ರಿಲಯನ್ಸ್ BIG TV ಖರೀದಿಸಿದ ದೈತ್ಯ ಮೀಡಿಯಾ ಕಂಪನಿ..!
ದೇಶಿಯ ಟೆಲಿಕಾಂ ವಲಯದಲ್ಲಿ ಕಾಣುತ್ತಿದ್ದ ಬದಲಾವಣೆಯೂ ಸದ್ಯ DTH ಲೋಕದಲ್ಲಿ ಕಾಣಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ DTH ಲೋಕದಲ್ಲಿ ಸಾಕಷ್ಟು ಬದಾಲವಣೆಗಳು ಜರುಗುತ್ತಿದೆ. ಮೊನ್ನೇ ತಾನೆ ರಿಲಯನ್ಸ್ BIG TV DTH ಮುಚ್ಚಲಿದೆ ಎನ್ನುವ ಸುದ್ದಿ ಕೇಳಿ ಬಂದಿತ್ತು.

ಓದಿರಿ: ಜಿಯೋ ಒಂದೇ ಏಟಿಗೆ ಟೆಲಿಕಾಂ-ಮೊಬೈಲ್ ಲೋಕ ಶಾಕ್: 'ಸಂಪೂರ್ಣ ಉಚಿತ ಜಿಯೋ ಆಂಡ್ರಾಯ್ಡ್ ಫೋನ್ ಶೀಘ್ರ'
ಈಗ ಮತ್ತೊಂದು ಸುದ್ದಿ ಲಭ್ಯವಾಗಿದ್ದು, ರಿಲಯನ್ಸ್ BIG TV DTHಅನ್ನು ವೆಕಾನ್ ಮಿಡಿಯಾ ಕಂಪನಿಯೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎನ್ನುವ ಸುದ್ದಿಯು ಲಭ್ಯವಾಗಿದೆ. ಈ ಹಿಂದೆ ಟಾಟಾ ಸ್ಕೈ ರಿಲಯನ್ಸ್ BIG TV DTH ಅನ್ನು ಖರೀದಿಸಲಿದೆ ಎನ್ನಲಾಗಿತ್ತು.

ವೆಕಾನ್ ಮಿಡಿಯಾ:
ರಿಲಯನ್ಸ್ BIG TV DTH ಸಂಪೂರ್ಣ ಶೇರು ಗಳನ್ನು ವೆಕಾನ್ ಮಿಡಿಯಾ ಖರೀದಿಸಿದೆ ಎನ್ನಲಾಗಿದೆ. ಇನ್ನು ಮುಂದೆ ವೆಕಾನ್ ಮಿಡಿಯಾ BIG TV DTH ಸೇವೆಯನ್ನು ಮುಂದುವರೆಸಿಕೊಂಡು ಹೋಗಲಿದೆ ಎನ್ನಲಾಗಿದೆ.

DTH ಲೋಕದಲ್ಲಿಯೂ ಹೊಸ ಅಲೆ:
ಈಗಾಗಲೇ ಇಂರ್ನೆಟ್ ಟಿವಿ ಸೇವೆ ನೀಡುವ ಕಂಪನಿಗಳು ಹೆಚ್ಚಾಗಿರುವುದಲ್ಲದೇ DTH ಲೋಕಕ್ಕೆ ಜಿಯೋ ಎಂಟ್ರಿ ಪಡೆಯಲು ತುದಿಗಾಲಿನಲ್ಲಿ ನಿಂತಿದೆ ಈ ಹಿನ್ನಲೆಯಲ್ಲಿ ಹೊಸ ಅಲೆಯೊಂದು ನಿರ್ಮಾಣವಾಗಿದೆ.

1.2 ಮಿಲಿಯನ್ ಚಂದಾದರರು:
BIG TV DTH ಸೇವೆಯನ್ನು1.2 ಮಿಲಿಯನ್ ಚಂದಾದರರು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಚಂದಾದದರು ವೆಕಾನ್ ಮಿಡಿಯಾ DTH ಸೇವೆಯನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಶೀಘ್ರವೇ ಜಿಯೋ ಸೇವೆ:
ಜಿಯೋ ಶೀಘ್ರವೇ ತನ್ನ ಸೇವೆಯನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ, ಮೂಲಗಳ ಪ್ರಕಾರ ಹೊಸ ವರ್ಷದ ಆರಂಭದಲ್ಲಿ ತನ್ನ ಸೇವೆಯನ್ನು ಜಿಯೋ ನೀಡಲಿದೆ ಎನ್ನಲಾಗಿದೆ.


Click it and Unblock the Notifications








