ಭಾರತದಲ್ಲಿ ಬಿಡುಗಡೆಯಾಯ್ತು ರಿಯಲ್‌ಮಿ 10 ಪ್ರೊ ಸರಣಿ! ಸಂಚಲನ ಸೃಷ್ಟಿಸುವ ಫೀಚರ್ಸ್‌!

|

ಭಾರತದ ಮಾರುಕಟ್ಟೆಗೆ ರಿಯಲ್‌ಮಿ ಕಂಪನಿಯ ಬಹು ನಿರೀಕ್ಷಿತ ರಿಯಲ್‌ಮಿ 10ಪ್ರೊ ಸರಣಿ ಎಂಟ್ರಿ ನೀಡಿದೆ. ತನ್ನ ಫೀಚರ್ಸ್‌ಗಳ ಮೂಲಕ ಈಗಾಗಲೇ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಈ ಸರಣಿ ಅಂತಿಮವಾಗಿ ಭಾರತದಲ್ಲಿ ಬಿಡುಗಡೆಯಾಗಿದೆ. ಇನ್ನು ಈ ಸರಣಿಯಲ್ಲಿ ರಿಯಲ್‌ಮಿ 10 ಪ್ರೊ + 5G ಮತ್ತು 10 ಪ್ರೊ 5G ಫೋನ್‌ಗಳು ಪರಿಚಯಿಸಲಾಗಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿವೆ.

ರಿಯಲ್‌ಮಿ

ಹೌದು, ರಿಯಲ್‌ಮಿ 10 ಪ್ರೊ ಸರಣಿ ಭಾರತದಲ್ಲಿ ಲಾಂಚ್‌ ಆಗಿದೆ. ಈ ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳು 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿವೆ. ಆದರೆ ಭಿನ್ನ ಮಾದರಿಯ ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿವೆ. ಇದರಲ್ಲಿ ರಿಯಲ್‌ಮಿ 10 ಪ್ರೊ + 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 1080 SoC ಪ್ರೊಸೆಸರ್‌ ಹೊಂದಿದೆ. ಆದರೆ ರಿಯಲ್‌ಮಿ 10 ಪ್ರೊ 5G ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಯಲ್‌ಮಿ 10 ಪ್ರೊ+ 5G ಸ್ಮಾರ್ಟ್‌ಫೋನ್‌

ರಿಯಲ್‌ಮಿ 10 ಪ್ರೊ+ 5G ಸ್ಮಾರ್ಟ್‌ಫೋನ್‌

ರಿಯಲ್‌ಮಿ 10ಪ್ರೊ + 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಕರ್ವ್ಡ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಮತ್ತು 2,160Hz PWM ಡಿಮ್ಮಿಂಗ್‌ ಹೊಂದಿದೆ. ಇದು ಆಕ್ಟಾ-ಕೋರ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 1080 5G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಮಾಲಿ G68 GPU ಸಪೋರ್ಟ್‌ ಅನ್ನು ಪಡೆದಿದೆ. ಹಾಗೆಯೇ 8GB RAM ಮತ್ತು 256GB ಇನ್‌ಬಿಲ್ಟ್‌ ಸ್ಟೋರೇಜ್‌ ಹೊಂದಿದೆ. ಇದಲ್ಲದೆ ಡೈನಾಮಿಕ್ RAM ವಿಸ್ತರಣೆ ಮೂಲಕ 16GB ವರೆಗೆ RAM ಅನ್ನು ವಿಸ್ತರಿಸಬಹುದಾಗಿದೆ.

ರಿಯಲ್‌ಮಿ

ಇನ್ನು ರಿಯಲ್‌ಮಿ 10 ಪ್ರೊ+ 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ HM6 ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W SuperVOOC ಚಾರ್ಜಿಂಗ್ ಬೆಂಬಲಿಸಲಿದೆ. ಇದರಿಂದ 47 ನಿಮಿಷಗಳಲ್ಲಿ 100% ಚಾರ್ಜ್‌ ಮಾಡಬಹುದಾಗಿದೆ. ಇನ್ನು ಈ ಫೋನ್‌ ಡ್ಯುಯಲ್-ಬ್ಯಾಂಡ್ Wi-Fi ಬೆಂಬಲಿಸಲಿದ್ದು, ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಪಡೆದಿದೆ.

