Home
ಸುದ್ದಿಜಾಲ

Realme 13 Pro+ 5G: 3,000 ಕಡಿಮೆ ಬೆಲೆಗೆ ಮಾರಾಟಕ್ಕೆ ಸಿದ್ಧ! ಆಫರ್ ಕೂಡ ಇದೆ

Realme 13 Pro+ 5G Sale: ಪ್ರಸಿದ್ಧ ಮೊಬೈಲ್ ತಯಾರಕ ರಿಯಲ್‌ಮಿ (Realme) ಕಂಪನಿಯು ಇತ್ತೀಚೆಗೆ ಭಾರತದಲ್ಲಿ ರಿಯಲ್‌ಮಿ 13 ಪ್ರೊ ಪ್ಲಸ್ 5G (Realme 13 Pro+ 5G) ಫೋನನ್ನು ಬಿಡುಗಡೆ ಮಾಡಿದೆ. ಈ Realme 13 Pro Plus ಫೋನ್ Sony LYT ಲೆನ್ಸ್‌ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಎನಿಸಿಕೊಂಡಿದೆ. ಇದು 12GB RAM ಮತ್ತು 5,200mAh ಬ್ಯಾಟರಿ ಹೊಂದಿದೆ. ಜೊತೆಗೆ, ಸುಧಾರಿತ AI ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಈಗಾಗಲೇ, ಮೊಬೈಲ್ ಪ್ರಿಯರನ್ನು ಆಕರ್ಷಿಸಿರುವ ಈ ಸ್ಟೈಲಿಶ್‌ ಫೋನ್‌ ಇದೇ ಆಗಸ್ಟ್ 6 ರಿಂದ ಅಧಿಕೃತವಾಗಿ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಮೂಲಕ ಮೊದಲ ಮಾರಾಟ ಪ್ರಾರಂಭ ಮಾಡಲಿದೆ.

ಹೌದು, ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನ್ ಟಾಪ್ 5 ಫೀಚರ್ಸ್‌ಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮೊದಲನೆಯದಾಗಿ, ಇದು ಎರಡು Sony LYT ಲೆನ್ಸ್‌ಗಳನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಇದು HyperImage+ ತಂತ್ರಜ್ಞಾನವನ್ನು ಹೊಂದಿದೆ. ಜೊತೆಗೆ, ಎಐ (AI) ಅಲ್ಟ್ರಾ ಕ್ಲಾರಿಟಿ, ಎಐ ಸ್ಮಾರ್ಟ್ ರಿಮೂವಲ್ ಮತ್ತು ಎಐ ಆಡಿಯೋ ಜೂಮ್‌ನಂತಹ ಕೃತಕ ಬುದ್ಧಿಮತ್ತೆ ಫೀಚರ್ಸ್‌ಗಳನ್ನು ಸಹ ಹೊಂದಿದೆ. ಈ ಫೋನಿನ ಬೆಲೆ, ಲಭ್ಯತೆ ಮತ್ತು ಆಫರ್‌ಗಳನ್ನು ತಿಳಿಯೋಣ ಬನ್ನಿ.

Realme 13 Pro+ 5G: 3,000 ಕಡಿಮೆ ಬೆಲೆಗೆ ಮಾರಾಟಕ್ಕೆ ಸಿದ್ಧ! ಆಫರ್ ಕೂಡ ಇದೆ

ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನಿನ ಫೀಚರ್ಸ್‌

ಡಿಸ್ಪ್ಲೇ: ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನ್ 6.7 ಇಂಚಿನ FullHD+ ಡಿಸ್ಪ್ಲೇ ಹೊಂದಿದೆ. ಈ ಪಂಚ್-ಹೋಲ್ ಶೈಲಿಯ ಡಿಸ್ಲ್ಪೇಯನ್ನು AMOLED ಪ್ಯಾನೆಲ್‌ನಲ್ಲಿ ಮಾಡಲಾಗಿದೆ. ಇದು 2412 x 1080 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 2000nits ಬ್ರೈಟ್‌ನೆಸ್ ಹೊಂದಿದೆ. ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಡಿಸ್ಲ್ಪೇ ರಕ್ಷಣೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ಪಡೆದಿದೆ.

