Realme 14 Pro Series: ಇಂದು 2 ಹೊಸ ಫೋನ್, ಬಡ್ಸ್ ಲಾಂಚ್; ಬಜೆಟ್ ಬೆಲೆ.. ಹೀಗಿವೆ ಫೀಚರ್ಸ್
ರಿಯಲ್‌ಮಿ ಇಂದು (ಜನವರಿ 16) ಭಾರತದಲ್ಲಿ ಎರಡು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಲಿದೆ. ಇವು ರಿಯಲ್‌ಮಿ 14 ಪ್ರೊ (Realme 14 Pro) ಮತ್ತು ರಿಯಲ್‌ಮಿ 14 ಪ್ರೊ+ (Realme 14 Pro+) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಹೌದು, ರಿಯಲ್‌ಮಿ 14 ಪ್ರೊ (Realme 14 Pro Series) ಸರಣಿಯು ಅಧಿಕೃತವಾಗಿ ಭಾರತದಲ್ಲಿ ರಿಲೀಸ್ ಆಗಲಿದೆ. ಈ ಪೈಕಿ ರಿಯಲ್‌ಮಿ 14 ಪ್ರೊ ಪ್ಲಸ್ ವಿಶ್ವದ ಮೊದಲ ಕೋಲ್ಡ್ ಸೆನ್ಸಿಟಿವ್ ಕಲರ್ ಚೇಂಜಿಂಗ್ ಫೋನ್ ಆಗಿದೆ. ಬನ್ನಿ, ಈ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ರಿಯಲ್‌ಮಿ 14 ಸರಣಿ ಬಿಡುಗಡೆ ಸಮಾರಂಭವು ಇಂದು (ಜನವರಿ 16) ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಈ ಸಮಾರಂಭದಲ್ಲಿ ರಿಯಲ್‌ಮಿ 14 ಪ್ರೊ, ರಿಯಲ್‌ಮಿ 14 ಪ್ರೊ+ ಮೊಬೈಲ್ ಮತ್ತು ರಿಯಲ್‌ಮಿ ಬಡ್ಸ್ ವೈರ್‌ಲೆಸ್ 5 ANC ಅನ್ನು ಅನಾವರಣಗೊಳಿಸಲಾಗುತ್ತದೆ. ಈ ಕಾರ್ಯಕ್ರಮವು ಕಂಪನಿಯ ಯೂಟ್ಯೂಬ್, ವೆಬ್‌ಸೈಟ್ (realme.in) ಮತ್ತು ಕಂಪನಿಯ ಎಲ್ಲಾ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುವುದು. ಈ ಕೆಳಗಿನ ಲಿಂಕ್ ಮೂಲಕ ಲೈವ್ ವೀಕ್ಷಣೆ ಮಾಡಬಹುದು.

ರಿಯಲ್‌ಮಿ 14 ಪ್ರೊ ಸರಣಿಯ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ 14 ಪ್ರೊ+ ಮೊಬೈಲ್ 6.83 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. ಇದು 1.5K ರೆಸಲ್ಯೂಶನ್ ಬೆಂಬಲದೊಂದಿಗೆ ಬೆಜೆಲ್ ಲೆಸ್ ಕ್ವಾಡ್ ಬಾಗಿದ ಓಎಲ್‌ಇಡಿ ಡಿಸ್ಪ್ಲೇ ಆಗಿರುತ್ತದೆ. ರಿಯಲ್‌ಮಿ 14 ಪ್ರೊ ಫೋನ್ 120Hz ಬಾಗಿದ ಡಿಸ್ಪ್ಲೇಯೊಂದಿಗೆ ಬರುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ರಿಯಲ್‌ಮಿ 14 ಪ್ರೊ+ ಮತ್ತು ರಿಯಲ್‌ಮಿ 14 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್ ಹೊಂದಿರುತ್ತವೆ.
ಸ್ಟೋರೇಜ್ ಆಯ್ಕೆ
ರಿಯಲ್‌ಮಿ 14 ಪ್ರೊ+ ಫೋನ್ 12GB RAM + 256GB ಸ್ಟೋರೇಜ್ ಮತ್ತು 12GB RAM + 512GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಆದರೆ, ರಿಯಲ್‌ಮಿ 14 ಪ್ರೊ ಮೊಬೈಲ್ 8GB RAM + 128GB ಸ್ಟೋರೇಜ್, 8GB RAM + 256GB ಸ್ಟೋರೇಜ್ ಮತ್ತು 12GB RAM + 512GB ಸ್ಟೋರೇಜ್ ಆಯ್ಕೆಗಳಲ್ಲಿ ಬರಲಿದೆ.

ಕ್ಯಾಮೆರಾ ಸೆಟಪ್
ರಿಯಲ್‌ಮಿ 14 ಪ್ರೊ+ ಸ್ಮಾರ್ಟ್‌ಫೋನ್ ಹೈಪರ್‌ಇಮೇಜ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದು ಟ್ರಿಪಲ್ ಫ್ಲ್ಯಾಷ್‌ನೊಂದಿಗೆ ಬರುತ್ತಿರುವ ವಿಶ್ವದ ಮೊದಲ ಫೋನ್ ಆಗಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಸೋನಿ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಇರಲಿದೆ. ಹಾಗೆಯೇ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್‌ಮಿ 14 ಪ್ರೊ+ ಫೋನ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ. ಇದನ್ನು ಚಾರ್ಜ್ ಮಾಡಲು, ಈ ಫೋನ್ 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು.
ರಿಯಲ್‌ಮಿ 14 ಪ್ರೊ ಸರಣಿಯ ಬೆಲೆ
ರಿಯಲ್‌ಮಿ 14 ಪ್ರೊ ಮತ್ತು ರಿಯಲ್‌ಮಿ 14 ಪ್ರೊ+ ಸ್ಮಾರ್ಟ್‌ಫೋನ್‌ಗಳನ್ನು ಮಧ್ಯ ಬಜೆಟ್ ವಿಭಾಗದಲ್ಲಿ ಬಿಡುಗಡೆ ಮಾಡಲಾಗುವುದು. ರಿಯಲ್‌ಮಿ 14 ಪ್ರೊ ಬೆಲೆ 25 ಸಾವಿರದಿಂದ 30 ಸಾವಿರ ರೂ. (27,999 ರೂ.) ಇರಬಹುದು. ರಿಯಲ್‌ಮಿ 14 ಪ್ರೊ ಪ್ಲಸ್ ಬೆಲೆ 30 ಸಾವಿರಕ್ಕಿಂತ (32,999 ರೂ.) ಹೆಚ್ಚು ಇರುತ್ತದೆ. ಈ ಎರಡೂ ಫೋನ್‌ಗಳು 12GB RAM ನೊಂದಿಗೆ ಬಿಡುಗಡೆಯಾಗಲಿವೆ. ರಿಯಲ್‌ಮಿ 14 ಪ್ರೊ ಸರಣಿಯು ಪರ್ಲ್ ವೈಟ್, ಸ್ಯೂಡ್ ಗ್ರೇ, ಬಿಕಾನರ್ ಪರ್ಪಲ್ ಮತ್ತು ಜೈಪುರ ಪಿಂಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.


Click it and Unblock the Notifications








