ವಂಚನೆ ಎಸ್‌ಎಂಎಸ್‌, ಕರೆಗಳ ಬಗ್ಗೆ ಜಾಗೃತಿ ಮೂಡಿಸಲಿದೆ ಆರ್‌ಬಿಐ!!

ನಾಗರೀಕರು ಆನ್‌ಲೈನ್ ಅಥವಾ ಇತರ ವಂಚಕರ ಮೋಸದ ಬಲೆಗೆ ಬೀಳದಂತೆ ಗ್ರಾಹಕರಿಗೆ ಎಸ್‌ಎಂಎಸ್‌ ಮತ್ತು ಇಮೇಲ್‌ ಮೂಲಕ ಮಾಹಿತಿ ಒದಗಿಸುವ ನೂತನ ಕಾರ್ಯಕ್ರಮವನ್ನು ಆರ್‌ಬಿಐ ಹಮ್ಮಿಕೊಂಡಿದೆ.

|

ದೇಶದಲ್ಲಿ ನಡೆಯುತ್ತಿರುವ ವಂಚನೆಗಳನ್ನು ನಿಂತ್ರಿಸುವ ಸಲುವಾಗಿ, ವಂಚನೆ ಉದ್ದೇಶದ ಎಸ್‌ಎಂಎಸ್‌, ಮೊಬೈಲ್‌ ಕರೆ ಮತ್ತು ಇ-ಮೇಲ್‌ಗಳ ಬಗ್ಗೆ ಬ್ಯಾಂಕ್‌ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಭಾರತೀಯ ರಿಸರ್ವ್‌ ಬ್ಯಾಂಕ್ ಶೀಘ್ರದಲ್ಲಿಯೇ ಹೊಸದೊಂದ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದೆ.!!

ನಾಗರೀಕರು ಆನ್‌ಲೈನ್ ಅಥವಾ ಇತರ ವಂಚಕರ ಮೋಸದ ಬಲೆಗೆ ಬೀಳದಂತೆ ಗ್ರಾಹಕರಿಗೆ ಎಸ್‌ಎಂಎಸ್‌ ಮತ್ತು ಇಮೇಲ್‌ ಮೂಲಕ ಮಾಹಿತಿ ಒದಗಿಸುವ ನೂತನ ಕಾರ್ಯಕ್ರಮವನ್ನು ಆರ್‌ಬಿಐ ಹಮ್ಮಿಕೊಂಡಿದ್ದು, ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಆರ್‌ಬಿಐ ಏನು ಹೇಳುತ್ತೆ ಕೇಳಿ!!

ಆರ್‌ಬಿಐ ಏನು ಹೇಳುತ್ತೆ ಕೇಳಿ!!

ವಂಚಕರ ಮೋಸದ ಬಲೆಗೆ ಬೀಳದಂತೆ ಗ್ರಾಹಕರಿಗೆ ಎಸ್‌ಎಂಎಸ್‌ ಮತ್ತು ಇಮೇಲ್‌ ಮೂಲಕ ಮಾಹಿತಿ ಒದಗಿಸುವ ನೂತನ ಕಾರ್ಯಕ್ರಮಕ್ಕೆ ಆರ್‌ಬಿಐ ‘ಸುನೋ ಆರ್‌ಬಿಐ ಕ್ಯಾ ಕೆಹ್ತಾ ಹೈ' (ಆರ್‌ಬಿಐ ಏನು ಹೇಳುತ್ತೆ ಕೇಳಿ) ಎಂದು ಹೆಸರಿಟ್ಟಿದೆ.!!

ಜಾಗೃತಿ ಅಭಿಯಾನ ಉದ್ದೇಶ!!

ಜಾಗೃತಿ ಅಭಿಯಾನ ಉದ್ದೇಶ!!

