ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದ ರಿಯಲ್‌ಮಿ; ಪವರ್‌ಫುಲ್ ಪ್ರೊಸೆಸರ್ ವಿಶೇಷ!
ರಿಯಲ್‌ಮಿ ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಇದೀಗ ಹೊಸ ರಿಯಲ್‌ಮಿ 11 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ಹೌದು, ರಿಯಲ್‌ಮಿ 11 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ಸೂಪರ್‌ವೋಕ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ 11 ಡಿಸ್‌ಪ್ಲೇ ಮತ್ತು ರಚನೆ ಹೇಗಿದೆ?
ರಿಯಲ್‌ಮಿ 11 ಸ್ಮಾರ್ಟ್‌ಫೋನ್ 6.72 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ.
ರಿಯಲ್‌ಮಿ 11 ಪ್ರೊಸೆಸರ್ ಬಲವೇನು?
ರಿಯಲ್‌ಮಿ 11 ಸ್ಮಾರ್ಟ್‌ಫೋನ್ 6nm ಮೀಡಿಯಾಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13-ಆಧಾರಿತ Realme UI 4.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಜೊತೆಗೆ ಬಳಕೆಯಾಗದ ಸಂಗ್ರಹಣೆಯನ್ನು ಬಳಸಿಕೊಂಡು ವಾಸ್ತವಿಕವಾಗಿ RAM ಅನ್ನು ವಿಸ್ತರಿಸಬಹುದಾಗಿದೆ.
ರಿಯಲ್‌ಮಿ 11 ಕ್ಯಾಮೆರಾ ಸೆಟ್‌ಅಪ್
ರಿಯಲ್‌ಮಿ 11 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಮೂರನೇ ಕ್ಯಾಮೆರಾ ಸಹ 2ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ರಿಯಲ್‌ಮಿ 11 ಬ್ಯಾಟರಿ ಬ್ಯಾಕ್‌ಅಪ್
ರಿಯಲ್‌ಮಿ 11 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ಸೂಪರ್‌ವೋಕ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್/ಡ್ಯುಯಲ್ ಸ್ಟ್ಯಾಂಡ್‌ಬೈ 5G ಕನೆಕ್ಟಿವಿಟಿ, 4G LTE, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್ 5.2, NFC, GPS, A-GPS ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಇದಲ್ಲದೆ ಆಂಬಿಯೆಂಟ್ ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, ಗೈರೊಸ್ಕೋಪ್, ಅಕ್ಸೆಲೆರೊಮೀಟರ್ ಮತ್ತು ಇ-ದಿಕ್ಸೂಚಿಗಳನ್ನು ಒಳಗೊಂಡಿದೆ.
ರಿಯಲ್‌ಮಿ 11 5G ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ 11 5G ಸ್ಮಾರ್ಟ್‌ಫೋನ್ ಜಾಗತಿಕವಾಗಿ ಬಿಡುಗಡೆಯಾಗಿದೆ. ಇದರ ಬೆಲೆ 8GB + 256GB ಸ್ಟೋರೇಜ್ ಆಯ್ಕೆಗೆ NTD 8990 (ಅಂದಾಜು 23,438ರೂ) ಬೆಲೆಗೆ ನಿಗದಿಪಡಿಸಲಾಗಿದೆ. ಇದು ಡಾನ್ ಗೋಲ್ಡ್ ಮತ್ತು ಮೂನ್ ನೈಟ್ ಡಾರ್ಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಭಾರತಕ್ಕೆ ಎಂಟ್ರಿ ನೀಡುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇನ್ನು ರಿಯಲ್‌ಮಿ ಕಂಪೆನಿ ರಿಯಲ್‌ಮಿ 11 ಪ್ರೊ 5G ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕರ್ವ್ಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080 x 2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಆಕ್ಟಾ-ಕೋರ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇನ್ನು ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 100-ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W SuperVOOC ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.


Click it and Unblock the Notifications