ರಿಯಲ್‌ಮಿ 10 ಪ್ರೊ 5G ಸ್ಮಾರ್ಟ್‌ಫೋನ್‌

ರಿಯಲ್‌ಮಿ 10 ಪ್ರೊ 5G ಸ್ಮಾರ್ಟ್‌ಫೋನ್‌

ರಿಯಲ್‌ಮಿ 10 ಪ್ರೊ 5G ಸ್ಮಾರ್ಟ್‌ಫೋನ್‌ 6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080x 2,400ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಪಡೆದಿದೆ. ಇದು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 93.76 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಈ ಫೋನ್‌ 6nm ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಹಾಗೆಯೇ 8GB RAM ಮತ್ತು 128GB ಇನ್‌ಬಿಲ್ಟ್‌ ಸ್ಟೋರೇಜ್‌ ಪಡೆದುಕೊಂಡಿದೆ. ಇದಲ್ಲದೆ RAM ಅನ್ನು 16GB ವರೆಗೆ ವಿಸ್ತರಿಸಬಹುದಾಗಿದೆ. ಇದರೊಂದಿಗೆ ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸ್ಟೋರೇಜ್‌ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಸ್ಮಾರ್ಟ್‌ಫೋನ್‌

ರಿಯಲ್‌ಮಿ 10 ಪ್ರೊ 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ HM6 ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W SuperVOOC ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇದರಿಂದ ಕೇವಲ 20 ನಿಮಿಷಗಳಲ್ಲಿ 50% ಚಾರ್ಜ್‌ ಮಾಡಬಹುದಾಗಿದೆ.

ಬೆಲೆ ಎಷ್ಟಿದೆ?

ಬೆಲೆ ಎಷ್ಟಿದೆ?

ರಿಯಲ್‌ಮಿ 10 ಪ್ರೊ+ 5G ಸ್ಮಾರ್ಟ್‌ಫೋನ್‌ 6GB RAM + 128GB ಸ್ಟೋರೇಜ್ ಆಯ್ಕೆಯ ಬೆಲೆ 24,999ರೂ.ಆಗಿದೆ. ಇದರ 8GB RAM + 128GB ಸ್ಟೋರೇಜ್ ಮಾದರಿಯ ಬೆಲೆ 25,999ರೂ. ಆಗಿದೆ. ಇನ್ನು 8GB RAM + 256GB ಸ್ಟೋರೇಜ್ ಮಾಡೆಲ್ ಆಯ್ಕೆಯ ಬೆಲೆ 27,999ರೂ. ಹೊಂದಿದೆ.
ಇನ್ನು ರಿಯಲ್‌ಮಿ 10ಪ್ರೊ 5G ಸ್ಮಾರ್ಟ್‌ಫೋನ್‌ ಬೇಸ್ ಮಾಡೆಲ್‌ 6GB RAM + 128GB ಸ್ಟೋರೇಜ್ ಮಾದರಿಯ ಬೆಲೆ 18,999ರೂ.ಆಗಿದೆ. ಇದರ 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 19,999ರೂ. ಆಗಿದೆ.

ಲಭ್ಯತೆ ಯಾವಾಗ?

ಲಭ್ಯತೆ ಯಾವಾಗ?

ಈ ಎರಡೂ ಸ್ಮಾರ್ಟ್‌ಫೋನ್‌ಗಳು ಡಾರ್ಕ್ ಮ್ಯಾಟರ್, ಹೈಪರ್‌ಸ್ಪೇಸ್ ಮತ್ತು ನೆಬ್ಯುಲಾ ಬ್ಲೂ ಬಣ್ಣ ಆಯ್ಕೆಗಳಲ್ಲಿ ಬರಲಿವೆ. ಈ ಫೋನ್‌ಗಳು ಫ್ಲಿಪ್‌ಕಾರ್ಟ್‌ ಮತ್ತು ರಿಯಲ್‌ಮಿ.ಕಾಮ್‌ ಮತ್ತು ಪ್ರಮುಖ ರಿಟೇಲ್‌ ಸ್ಟೋರ್‌ಗಳಲ್ಲಿ ಸೇಲ್‌ ಆಗಲಿವೆ. ಇದರಲ್ಲಿ ರಿಯಲ್‌ಮಿ 10ಪ್ರೊ+ 5G ಸ್ಮಾರ್ಟ್‌ಫೋನ್‌ ಡಿಸೆಂಬರ್ 14 ರಿಂದ ಮಾರಾಟವಾಗಲಿದೆ. ಆದರೆ ರಿಯಲ್‌ಮಿ 10ಪ್ರೊ 5G ಸ್ಮಾರ್ಟ್‌ಫೋನ್‌ ಡಿಸೆಂಬರ್ 16 ರಿಂದ ಲಭ್ಯವಿರುತ್ತದೆ.

Best Mobiles in India

English summary
Realme 10 Pro+ 5G, Realme 10 Pro 5G Launched in India: Specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X