Home
ಸುದ್ದಿಜಾಲ

ನಾಳೆ Realme 14 Pro+ ಫೋನ್ ಸೇಲ್: 4000 ರಿಯಾಯಿತಿ.. ಬಜೆಟ್ ಬೆಲೆ.. ಜಬರ್ದಸ್ತ್ ಫೀಚರ್ಸ್‌

ರಿಯಲ್‌ಮಿ ಮೊಬೈಲ್ ಪ್ರಿಯರಿಗೆ ನಾಳೆ ಸಿಹಿಸುದ್ದಿ ಇದೆ. ಹೊಸ ರಿಯಲ್‌ಮಿ ಸ್ಮಾರ್ಟ್‌ಫೋನ್‌ ಅಧಿಕೃತವಾಗಿ ಗ್ರಾಹಕರ ಕೈ ಸೇರಲಿದೆ. ಹೌದು, ಕಂಪನಿಯು ಇತ್ತೀಚೆಗೆ ಭಾರತದಲ್ಲಿ ರಿಯಲ್‌ಮಿ 14 ಪ್ರೊ (Realme 14 Pro Series) ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ರಿಯಲ್‌ಮಿ 14 ಪ್ರೊ (Realme 14 Pro) ಮತ್ತು ರಿಯಲ್‌ಮಿ 14 ಪ್ರೊ+ (Realme 14 Pro+ 5G) ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಅಂದಹಾಗೆ, ರಿಯಲ್‌ಮಿ 14 ಪ್ರೊ+ 5G ಫೋನ್‌ ನಾಳೆ (ಜನವರಿ 23) ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.

ರಿಯಲ್‌ಮಿ 14 ಪ್ರೊ+ 5G ಮೊಬೈಲ್ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ 6.83 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 6000mAh ಬ್ಯಾಟರಿ, 100W ಫಾಸ್ಟ್ ಚಾರ್ಜಿಂಗ್ ಮತ್ತು 12GB + 512GB ಸ್ಟೋರೇಜ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನುಒಳಗೊಂಡಿದೆ. ಈ ಫೋನಿನ ಬೆಲೆ, ಆಫರ್‌ ಮತ್ತು ಲಭ್ಯತೆ ತಿಳಿಯಲು ಮುಂದೆ ಓದಿ.

ನಾಳೆ Realme 14 Pro+ ಸೇಲ್: 4000 ರಿಯಾಯಿತಿ.. ಬಜೆಟ್ ಬೆಲೆ.. ಫೀಚರ್ಸ್‌ ನೋಡಿ

ರಿಯಲ್‌ಮಿ 14 ಪ್ರೊ+ 5G: ಟಾಪ್ 5 ಫೀಚರ್ಸ್

ಡಿಸ್ಪ್ಲೇ ಹೇಗಿದೆ

ರಿಯಲ್‌ಮಿ 14 ಪ್ರೊ+ 5G ಫೋನ್ 6.83 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪೂರ್ಣ ಎಚ್‌ಡಿ ಪ್ಲಸ್‌ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2800 X 1272 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಮತ್ತು 120Hz ರಿಫ್ರೆಶ್ ದರ ಬೆಂಬಲ ಹೊಂದಿದೆ.

ಪ್ರೊಸೆಸರ್ ಯಾವುದು?

ರಿಯಲ್‌ಮಿ 14 ಪ್ರೊ+ 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್‌ ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ, 900MHz ಅಡ್ರಿನೊ ಜಿಪಿಯು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 15 ಆಧಾರಿತ ರಿಯಲ್‌ಮಿ ಯುಐ 6 ಓಎಸ್‌ ಜೊತೆಗೆ ಕೆಲಸ ನಿರ್ವಹಿಸುತ್ತದೆ. ಈ ಫೋನ್‌ 12GB RAM ಹೊಂದಿದೆ. ಇದರಲ್ಲಿ 256GB ಮತ್ತು 512GB ಸ್ಟೋರೇಜ್ ಆಯ್ಕೆ ಲಭ್ಯವಿದೆ.

ಮೂರು ಬೊಂಬಾಟ್ ಕ್ಯಾಮೆರಾಗಳು

ರಿಯಲ್‌ಮಿ 14 ಪ್ರೊ+ 5G ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ 14 ಪ್ರೊ+ 5G ಫೋನ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 80W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ 14 ಪ್ರೊ+ 5G ಸ್ಮಾರ್ಟ್‌ಫೋನ್‌ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ಜೊತೆಗೆ ಸ್ಟೀರಿಯೋ ಸ್ಪೀಕರ್‌ಗಳು, ಹೈ ರೆಸ್ ಆಡಿಯೋ ಸಹ ಲಭ್ಯವಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP69, IP68 ಮತ್ತು IP66 ರೇಟಿಂಗ್‌ಗಳನ್ನು ಸಹ ಹೊಂದಿದೆ.

ರಿಯಲ್‌ಮಿ 14 ಪ್ರೊ+ 5G ಬೆಲೆ ಮತ್ತು ಆಫರ್‌

ರಿಯಲ್‌ಮಿ 14 ಪ್ರೊ+ 5G ಫೋನಿನ 8GB + 128GB ಸ್ಟೋರೇಜ್‌ ರೂಪಾಂತರವನ್ನು 29,999 ರೂ.ಗೆ ಮಾರಾಟ ಮಾಡಲಾಗುತ್ತದೆ. ನೀವು ರಿಯಾಯಿತಿಯೊಂದಿಗೆ 27,999 ರೂ.ಗೆ ಖರೀದಿಸಬಹುದು. ಕಂಪನಿಯು 4,000 ರೂ. ಬ್ಯಾಂಕ್ ಆಫರ್‌ ಘೋಷಿಸಿದೆ. ಈ ಫೋನಿನ 8GB + 256GB ಸ್ಟೋರೇಜ್‌ ಆಯ್ಕೆಯನ್ನು 31,999 ರೂ.ಗೆ ಬಿಡುಗಡೆ ಮಾಡಲಾಗಿದೆ. ನೀವು 29,999 ರೂ.ಗಳ ಆಫರ್ ಬೆಲೆಗೆ ಕೊಳ್ಳಬಹುದು.

ಇನ್ನು 12GB + 256GB ಸ್ಟೋರೇಜ್‌ ವೇರಿಯಂಟ್ ಬೆಲೆ 34,999 ರೂ. ಆಗಿದೆ. ನೀವು ಡಿಸ್ಕೌಂಟ್‌ನೊಂದಿಗೆ 30,999 ರೂ.ಗೆ ಖರೀದಿಸಬಹುದು. ರಿಯಲ್‌ಮಿ 14 ಪ್ರೊ+ 5G ಮೊಬೈಲ್ ಪಿಂಕ್, ಪರ್ಲ್ ವೈಟ್ ಮತ್ತು ಸ್ಯೂಡ್ ಗ್ರೇ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ನೀವು ಕಂಪನಿಯ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮೂಲಕ ಈ ಫೋನನ್ನು ಖರೀದಿಸಬಹುದು. ಈ ಮೊಬೈಲ್ ನಾಳೆ (ಜನವರಿ 23) ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.

Best Mobiles in India

English summary
Realme 14 Pro+ 5G Goes on First Sale in India Tomorrow: check price, offers and specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+