ರಿಯಲ್‌ಮಿ 12 5Gಯ ಕುತೂಹಲಕಾರಿ ಫೀಚರ್ಸ್ ವಿವರ ಬಹಿರಂಗ: ಏನಿದರ ಕೆಲಸ
ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ರಿಯಲ್‌ಮಿ 12 5G ಸರಣಿ ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಾಂಕ ನಿಗಧಿಯಾಗಿದೆ. ಈಗಾಗಲೆ ಲಾಂಚ್ ಈವೆಂಟ್‌ಗೆ ವೇದಿಕೆ ಸಿದ್ಧವಾಗಿದೆ. ಇದೇ ಸಂದರ್ಭದಲ್ಲಿ ರಿಯಲ್‌ಮಿ 12 5G ಸ್ಮಾರ್ಟ್‌ಫೋನ್‌ನಲ್ಲಿ ವಿಶೇಷ ಫೀಚರ್ಸ್ ಬಹಿರಂಗವಾಗಿದೆ. ಅದರಂತೆ ಈ ಫೋನ್ ಕಸ್ಟಮೈಸ್ ಮಾಡಬಹುದಾದ ಫಂಕ್ಷನ್ ಹೊಂದಿರುವ "ಡೈನಾಮಿಕ್ ಬಟನ್" ಒಳಗೊಂಡಿದೆ.
ಹೌದು, ರಿಯಲ್‌ಮಿ 12 5G ಸ್ಮಾರ್ಟ್‌ಫೋನ್‌ನಲ್ಲಿ ಡೈನಾಮಿಕ್ ಬಟನ್ ಫೀಚರ್ಸ್ ನೀಡಲಾಗಿದೆ. ಇದು ಆಪಲ್ ಐಫೋನ್‌ಗಳಿಂದ ಪ್ರಭಾವಿತವಾಗಿದೆ ಎನ್ನಲಾಗಿದೆ. ಈ ಮೂಲಕ ರಿಯಲ್‌ಮಿ 12 5G ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನವೇ ಟೆಕ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಈ ಬಟನ್‌ನಿಂದಾಗುವ ಉಪಯೋಗಗಳೇನು? ಇದು ಸ್ಮಾರ್ಟ್‌ಫೋನ್‌ನಲ್ಲಿ ಯಾವ ಡಿಸೈನ್‌ನಲ್ಲಿ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏನಿದು ಡೈನಾಮಿಕ್ ಬಟನ್
ರಿಯಲ್‌ಮಿ 12 5G ಸ್ಮಾರ್ಟ್‌ಫೋನ್‌ನಲ್ಲಿ ಡೈನಾಮಿಕ್ ಬಟನ್ ಇರಲಿದೆ ಎಂದು ವರದಿಯಾಗಿದೆ. ಲಾಂಚ್ ಟೀಸರ್‌ನಲ್ಲಿ ಇದರ ಬಗ್ಗೆ ಸುಳಿವು ನೀಡಲಾಗಿದೆ. ಈ ಬಟನ್ ಪವರ್ ಬಟನ್ ಆಗಿರಲಿದ್ದು, ವಿವಿಧ ತ್ವರಿತ ಕ್ರಿಯೆಗಳಿಗೆ ಪ್ರೋಗ್ರಾಮೆಬಲ್ ಆಗಿ ಗೋಚರಿಸುತ್ತದೆ. ಇದಲ್ಲದೆ ಕ್ಯಾಮರಾ ಶಟರ್, ಫ್ಲ್ಯಾಶ್‌ಲೈಟ್, ಸೈಲೆಂಟ್ ಮೋಡ್, ಏರ್‌ಪ್ಲೇನ್ ಮೋಡ್ ಮತ್ತು ಡೋಂಟ್ ಡಿಸ್ಟರ್ಬ್ ಮೋಡ್ ಸೆಟ್ಟಿಂಗ್ಸ್‌ನಮತಹ ಫಂಕ್ಷನ್‌ಗಳನ್ನು ಕಂಟ್ರೋಲ್ ಮಾಡುವ ಸಾಧ್ಯತೆಯಿದೆ.
ಇನ್ನು ಈ ಡೈನಾಮಿಕ್ ಬಟನ್ ಪರಿಕಲ್ಪನೆಯು ಆಪಲ್‌ನ ಆಕ್ಷನ್ ಬಟನ್ ಮಾದರಿಯಲ್ಲಿರಲಿದೆ. ಈಗಾಗಲೇ ಆಪಲ್ ಕಂಪೆನಿ ಐಫೋನ್ 15 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳಲ್ಲಿ ಆಕ್ಷನ್ ಬಟನ್ ಪರಿಚಯಿಸಿದೆ. ಇದೆ ಮಾದರಿಯ ಪರಿಕಲ್ಪನೆಯಲ್ಲಿ ರಿಯಲ್‌ಮಿ ಡೈನಾಮಿಕ್ ಬಟನ್ ಅಳವಡಿಸಿರುವ ಸೂಚನೆ ದೊರೆತಿದೆ. ಈ ರೀತಿಯ ಫಂಕ್ಷನ್ ಅನ್ನು ಹೆಚ್ಚು ಕೈಗೆಟುಕುವ ಸ್ಮಾರ್ಟ್‌ಫೋನ್ ವಿಭಾಗಗಳಿಗೆ ಪರಿಚಯಿಸಬಹುದು ಎಂದು ವರದಿಯಾಗಿದೆ.

ರಿಯಲ್‌ಮಿ 12+ 5G ಪೀಚರ್ಸ್ ನಿರೀಕ್ಷೆ ಏನು?
ರಿಯಲ್‌ಮಿ 12+ 5G ಸ್ಮಾರ್ಟ್‌ಫೋನ್ 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದ್ದು, 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಲೆವೆಲ್ ಅನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 6nm ಪ್ರೊಸೆಸರ್ ಹೊಂದಿದೆ. ಜೊತೆಗೆ ಮಾಲಿ-G68 MC4 GPU ಸಪೋರ್ಟ್ ಪಡೆದಿದೆ. ಇದು ಆಂಡ್ರಾಯ್ಡ್ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ರಿಯಲ್‌ಮಿ 12+ 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ Sony LYT-600 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹಾಗೂ ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ವೇಗದ ಚಾರ್ಜಿಂಗ್‌ನೊಂದಿಗೆ ಬರಲಿದೆ.
ಸದ್ಯ ಈ ಸ್ಮಾರ್ಟ್‌ಫೋನ್ ಇದೇ ಮಾರ್ಚ್ 6ರಂದು ಬಿಡುಗಡೆ ಆಗಲಿದೆ. ಇದರ ಬೆಲೆ ವಿವರಗಳು ಕೂಡ ಬಿಡುಗಡೆ ದಿನದಂದು ಬಹಿರಂಗವಾಗಲಿದೆ. ಇದಲ್ಲದೆ ಬಿಡುಗಡೆಯ ನಂತರ Realme 12 5G ಫೋನಿನ ಡೈನಾಮಿಕ್ ಬಟನ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.


Click it and Unblock the Notifications








