Home
ಸುದ್ದಿಜಾಲ

ಟೆಕ್‌ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ Realme 12+ 5G ಫೋನ್‌ ಟೀಸರ್‌!

ರಿಯಲ್‌ಮಿ ಕಂಪೆನಿಯ ಬಹು ನಿರೀಕ್ಷಿತ Realme 12+ 5G ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ಧವಾಗಿದೆ. ಈ ಸ್ಮಾರ್ಟ್‌ಫೋನ್‌ ಭಾರತಕ್ಕೆ ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಅನ್ನೊದನ್ನ ರಿಯಲ್‌ಮಿ ಕಂಪೆನಿ ಬಹಿರಂಗಪಡಿಸಿದೆ. ತನ್ನ ಲಾಂಚ್‌ ಟೀಸರ್‌ ಅನ್ನು ಶೇರ್‌ ಮಾಡಿರುವ ರಿಯಲ್‌ಮಿ ಕಂಪೆನಿ ಟೆಕ್‌ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಹೌದು, Realme 12+ 5G ಸ್ಮಾರ್ಟ್‌ಪೋನ್‌ ಲಾಂಚ್‌ ಟೀಸರ್‌ ಬಿಡುಗಡೆ ಆಗಿದೆ. ಇದರ ಲಾಂಚ್‌ ಮೈಕ್ರೋ-ಸೈಟ್ ರಿಯಲ್‌ಮಿ ಇಂಡಿಯಾದ ವೆಬ್‌ಸೈಟ್‌ನಲ್ಲಿ ಲೈವ್ ಆಗಿದೆ. ಇನ್ನು ಈ ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 7050 SoC ಪ್ರೊಸೆಸರ್‌ ವೇಗದೊಂದಿಗೆ ಬರಲಿದೆ ಎನ್ನಲಾಗಿದೆ. ಹಾಗಾದ್ರೆ ರಿಯಲ್‌ಮಿ 12+ 5G ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಕ್‌ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ Realme 12+ 5G ಫೋನ್‌ ಟೀಸರ್‌!

Realme 12+ 5G ಫೀಚರ್ಸ್‌ ನಿರೀಕ್ಷೆ ಏನು?
Realme 12+ 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಪುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿರಲಿದೆ. ಜೊತೆಗೆ ಡಿಸ್‌ಪ್ಲೇಯು 88.1% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದ್ದು, 20:9 ರಚನೆಯ ಅನುಪಾತದಲ್ಲಿದೆ.

Realme 12+ 5G ಪ್ರೊಸೆಸರ್‌ ಯಾವುದು?
Realme 12+ 5G ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್ ಡೈಮೆನ್ಸಿಟಿ 7050SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB, 8GB RAM ಮತ್ತು 128GB ಹಾಗೂ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ.

Realme 12+ 5G ಕ್ಯಾಮೆರಾ ಸೆಟಪ್ ಏನಿದೆ?
Realme 12+ 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ LYT-600 ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್ ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ ಎನ್ನಲಾಗಿದೆ.

ಟೆಕ್‌ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ Realme 12+ 5G ಫೋನ್‌ ಟೀಸರ್‌!

Realme 12+ 5G ಬ್ಯಾಟರಿ ಮತ್ತು ಇತರೆ
Realme 12+ 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 67W SuperVOOC ವೇಗದ ಚಾರ್ಜಿಂಗ್ ಅನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಸ್ಮಾರ್ಟ್‌ಫೋನ್‌ ವೇಗದ ಚಾರ್ಜಿಂಗ್ ವೇಗವನ್ನು ಮೊದಲು FCC ಡೇಟಾಬೇಸ್ ಮೂಲಕ ದೃಢೀಕರಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

Realme 12+ 5G ಬೆಲೆ ಮತ್ತು ಲಭ್ಯತೆ
Realme 12+ 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಮಿಡ್‌ರೇಂಜ್‌ ಬೆಲೆಯಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದೆ ಎಂದು ಅಂದಾಜಿಸಲಾಗಿದೆ.

ಇದಲ್ಲದೆ ರಿಯಲ್‌ಮಿ 12 ಲೈಟ್‌ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಕೂಡ ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ಮಾದರಿ ಸಂಖ್ಯೆಯನ್ನು ಗಮನಿಸಿದ್ರೆ ಇದು ರಿಯಲ್‌ಮಿ C67 (Realme C67) ಗೆ ಹೋಲಿಕೆ ಆಗುತ್ತದೆ ಎಂದು ತಿಳಿದುಬಂದಿದೆ. ಈ ಲೈಟ್‌ ವೇರಿಯಂಟ್‌ ಪ್ರೀಮಿಯಂ ಫೀಚರ್ಸ್‌ಗಳಿಗೆ ಹೊಂದಾಣಿಕೆ ಆಗಲಿದ್ದು, ಸ್ಟೋರೇಜ್‌ ವಿಚಾರದಲ್ಲೂ ಒಂದು ಕೈ ಮುಂದೆ ಇರಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಬಜೆಟ್‌ ಬೆಲೆ ವಿಭಾಗದಲ್ಲಿ ಕಮಾಲ್‌ ಮಾಡಲಿದೆ ಎಂದು ತೋರುತ್ತದೆ.

Best Mobiles in India

English summary
Realme 12+ 5G smartphone is expected to debut soon in India: Expected Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+