Realme 13 Pro+ 5G ಹೊಸ ಬಣ್ಣದಲ್ಲಿ ಲಾಂಚ್: 3,000 ಡಿಸ್ಕೌಂಟ್; ಆಫರ್ ಕೂಡ ಇದೆ
ರಿಯಲ್‌ಮಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದೆ. ರಿಯಲ್‌ಮಿಯ ಈ ಸ್ಟೈಲಿಶ್ ಫೋನ್ ಮತ್ತೊಂದು ಹೊಸ ಬಣ್ಣದಲ್ಲಿ ಬಿಡುಗಡೆಯಾಗಿದೆ. ಹೌದು, ರಿಯಲ್‌ಮಿ 13 ಪ್ರೊ ಪ್ಲಸ್ 5G (Realme 13 Pro+ 5G) ಅನ್ನು ಭಾರತದಲ್ಲಿ ಜುಲೈ 30 ರಂದು ಬಿಡುಗಡೆ ಮಾಡಲಾಯಿತು. ಇದು Sony LYT ಲೆನ್ಸ್ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಎನಿಸಿಕೊಂಡಿದೆ. ಇದು 12GB RAM ಮತ್ತು 5,200mAh ಬ್ಯಾಟರಿ ಹೊಂದಿದೆ. ಜೊತೆಗೆ, ಸುಧಾರಿತ AI ವೈಶಿಷ್ಟ್ಯಗಳನ್ನು ಸಹ ಹೊಂದಿದೆ.
ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನನ್ನು ಆರಂಭದಲ್ಲಿ ಹಸಿರು ಮತ್ತು ಗೋಲ್ಡ್ ಬಣ್ಣದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಮೊನೆಟ್ ಪರ್ಪಲ್ ಎಂಬ ಮೂರನೇ ಬಣ್ಣದ ಆಯ್ಕೆಯಲ್ಲಿ ಬರುತ್ತದೆ. ಇದೇ ಸೆಪ್ಟೆಂಬರ್ 2 ರಂದು ಮಧ್ಯಾಹ್ನ 12 ಗಂಟೆಗೆ ಮಾರಾಟ ಪ್ರಾರಂಭಿಸಲಿದೆ. ಈ ಹೊಸ ಬಣ್ಣದ ರೂಪಾಂತರವು ಫ್ಲಿಪ್‌ಕಾರ್ಟ್, ರಿಯಲ್‌ಮೆ ಇಂಡಿಯಾ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಈ ಫೋನಿನ ಬೆಲೆ ಮತ್ತು ಆಫರ್‌ಗಳನ್ನು ತಿಳಿಯೋಣ ಬನ್ನಿ.

ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನ್ ಸ್ನಾಪ್‌ಡ್ರಾಗನ್ 7s Gen 2 SoC ಮತ್ತು 12GB RAM ಅನ್ನು ಒಳಗೊಂಡಿದೆ. ಇದು 6.7 ಇಂಚಿನ ಪೂರ್ಣ HD+ AMOLED ಡಿಸ್ಪ್ಲೇ, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 5,200mAh ಬ್ಯಾಟರಿ ಜೊತೆಗೆ, ಸುಧಾರಿತ AI ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಮೊಬೈಲ್ ಪ್ರಿಯರನ್ನು ಆಕರ್ಷಿಸುವಲ್ಲಿ ಸೈ ಎನಿಸಿಕೊಂಡಿದೆ.
ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನಿನ ಬೆಲೆ
ರಿಯಲ್‌ಮಿ 13 ಪ್ರೊ ಪ್ಲಸ್ 5G ಮೊನೆಟ್ ಪರ್ಪಲ್ ಕಲರ್ ಸೆಪ್ಟೆಂಬರ್ 2 ರಂದು ಮಧ್ಯಾಹ್ನ 12 ಗಂಟೆಯಿಂದ ಮಾರಾಟ ಪ್ರಾರಂಭಿಸಲಿದೆ. 8GB RAM ಮತ್ತು 256GB ಸ್ಟೋರೇಜ್ ಬೆಲೆ 32,999 ರೂ. ಇದೆ. 12GB ಮತ್ತು 256GB ಸ್ಟೋರೇಜ್ ಬೆಲೆ 34,999 ರೂ.ಗೆ ಲಭ್ಯವಿರಲಿದೆ. ಈ ಫೋನ್ ಖರೀದಿ ಮೇಲೆ 3,000 ರೂ. ಬ್ಯಾಂಕ್ ಆಫರ್ ಮತ್ತು 4,000 ರೂ. ಎಕ್ಸ್‌ಚೇಂಜ್ ಆಫರ್ ಘೋಷಿಸಲಾಗಿದೆ.
ಮೊನೆಟ್ ಗೋಲ್ಡ್ ಮತ್ತು ಪಚ್ಚೆ ಹಸಿರು = ಸೆಪ್ಟೆಂಬರ್ 2 ರಿಂದ ಮಾರಾಟ
8GB + 256GB ಸ್ಟೋರೇಜ್ ಬೆಲೆ = 34,999 ರೂ.
12GB + 512GB ಸ್ಟೋರೇಜ್ ಬೆಲೆ = 36,999 ರೂ.
ಮೊನೆಟ್ ಗೋಲ್ಡ್, ಪಚ್ಚೆ ಹಸಿರು ಮತ್ತು ಮೊನೆಟ್ ಪರ್ಪಲ್ = ಸೆಪ್ಟೆಂಬರ್ 3 ರಿಂದ ಮಾರಾಟ
8GB + 256GB ಸ್ಟೋರೇಜ್ ಬೆಲೆ = 32,999 ರೂ.
12GB + 256GB ಸ್ಟೋರೇಜ್ ಬೆಲೆ = 34,999 ರೂ.
12GB + 512GB ಸ್ಟೋರೇಜ್ ಬೆಲೆ = 36,999 ರೂ.

ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನಿನ ಫೀಚರ್ಸ್
ಡಿಸ್ಪ್ಲೇ: ಇದು 6.7 ಇಂಚಿನ FullHD+ ಡಿಸ್ಪ್ಲೇ ಹೊಂದಿದೆ. ಈ ಪಂಚ್-ಹೋಲ್ ಶೈಲಿಯ ಡಿಸ್ಲ್ಪೇಯನ್ನು AMOLED ಪ್ಯಾನೆಲ್‌ನಲ್ಲಿ ಮಾಡಲಾಗಿದೆ. ಇದು 2412 x 1080 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 2000nits ಬ್ರೈಟ್‌ನೆಸ್ ಹೊಂದಿದೆ. ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಡಿಸ್ಲ್ಪೇ ರಕ್ಷಣೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ಪಡೆದಿದೆ.
ಪ್ರೊಸೆಸರ್: ಈ ಫೋನ್ Qualcommನ ಸ್ನಾಪ್‌ಡ್ರಾಗನ್ 7S Gen 2 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಆಕ್ಟಾಕೋರ್ ಪ್ರೊಸೆಸರ್ 2.4GHz ಗಡಿಯಾರದ ವೇಗದೊಂದಿಗೆ ನಾಲ್ಕು ARM ಕಾರ್ಟೆಕ್ಸ್-A78 ಕೋರ್‌ಗಳನ್ನು ಮತ್ತು 1.95GHz ಗಡಿಯಾರದ ವೇಗದೊಂದಿಗೆ ನಾಲ್ಕು ARM ಕಾರ್ಟೆಕ್ಸ್-A55 ಕೋರ್‌ಗಳನ್ನು ಒಳಗೊಂಡಿದೆ. ಇದು Adreno 710 GPU ಬೆಂಬಲಿಸುತ್ತದೆ.
ಆಪರೇಟಿಂಗ್ ಸಿಸ್ಟಮ್: ಇದನ್ನು Android 14ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಬ್ರ್ಯಾಂಡ್‌ನ ಸ್ವಂತ Realme UI 5.0 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಕಂಪನಿಯು 2 ವರ್ಷಗಳ OS ನವೀಕರಣಗಳೊಂದಿಗೆ ಮತ್ತು 3 ವರ್ಷಗಳ ಭದ್ರತಾ ನವೀಕರಣಗಳೊಂದಿಗೆ ಪರಿಚಯಿಸಿದೆ.
ಕ್ಯಾಮೆರಾ: ಇದು 50MP ಸೋನಿ LYT-701 ಮುಖ್ಯ ಕ್ಯಾಮೆರಾ ಹೊಂದಿದೆ. ಇದರೊಂದಿಗೆ, 50MP ಸೋನಿ LYT-600 ಪೆರಿಸ್ಕೋಪ್ ಲೆನ್ಸ್ ಇದೆ. ಈ ಎರಡೂ ಕ್ಯಾಮೆರಾ ಸಂವೇದಕಗಳು OIS ತಂತ್ರಜ್ಞಾನವನ್ನು ಹೊಂದಿವೆ. ಫೋನಿನ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. 3x ಆಪ್ಟಿಕಲ್ ಜೂಮ್, 73 ಎಂಎಂ ಫೋಕಲ್ ಲೆಂತ್, ಇನ್-ಸೆನ್ಸರ್ ಜೂಮ್ ತಂತ್ರಜ್ಞಾನದಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಬ್ಯಾಟರಿ: ರಿಯಲ್‌ಮಿ 13 ಪ್ರೊ ಪ್ಲಸ್ 5G 5,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W SuperVOOC ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ.


Click it and Unblock the Notifications








