ರಿಲಯನ್ಸ್ ನಿಂದ ರೂ.16 ಗೆ 1GB 4G ಡೇಟಾ..!!!!
ರಿಲಯನ್ಸ್ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಅಚ್ಚರಿಯ ಕೊಡುಗೆಯನ್ನು ನೀಡಲು ಮುಂದಾಗಿದ್ದು, ಆಫರ್ ವೊಂದರಲ್ಲಿ ರೂ.16.66ಕ್ಕೆ 1GB 4G ಡೇಟಾವನ್ನು ತ್ವರೆ ಮಾಡಲಿದೆ.
ದೇಶದಲ್ಲಿ ರಿಲಯನ್ಸ್ ಜಿಯೋ ಸದ್ದು ಮಾಡುತ್ತಿರುವ ಮಾದರಿಯಲ್ಲೇ ರಿಲಯನ್ಸ್ ಆರ್ಕಾಮ್ ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ಸೂಚನೆಯನ್ನು ನೀಡಿದ್ದು, ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಅಚ್ಚರಿಯ ಕೊಡುಗೆಯನ್ನು ನೀಡಲು ಮುಂದಾಗಿದ್ದು, ಆಫರ್ ವೊಂದರಲ್ಲಿ ರೂ.16.66ಕ್ಕೆ 1GB 4G ಡೇಟಾವನ್ನು ತ್ವರೆ ಮಾಡಲಿದೆ.
ಪೊಸ್ಟ್ ಪೇಯ್ಡ್ ಗ್ರಾಹಕರಿಗೆ ಒಂದು ವರ್ಷದ ಅವಧಿಗೆ 28% ಕೊಡುಗೆಯನ್ನು ನೀಡಲಾಗಿದ್ದು, ಒಟ್ಟಿಗೆ ಮೂರು ಡೇಟಾ ಆಫರ್ ಗಳನ್ನು ಬಿಟ್ಟಿದ್ದು, ಗ್ರಾಹಕರಿಗೆ ಹೆಚ್ಚಿನ ಆಯ್ಕೆಯ ಸ್ವಾತಂತ್ರವನ್ನು ನೀಡಲು ಮುಂದಾಗಿದೆ.

ಮೊದಲಿಗೆ ರೂ.499 ಪ್ಲಾನ್:
ಆರ್‌ಕಾಮ್ ಮೊದಲಿಗೆ ರೂ.499 ಆಫರ್ ಘೋಷಣೆ ಮಾಡಿದ್ದು, 30 ದಿನಗಳ ಅವಧಿಗೆ ಇದರಲ್ಲಿ 30GB 4G ಡೇಟಾವನ್ನು ನೀಡಲಿದೆ. ಇದಲ್ಲದೇ ಅನ್‌ಲಿಮಿಟೆಡ್ ವಾಯ್ಸ್ ಕರೆಯನ್ನು ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಅಲ್ಲದೇ ಎಲ್ಲಾ ರೋಮಿಂಗ್ ಅನ್ನು ಕಿತ್ತು ಹಾಕಿದೆ. ಅದರೊಂದಿಗೆ 3000 ಎಸ್‌ಎಂಎಸ್ ಕಳುಹಿಸುವ ಅವಕಾಶವನ್ನು ನೀಡಿದೆ.

ರೂ.399 ಪ್ಲಾನ್:
ರೂ.399 ಆಫರ್ ಘೋಷಣೆ ಮಾಡಿದ್ದು, 30 ದಿನಗಳ ಅವಧಿಗೆ ಇದರಲ್ಲಿ 15GB 4G ಡೇಟಾವನ್ನು ನೀಡಲಿದೆ. ಇದಲ್ಲದೇ ಅನ್‌ಲಿಮಿಟೆಡ್ ವಾಯ್ಸ್ ಕರೆಯನ್ನು ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಅಲ್ಲದೇ ಎಲ್ಲಾ ರೋಮಿಂಗ್ ಉಚಿತವಾಗಿದ್ದು, ಉಚಿತವಾಗಿ 3000 ಎಸ್‌ಎಂಎಸ್ ಕಳುಹಿಸಬಹುದಾಗಿದೆ.

ರೂ.239 ಪ್ಲಾನ್:
ರೂ.239 ಆಫರ್ ನಲ್ಲಿ 30 ದಿನಗಳ ಅವಧಿಗೆ ಇದರಲ್ಲಿ 6GB 4G ಡೇಟಾವನ್ನು ನೀಡಲಿದೆ. ಇದಲ್ಲದೇ ಅನ್‌ಲಿಮಿಟೆಡ್ ವಾಯ್ಸ್ ಕರೆಯನ್ನು ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಅದರೊಂದಿಗೆ ಉಚಿತ 100 ಎಸ್‌ಎಂಎಸ್ ಕಳುಹಿಸುವ ಅವಕಾಶವನ್ನು ನೀಡಿದೆ.


Click it and Unblock the Notifications








