Home
ಸುದ್ದಿಜಾಲ

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ರಿಯಲ್‌ಮಿ 12 ಪ್ರೊ 5G: ಕ್ಯಾಮೆರಾ ಪ್ರಿಯರಿಗೆ ಫೀಚರ್ಸ್‌ಗಳ ಹಬ್ಬ!

ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ Realme 12 Pro 5G ಸ್ಮಾರ್ಟ್‌ಫೋನ್‌ ಇದೀಗ ಭಾರತದ ಮೊಬೈಲ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಗುಣಮಟ್ಟವನ್ನೇ ಪ್ರಧಾನವಾಗಿಟ್ಟುಕೊಂಡಿದ್ದು, ಪೋಟ್ರೈಟ್ ಮಾಸ್ಟರ್‌ ಎನಿಸಿಕೊಂಡಿದೆ. ಇದು 120X ಡಿಜಿಟಲ್ ಜೂಮ್ ಅನ್ನು ಸಪೋರ್ಟ್‌ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಹೌದು, ರಿಯಲ್‌ಮಿ 12 ಪ್ರೊ 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 6 ಜನ್‌ 1 5G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗಾದ್ರೆ Realme 12 Pro 5G ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ರಿಯಲ್‌ಮಿ 12 ಪ್ರೊ 5G: ಕ್ಯಾಮೆರಾ ಫೀಚರ್ಸ್‌ಗಳ ಹಬ್ಬ

Realme 12 Pro 5G ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
Realme 12 Pro 5G ಸ್ಮಾರ್ಟ್‌ಫೋನ್‌ 2412 x 1080 ಪಿಕ್ಸೆಲ್ಸ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 6.7 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ OLED ಕರ್ವ್ಡ್‌ ಡಿಸ್‌ಪ್ಲೇ ಆಗಿದೆ. ಇದಲ್ಲದೆ ಡಿಸ್‌ಪ್ಲೇಯು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌, 2160Hz PWM ಡಿಮ್ಮಿಂಗ್‌ ಮತ್ತು 120Hz ರಿಫ್ರೆಶ್ ರೇಟ್‌ ವರೆಗೆ ಬೆಂಬಲವನ್ನು ನೀಡಲಿದೆ.

Realme 12 Pro 5G ಪ್ರೊಸೆಸರ್‌ ಮಾಹಿತಿ
Realme 12 Pro 5G ಸ್ಮಾರ್ಟ್‌ಫೋನ್‌ 4nm ಆರ್ಕಿಟೆಕ್ಚರ್‌ನಲ್ಲಿ ಬಿಲ್ಟ್‌ ಮಾಡಲಾದ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 6 Gen 1 SoC ಪ್ರೊಸೆಸರ್‌ನಲ್ಲಿ ರನ್‌ ಆಗಲಿದೆ. ಇದು AnTuTu ಬೆಂಚ್‌ಮಾರ್ಕ್‌ನಲ್ಲಿ 5,90,000 ಸ್ಕೋರ್ ಮಾಡುತ್ತದೆ ಎಂದು ಹೇಳಲಾಗಿದೆ. ಇನ್ನು ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM + 128GB ಹಾಗೂ 8GB RAM + 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಎರಡು ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ರಿಯಲ್‌ಮಿ 12 ಪ್ರೊ 5G: ಕ್ಯಾಮೆರಾ ಫೀಚರ್ಸ್‌ಗಳ ಹಬ್ಬ

Realme 12 Pro 5G ಕ್ಯಾಮೆರಾ ಸೆಟಪ್‌ ಏನಿದೆ?
Realme 12 Pro 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್‌ ಸೋನಿ IMX 882 ಲೆನ್ಸ್‌ ಹೊಂದಿದೆ. ಎರಡನೇ ಕ್ಯಾಮೆರಾ 32MP ಸೋನಿ IMX 709 ಲೆನ್ಸ್‌ ಹಾಗೂ ಮೀಸಲಾದ ಟೆಲಿಫೋಟೋ ಲೆನ್ಸ್ ಸಹ ಇದೆ. ಮೂರನೇ ಕ್ಯಾಮರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

Realme 12 Pro 5G ಬ್ಯಾಟರಿ ಮತ್ತು ಇತರೆ ಸೌಲಭ್ಯ
Realme 12 Pro 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W SUPERVOOC ಚಾರ್ಜರ್ ಅನ್ನು ಬೆಂಬಲಿಸಲಿದೆ. ಇದರಿಂದ ಕೇವಲ 28 ನಿಮಿಷಗಳಲ್ಲಿ ಸ್ಮಾರ್ಟ್‌ಫೋನ್‌ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ವೈಫೈ, ಹಾಟ್‌ಸ್ಪಾಟ್‌, ಯುಎಸ್‌ಬಿ ಸಿ ಪೋರ್ಟ್‌ ನಂತಹ ಆಯ್ಕೆಗಳನ್ನು ಒಳಗೊಂಡಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ರಿಯಲ್‌ಮಿ 12 ಪ್ರೊ 5G: ಕ್ಯಾಮೆರಾ ಫೀಚರ್ಸ್‌ಗಳ ಹಬ್ಬ

Realme 12 Pro 5G ಬೆಲೆ ಮತ್ತು ಲಭ್ಯತೆ
Realme 12 Pro 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ 8GB RAM+128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 25,999ರೂ ಬೆಲೆಯನ್ನು ಹೊಂದಿದೆ. ಇದರ 8GB RAM+256GB ಸ್ಟೋರೇಜ್ ರೂಪಾಂತರದ ಆಯ್ಕೆಯು 26,999ರೂ ಬೆಲೆಯಲ್ಲಿ ಬರಲಿದೆ. ಈ ಸ್ಮಾರ್ಟ್‌ಫೋನ್‌ Flipkart ಮತ್ತು Realme.com ನಲ್ಲಿ ಫೆಬ್ರವರಿ 6 ರಂದು ಮಧ್ಯಾಹ್ನ 12 ಗಂಟೆಗೆ ಮಾರಾಟವಾಗಲಿದೆ. ಇದನ್ನು ಸಬ್‌ಮರೀನ್ ಬ್ಲೂ ಮತ್ತು ನ್ಯಾವಿಗೇಟರ್ ಬೀಜ್ ಕಲರ್‌ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

ಲಾಂಚ್‌ ಆಫರ್‌ ಏನಿದೆ?
Realme 12 Pro 5G ಸ್ಮಾರ್ಟ್‌ಫೋನ್‌ನ ಫಸ್ಟ್‌ ಸೇಲ್‌ ಸಮಯದಲ್ಲಿ ICICI ಬ್ಯಾಂಕ್ ಕಾರ್ಡ್‌ ಮೂಲಕ ಖರೀದಿಸುವವರಿಗೆ 2,000ರೂ ವರೆಗೆ ರಿಯಾಯಿತಿ ದೊರೆಯಲಿದೆ. ಅಲ್ಲದೆ 12 ತಿಂಗಳವರೆಗೆ ನೋ ಕಾಸ್ಟ್‌ EMI ಆಯ್ಕೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Realme 12 Pro 5G with Triple Rear Camera launched in India: Price, specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+