಸಲು ಬ್ಯಾಂಕ್‌ಗಳಿಗೆ ನಾವು ಸೂಚಿಸಬಹುದು.

ಯುಪಿಐ ಲೈಟ್‌ನಿಂದ ಅನುಕೂಲ ಏನು?

ಸಾಮಾನ್ಯವಾಗಿ ಈಗ ಮಾರುಕಟ್ಟೆಯಲ್ಲಿ ನಗದು ಹಣ ಬಳಕೆ ತುಂಬಾ ಕಡಿಮೆ ಆಗಿದೆ. ಸಣ್ಣ ಸಣ್ಣ ಮೊತ್ತದ ವಹಿವಾಟುಗಳಲ್ಲೂ ಈಗ ಯುಪಿಐ ಮೂಲಕವೇ ಹಣ ಪಾವತಿಸುವುದು ಹೆಚ್ಚಾಗಿದೆ. ಪ್ರತೀ ಬಾರಿಯೂ ಹಣ ಪಾವತಿಸುವಾಗ ಬ್ಯಾಂಕ್ ಖಾತೆಯಿಂದ ಪಡೆಯಬೇಕಾಗುತ್ತದೆ. ಇದನ್ನು ತಪ್ಪಿಸಲು ಯುಪಿಐ ಆ್ಯಪ್‌ಗಳು ವ್ಯಾಲಟ್ ಪರಿಚಯಿಸಿದವು. ಫೋನ್ ಪೆ, ಪೇಟಿಎಂನಲ್ಲಿ ವ್ಯಾಲಟ್ ಬಂದವು. ಬಳಿಕ, ಯುಪಿಐ ಲೈಟ್ ಎಂಬ ಫೀಚರ್ ಅನ್ನು ಪರಿಚಯಿಸಲಾಯಿತು. ಆದ್ರೆ, ಇದರಲ್ಲಿ 2,000 ರೂ.ವರೆಗೆ ಮಾತ್ರ ತುಂಬಿಸಿಡಬಹುದು.

UPI ಮತ್ತು UPI ಲೈಟ್ ನಡುವಿನ ವ್ಯತ್ಯಾಸವೇನು?

UPI ಮತ್ತು UPI ಲೈಟ್ ಡಿಜಿಟಲ್ ಪಾವತಿ ವ್ಯವಸ್ಥೆಯ ಎರಡು ಆವೃತ್ತಿಗಳು. UPI ಬ್ಯಾಂಕ್ ಖಾತೆಗಳ ನಡುವೆ ರಿಯಲ್ ಟೈಮ್ ವರ್ಗಾವಣೆಯನ್ನು ಮಾಡಬಹುದು. ಇದು ದಿನಕ್ಕೆ 1 ಲಕ್ಷದ ವಹಿವಾಟಿನ ಮಿತಿಯನ್ನು ಹೊಂದಿದೆ. ಆದರೆ, UPI ಲೈಟ್ ಫೀಚರ್‌ ಅನ್ನು ಸಣ್ಣ ಸಣ್ಣ ವಹಿವಾಟುಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಪ್ರತಿ ವಹಿವಾಟಿಗೆ 500 ರೂ. ಮತ್ತು ವ್ಯಾಲೆಟ್‌ಗೆ ನಿತ್ಯ 4,000 ರೂ.ವರೆಗೆ ವಹಿವಾಟಿನ ಮಿತಿಯನ್ನು ನೀಡಲಾಗಿದೆ.

Best Mobiles in India

English summary
RBI has announced the integration of UPI Lite with the e-mandate framework. This will enable automatic replenishment of UPI Lite balances.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+