ಲಾಟರಿ ಹೊಡೆದಿದೆ, ಡಿಸ್ಕೌಂಟ್ಸ್ ಇದೆ ಹಾಗೂ ಬ್ಯಾಂಕ್ ಅಧಿಕಾರಿ ಎಂದೆಲ್ಲಾ ಹೇಳಿ ಆಧಾರ್, ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ ವಿವರಗಳನ್ನು ಪಡೆದು ವಂಚಿಸುವವರ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವುದು ಆರ್‌ಬಿಐ ಸುನೋ ಆರ್‌ಬಿಐ ಕ್ಯಾ ಕೆಹ್ತಾ ಹೈ ಜಾಗೃತಿ ಅಭಿಯಾನದ ಉದ್ದೇಶವಾಗಿದೆ.!!

‘ಆರ್‌ಬಿಐಸೇ’ ಹೆಸರಿನಲ್ಲಿ ಸಂದೇಶ!!

‘ಆರ್‌ಬಿಐಸೇ’ ಹೆಸರಿನಲ್ಲಿ ಸಂದೇಶ!!

ವಂಚಿಸುವವರ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸಲು ಆರ್‌ಬಿಐ ಸಂದೇಶಗಳನ್ನು ಕಳುಹಿಸಲಿದ್ದು, ಬರುವ ಎಸ್‌ಎಂಎಸ್‌ಗಳು ‘ಆರ್‌ಬಿಐಸೇ' (RBISAY) ಹೆಸರಿನಲ್ಲಿ ಇರಲಿವೆ. ಆಮಿಷ ಒಡ್ಡಲು ವಂಚಕರು ಬಳಸುವ ಎಸ್‌ಎಂಎಸ್‌ ವಿಧಾನವನ್ನೇ ಆರ್‌ಬಿಐ ಬಳಸಿಕೊಳ್ಳುತ್ತಿದೆ.!!

ಮಿಸ್ಡ್ ಕಾಲ್‌ ಕೊಟ್ಟು ಮಾಹಿತಿ ಪಡೆಯಿರಿ!

ಮಿಸ್ಡ್ ಕಾಲ್‌ ಕೊಟ್ಟು ಮಾಹಿತಿ ಪಡೆಯಿರಿ!

ಎಸ್‌ಎಂಎಸ್‌ ಮಾತ್ರವಲ್ಲದೇ ಗ್ರಾಹಕರು 86919 60000 ಮೊಬೈಲ್‌ ಸಂಖ್ಯೆಗೆ ಮಿಸ್ಡ್‌ ಕಾಲ್‌ ಕೊಟ್ಟು ವಂಚಕರ ಎಸ್‌ಎಂಎಸ್‌, ಇ-ಮೇಲ್‌ ಮತ್ತು ಕರೆಗಳ ಬಗ್ಗೆ ಮಾಹಿತಿ ಪಡೆಯಬಹುದು. ಇಲ್ಲಿ ಬ್ಯಾಂಕ್‌ಗಳ ನಿಯಂತ್ರಣ ಕ್ರಮಗಳು ಮತ್ತು ಸೌಲಭ್ಯಗಳ ಬಗ್ಗೆ ಸಹ ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತದೆ.!!

</a></strong><a class=6,499 ರೂ.ಗೆ ಲಾಂಚ್ ಆದ 'ಎಲುಗಾ ಐ5'!..ರೆಡ್ಮಿ 4, ಮೊಟೊ ಸಿ ಪ್ಲಸ್‌ ಫೋನ್‌ಗಳಿಗೆ ಸ್ಪರ್ಧಿ!!" title="6,499 ರೂ.ಗೆ ಲಾಂಚ್ ಆದ 'ಎಲುಗಾ ಐ5'!..ರೆಡ್ಮಿ 4, ಮೊಟೊ ಸಿ ಪ್ಲಸ್‌ ಫೋನ್‌ಗಳಿಗೆ ಸ್ಪರ್ಧಿ!!" loading="lazy" width="100" height="56" />6,499 ರೂ.ಗೆ ಲಾಂಚ್ ಆದ 'ಎಲುಗಾ ಐ5'!..ರೆಡ್ಮಿ 4, ಮೊಟೊ ಸಿ ಪ್ಲಸ್‌ ಫೋನ್‌ಗಳಿಗೆ ಸ್ಪರ್ಧಿ!!

Best Mobiles in India

English summary
The central bank plans to educate customers against frauds through SMSes, emails and phone calls. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X