ಪ್ರೊಸೆಸರ್: ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನ್ Qualcommನ ಸ್ನಾಪ್‌ಡ್ರಾಗನ್ 7S Gen 2 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಆಕ್ಟಾಕೋರ್ ಪ್ರೊಸೆಸರ್ 2.4GHz ಗಡಿಯಾರದ ವೇಗದೊಂದಿಗೆ ನಾಲ್ಕು ARM ಕಾರ್ಟೆಕ್ಸ್-A78 ಕೋರ್‌ಗಳನ್ನು ಮತ್ತು 1.95GHz ಗಡಿಯಾರದ ವೇಗದೊಂದಿಗೆ ನಾಲ್ಕು ARM ಕಾರ್ಟೆಕ್ಸ್-A55 ಕೋರ್‌ಗಳನ್ನು ಒಳಗೊಂಡಿದೆ. ಇದು Adreno 710 GPU ಬೆಂಬಲಿಸುತ್ತದೆ.

ಆಪರೇಟಿಂಗ್ ಸಿಸ್ಟಮ್: ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನನ್ನು Android 14ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಬ್ರ್ಯಾಂಡ್‌ನ ಸ್ವಂತ Realme UI 5.0 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಕಂಪನಿಯು 2 ವರ್ಷಗಳ OS ನವೀಕರಣಗಳೊಂದಿಗೆ ಮತ್ತು 3 ವರ್ಷಗಳ ಭದ್ರತಾ ನವೀಕರಣಗಳೊಂದಿಗೆ ಪರಿಚಯಿಸಿದೆ.

ಸ್ಟೋರೇಜ್: ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನ್‌ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಮೂಲ ಮಾದರಿಯು 8GB RAM ಮತ್ತು 256GB ಸ್ಟೋರೇಜ್ ಹೊಂದಿದೆ. ಇತರ ಎರಡು ರೂಪಾಂತರಗಳು 256GB ಮತ್ತು 512GB ಸ್ಟೋರೇಜ್‌ನೊಂದಿಗೆ 12GB RAM ಹೊಂದಿದೆ.

ಬ್ಯಾಟರಿ: ರಿಯಲ್‌ಮಿ 13 ಪ್ರೊ ಪ್ಲಸ್ 5G 5,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W SuperVOOC ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ.

ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನಿನ ಬೆಲೆ ಮತ್ತು ಲಭ್ಯತೆ

8GB RAM + 256GB ಸ್ಟೋರೇಜ್‌ ಬೆಲೆ = ರೂ. 32,999
12GB RAM + 256GB ಸ್ಟೋರೇಜ್‌ ಬೆಲೆ = ರೂ. 34,999
12GB RAM + 512GB ಸ್ಟೋರೇಜ್‌ ಬೆಲೆ = ರೂ. 36,999

ಈ ರಿಯಲ್‌ಮಿ 13 ಪ್ರೊ ಪ್ಲಸ್ 5G ಫೋನನ್ನು ಮೊನೆಟ್ ಗೋಲ್ಡ್ ಮತ್ತು ಎಮರಾಲ್ಡ್ ಗ್ರೀನ್ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 32,999 ರೂ. ನಿಂದ ಪ್ರಾರಂಭವಾಗುತ್ತದೆ. ಈ ಫೋನ್‌ realme.com, Flipkart ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಆಗಸ್ಟ್ 6 ರಿಂದ ಮಾರಾಟವಾಗಲಿದೆ. ಲಾಂಚ್‌ ಆಫರ್‌ ಭಾಗವಾಗಿ, ಕಂಪನಿಯು 3,000 ರೂಪಾಯಿಗಳ ಡಿಸ್ಕೌಂಟ್‌ ಘೋಷಿಸಿದೆ.

Best Mobiles in India

English summary
Realme 13 Pro+ 5G goes first sale from August 6 via Flipkart: check, Price, discount, Specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+