Home
ಸುದ್ದಿಜಾಲ

ಶೀಘ್ರದಲ್ಲೇ realme 13 Pro+ ಲಾಂಚ್! 50MP 3x ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮರಾ ಸಾಧ್ಯತೆ

ಜಾಗತಿಕ ಮಾರುಕಟ್ಟೆಯಲ್ಲಿ ರಿಯಲ್‌ಮಿ (realme) ಸಂಸ್ಥೆಯ ಮೊಬೈಲ್‌ಗಳಿಗೆ ವಿಶೇಷ ಬೇಡಿಕೆ ಇದೆ. ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿಯೂ ಈ ಸಂಸ್ಥೆಯ ಮೊಬೈಲ್‌ಗಳು ಯಶಸ್ವಿಯಾಗಿವೆ. ಆಗಾಗ ಹೊಸ ಹೊಸ ಸರಣಿಯ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಮೊಬೈಲ್‌ ಗ್ರಾಹಕರನ್ನು ಹಿಡಿದಿಟ್ಟುಕೊಂಡಿದೆ. ಇದೀಗ ರಿಯಲ್‌ಮಿ ಸಂಸ್ಥೆ ತನ್ನ realme 13 Pro+ ಹೆಸರಿನ ನೂತನ ಸ್ಮಾರ್ಟ್‌ಫೋನ್‌ ಒಂದನ್ನು ಸಿದ್ದಪಡಿಸುತ್ತಿರುವ ಕುರಿತು ವದಂತಿಗಳು ಹರಿದಾಡಲು ಪ್ರಾರಂಭಿಸಿದೆ. ಇದೀಗ ಈ ಫೋನ್‌ ಕುರಿತುTENAA ವೆಬ್‌ಸೈಟ್‌ನಲ್ಲಿ ಮಾದರಿ ಸಂಖ್ಯೆಯೊಂದಿಗೆ ಅದರ ವಿನ್ಯಾಸ, ವಿಶೇಷತೆಗಳನ್ನು ಬಹಿರಂಗಪಡಿಸಿದೆ.

ಟೀಸರ್‌ ಬಿಡುಗಡೆಯ ಬಳಿಕ ಇದೀಗ RMX3920 ಮಾದರಿ ಸಂಖ್ಯೆಯೊಂದಿಗೆ realme 13 Pro+ ಅನ್ನು ಚೀನಾದಲ್ಲಿ TENAA / MIIT ಪ್ರಮಾಣೀಕರಿಸಿದೆ ಅದು ಫೋನ್‌ನ ವಿನ್ಯಾಸ ಮತ್ತು ಸಂಪೂರ್ಣ ವಿಶೇಷತೆಗಳನ್ನು ಬಹಿರಂಗಪಡಿಸಿದೆ.

ಬಿಡುಗಡೆಗೂ ಮುನ್ನವೇ realme 13 Pro+ ಸ್ಮಾರ್ಟ್‌ಫೋನ್ ಫೀಚರ್ಸ್ ಲೀಕ್!

ಇದು realme 13 ಸರಣಿಯ ಪೂರ್ವವರ್ತಿಯಂತೆ ಬಾಗಿದ ಡಿಸ್‌ಪ್ಲೇಯನ್ನು ಹೊಂದಿರುವಂತೆ ಘೊಚರಿಸುತ್ತಿದೆ. ಆದರೆ ಕ್ಯಾಮರಾ ಮಾಡ್ಯೂಲ್ ಸುತ್ತಲೂ ಗೋಲ್ಡನ್ ರಿಂಗ್‌ ಜೊತೆಗೆ ಮಧ್ಯದಲ್ಲಿದೆ ಜೋಡಿಸಿರಲಿದೆ. ಮೂರು ಕ್ಯಾಮೆರಾಗಳು ಮತ್ತು ನಾವು ಲೋಗೋದಲ್ಲಿ ನೋಡಿದಂತೆ ಹೈಪರ್ ಇಮೇಜ್ ಜೊತೆಗೆ ಲೋಗೋದ ಟೆಕ್ಸ್ಟ್‌ ಇರಲಿದೆ.

realme 13 Pro+ ಇದು ತನ್ನ ಹಿಂದಿನ ಸರಣಿಯಂತೆ Snapdragon 7s Gen 2 SoC ಯನ್ನೇ ಉಳಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ, ಆದರೆ ಹೊಸ 50MP ಹಿಂಬದಿಯ ಕ್ಯಾಮರಾ ಮತ್ತು 50MP 3x ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮರಾವನ್ನು ಪಡೆಯಲಿದೆ. ಇದು ಸ್ವಲ್ಪ ದೊಡ್ಡದಾದ 5050mAh ಬ್ಯಾಟರಿ ಮತ್ತು ವೇಗವಾದ 80W SuperVOOC ಚಾರ್ಜಿಂಗ್ ಅನ್ನು ಸಹ ಹೊಂದಿರಲಿದೆ ಎಂದು ಮಾಹಿರಿ ನೀಡಿದೆ.

ವದಂತಿ ಪ್ರಕಾರ realme 13 Pro+ ವಿಶೇಷತೆಗಳು:

* 6.7 ಇಂಚಿನ (2412×1080 ಪಿಕ್ಸೆಲ್‌ಗಳು) 120Hz ರಿಫ್ರೆಶ್ ರೇಟ್ ಜೊತೆಗೆ ಪೂರ್ಣ HD+ ಬಾಗಿದ AMOLED ಡಿಸ್‌ಪ್ಲೇ ಹೊಂದಿರಲಿದೆ.
* Adreno 710 GPU ಜೊತೆಗೆ 2.4GHz ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 7s Gen 2 4nm ಮೊಬೈಲ್ ಪ್ಲಾಟ್‌ಫಾರ್ಮ್
* 8GB / 12GB LPDDR4X RAM ಜೊತೆಗೆ 128GB / 256GB / 512GB (UFS 3.1) ಸಂಗ್ರಹಣೆ
* ಡ್ಯುಯಲ್ ಸಿಮ್ (ನ್ಯಾನೋ)
* ರಿಯಲ್‌ಮಿ UI 5 ಜೊತೆಗೆ Android 14
* 50MP ಮುಖ್ಯ ಕ್ಯಾಮೆರಾ, OIS, 8MP ಅಲ್ಟ್ರಾ ವೈಡ್ ಕ್ಯಾಮೆರಾ ಜೊತೆಗೆ f/2.2 ಅಪರ್ಚರ್, 50MP 3X ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್, LED ಫ್ಲಾಷ್
ಸೋನಿ ಸಂವೇದಕದೊಂದಿಗೆ 32MP ಮುಂಭಾಗದ ಕ್ಯಾಮೆರಾ, f/2.45 ಅಪರ್ಚರ್ ಹೊಂದಿರಲಿದೆ.
* ಇನ್-ಡಿಸ್‌ಪ್ಲೇ ಫಿಂಗರ್‌ ಪ್ರಿಂಟ್ ಸೆನ್ಸಾರ್
* ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, ಹೈ-ರೆಸ್ ಆಡಿಯೊ
* ಧೂಳು ಮತ್ತು ಸ್ಪ್ಲಾಶ್ ನಿರೋಧಕ IP65 ಹೊಂದಿರಲಿದೆ
* ಆಯಾಮಗಳು: 161.3×73.9×8.2mm ಹಾಗೂ 190 ಗ್ರಾಂ ತೂಕ ಇರಲಿದೆ.
* 5G SA/NSA, ಡ್ಯುಯಲ್ 4G VoLTE, Wi-Fi 6 802.11 ax (2.4GHz + 5GHz), ಬ್ಲೂಟೂತ್ 5.2, ಡ್ಯುಯಲ್-ಫ್ರೀಕ್ವೆನ್ಸಿ GPS/ GLONASS/ Beidou, USB ಟೈಪ್-C ಜೊತೆ ಬರಲಿದೆ
* 87W SuperVOOC ವೇಗದ ಚಾರ್ಜಿಂಗ್ ಜೊತೆಗೆ 5050mAh ವಿಶಿಷ್ಟ ಬ್ಯಾಟರಿ.

realme ಈಗಾಗಲೇ ಭಾರತದಲ್ಲಿ ಫೋನ್‌ನ ಲಾಂಚ್ ಕುರಿತು ವದಂತಿ ಹರಿಬಿಡಲು ಆರಂಭಿಸಿದೆ. ಆದ್ದರಿಂದ ಈ ಜುಲೈ ನಂತರ ನಾವು ಫೋನ್ ಅನ್ನು ನಿರೀಕ್ಷಿಸಬಹುದು ಮತ್ತು ಅದೇ ಸಮಯದಲ್ಲಿ ಚೀನಾದಲ್ಲಿ ಕೂಡ ಲಾಂಚ್ ಆಗಬಹುದು ಎಂದು ಹೇಳಲಾಗುತ್ತಿದೆ.

Best Mobiles in India

English summary
Rumors have started doing the rounds that realme is preparing a new smartphone named 13 Pro+. Now about this phone TENAA website has revealed its design, specifications along with the model number
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+