ನಾವು ಈ-ಮೇಲ್, ಎಸ್.ಎಂ.ಎಸ್ ಯಾರಿಗೂ ಮಾಡಲ್ಲ:ಅರ್.ಬಿ.ಐ

Posted By: Staff
ನಾವು ಈ-ಮೇಲ್, ಎಸ್.ಎಂ.ಎಸ್ ಯಾರಿಗೂ ಮಾಡಲ್ಲ:ಅರ್.ಬಿ.ಐ

ಇತ್ತೀಚಿಗೆ ನಿಮಗ್ಯಾರಿಗಾದರೂ ಹಣ ಬಂದಿದೆ, ಲಾಟರಿ ಹೊಡೆದಿದೆ ಅಂತ ಈ- ಮೇಲ್ ನಲ್ಲಿ ಅಥವಾ ಎಸ್.ಎಂ.ಎಸ್ ನಲ್ಲಿ ಅರ್.ಬಿ.ಐ ಹೆಸರು ಉಪಯೋಗಿಸಿ ಕಳುಹಿಸಿದ್ದರೆ ಮೊದಲು ಅದನ್ನ ಡಿಲೀಟ್ ಮಾಡಿ ಎಂಬ ಎಚ್ಚರಿಕೆಯ ಸಂದೇಶ ಕೊಟ್ಟಿದೆ ಭಾರತೀಯ ರಿಸರ್ವ್ ಬ್ಯಾಂಕ್ (ಅರ್.ಬಿ.ಐ).

ನಾವು ಯಾವುದೇ ವ್ಯಕ್ತಿಯ ಖಾತೆಯನ್ನೂ ನೋಡಿಕೊಳ್ಳುವುದಿಲ್ಲ ಇಲ್ಲವೆ ವ್ಯವಹಾರ ಮಾಡಲು ನಮ್ಮ ಬ್ಯಾಂಕ್ ನ ಅಧಿಕಾರಿಗಳು ಈ-ಮೇಲ್ ಅಥವಾ ಎಸ್.ಎಂ.ಎಸ್ ಕಳಿಸಿ ಹಣ ಕೇಳುವುದಿಲ್ಲವೆಂದು ಅದು ಸ್ಪಷ್ಟಪಡಿಸಿದೆ. ಆ ರೀತಿ ನಿಮ್ಮ ಗಮನಕ್ಕೆ ಬಂದಲ್ಲಿ ಹತ್ತಿರದ ಪೋಲೀಸ್ ಠಾಣೆಗೆ ದೂರು ನೀಡಿ ಎಂದು ಆಗ್ರಹಿಸಿದೆ.

ಅಂತರ್ಜಾಲದಲ್ಲಿ ಹಲವಾರು ಹೂಡಿಕೆದಾರರು ಈ ರೀತಿ ಆನ್ಲೈನ್ ನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆಗೊಳಗಾಗಿದ್ದಾರೆ. ನೀವು ಎಚ್ಚರವಾಗಿ.

ನಿಮಗೆ ಯಾವುದೇ ರೀತಿಯ ಸಂಶಯವಿದ್ದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನ ಈ ಕೊಂಡಿಯನ್ನ ಕ್ಲಿಕ್ ಮಾಡಬಹುದು- http://rbi.org.in/home.aspx

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot