3000 ಡಿಸ್ಕೌಂಟ್! ಎರಡು 50MP ಕ್ಯಾಮೆರಾಗಳು.. 6000mAh ಬ್ಯಾಟರಿ.. ಜ.23ಕ್ಕೆ ಹೊಸ Realme ಫೋನ್ ಸೇಲ್
ಬಹುನಿರೀಕ್ಷಿತ ರಿಯಲ್‌ಮಿ 14 ಪ್ರೊ 5G (Realme 14 Pro 5G) ಫೋನ್ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಇದನ್ನು ರಿಯಲ್‌ಮಿ 14 ಪ್ರೊ (Realme 14 Pro Series) ಸರಣಿಯ ಅಡಿಯಲ್ಲಿ ಪರಿಚಯಿಸಲಾಗಿದೆ. ಹೌದು, ಕಂಪನಿಯು ರಿಯಲ್‌ಮಿ 14 ಪ್ರೊ ಮತ್ತು ರಿಯಲ್‌ಮಿ 14 ಪ್ರೊ+ ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಅಂದಹಾಗೆ, ರಿಯಲ್‌ಮಿ 14 ಪ್ರೊ ಮೊಬೈಲ್ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಿಗೆ ಟಕ್ಕರ್ ಕೊಡಲು ಸಿದ್ಧವಾಗಿದೆ. ಇದೇ ಜನವರಿ 23 ರಂದು ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.
ರಿಯಲ್‌ಮಿ 14 ಪ್ರೊ 5G ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 6.77 ಇಂಚಿನ ಬಾಗಿದ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 8GB RAM + 256GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬನ್ನಿ, ಈ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ರಿಯಲ್‌ಮಿ 14 ಪ್ರೊ 5G ವೈಶಿಷ್ಟ್ಯಗಳು
ಡಿಸ್ಪ್ಲೇ ಮತ್ತು ಪ್ರೊಸೆಸರ್
ರಿಯಲ್‌ಮಿ 14 ಪ್ರೊ 5G ಮೊಬೈಲ್ 6.77 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 412×1080 ಪಿಕ್ಸೆಲ್ ರೆಸಲ್ಯೂಶನ್, 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ. ಈ ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದು ಗ್ರಾಫಿಕ್ಸ್‌ಗಾಗಿ, ಮಾಲಿ G615 ಜಿಪಿಯು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ ಯುಐ 6.0 ಜೊತೆಗೆ ಕೆಲಸ ಮಾಡುತ್ತದೆ.
ಕ್ಯಾಮೆರಾ ಮತ್ತು ಸ್ಟೋರೇಜ್
ರಿಯಲ್‌ಮಿ 14 ಪ್ರೊ 5G ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ರಿಯಲ್‌ಮಿ ಫೋನ್ 12GB RAM ಹೊಂದಿದೆ. ಜೊತೆಗೆ 14GB ವರ್ಚುವಲ್ RAM ಬೆಂಬಲ ಸಹ ಹೊಂದಿದೆ. ಈ ಫೋನಿನಲ್ಲಿ 128GB ಮತ್ತು 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್‌ಮಿ 14 ಪ್ರೊ 5G ಮೊಬೈಲ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಈ ಮೊಬೈಲ್ 45W ವೇಗದ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP66+IP68+IP69 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ 6, ಬ್ಲೂಟೂತ್ 5.2 ಮತ್ತು ಯುಎಸ್‌ಬಿ ಟೈಪ್ ಸಿ, ಸ್ಟಿರಿಯೊ ಸ್ಪೀಕರ್‌ಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.
ರಿಯಲ್‌ಮಿ 14 ಪ್ರೊ 5G ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ 14 ಪ್ರೊ 5G ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗಲಿದೆ. ಈ ಫೋನಿನ 8GB RAM + 128GB ಸ್ಠೋರೇಜ್ ಬೆಲೆ 22,999 ರೂ. ಮತ್ತು 8GB RAM + 25GB ಸ್ಟೋರೇಜ್ ಬೆಲೆ 24,999 ರೂ. ಆಗಿದೆ. ಕಂಪನಿಯು ಮೊದಲ ಮಾರಾಟದ ಪ್ರಯುಕ್ತ ಹಲವು ಆಫರ್‌ಗಳನ್ನು ನೀಡುತ್ತಿದೆ.
ನೀವು 2000 ರೂ. ಬ್ಯಾಂಕ್ ಆಫರ್, 1000 ರೂ. ಎಕ್ಸ್‌ಚೇಂಜ್ ಬೋನಸ್ ಮತ್ತು 12 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯ ಲಾಭ ಪಡೆಯಬಹುದು. ಈ ಫೋನ್ ಪರ್ಲ್ ವೈಟ್, ಪಿಂಕ್ ಮತ್ತು ಸ್ಯೂಡ್ ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಜನವರಿ 23 ರಂದು ಮಧ್ಯಾಹ್ನ 12 ಗಂಟೆಗೆ ಈ ಮೊಬೈಲ್ ತನ್ನ ಮೊದಲ ಮಾರಾಟ ಶುರು ಮಾಡಲಿದೆ. ನೀವು, ಕಂಪನಿಯ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದು.


Click it and Unblock the Notifications








