ಸ್ವಲ್ಪ ಕಾಯಿರಿ! Realme 14 ಸರಣಿ ಬಿಡುಗಡೆ ಫಿಕ್ಸ್.. ಎಷ್ಟು ಫೋನ್ ಲಾಂಚ್.. ಫೀಚರ್ಸ್, ಬೆಲೆಯೂ ಲೀಕ್
ರಿಯಲ್‌ಮಿ ಹೊಸ ಫೋನ್‌ಗಳನ್ನು ಮಾರುಕಟ್ಟೆಗೆ ತರುತ್ತಿದೆ. ಕಂಪನಿಯು ರಿಯಲ್‌ಮಿ 14 5G (Realme 14 5G series) ಸರಣಿ ಬಿಡುಗಡೆಯನ್ನು ಖಚಿತಪಡಿಸಿದೆ. ಹೌದು, ರಿಯಲ್‌ಮಿ 14 ಪ್ರೊ ಸರಣಿಯ ಬಳಿಕ ಈ ಹೊಸ ಸರಣಿಯನ್ನು ಪರಿಚಯಿಸಲಾಗುತ್ತಿದೆ. ಈ ಸರಣಿಯ ಮೊಬೈಲ್‌ಗಳನ್ನು ಸೊಗಸಾದ ವಿನ್ಯಾಸದ ಜೊತೆಗೆ ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಕಂಪನಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಹೊಸ ಸರಣಿಯ ಬಿಡುಗಡೆಯ ಟೀಸರ್ ಹಂಚಿಕೋಮಡಿದೆ. ಬನ್ನಿ, ಈ ಸರಣಿಯ ಫೋನ್‌ಗಳ ವಿಶೇಷತೆ ಬಗ್ಗೆ ತಿಳಿಯೋಣ.
ರಿಯಲ್‌ಮಿ ಇಂದು ತನ್ನ ರಿಯಲ್‌ಮಿ 14 ಸರಣಿಯ ಟೀಸರ್ ಬಿಡುಗಡೆ ಮಾಡಿದೆ. ಆದರೆ, ಇದರಲ್ಲಿ ಎಷ್ಟು ಫೋನ್ ಬರಲಿವೆ ಮತ್ತು ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಕಂಪನಿಯ ಪ್ರಕಾರ, ಈ ಸರಣಿಯ ಸ್ಮಾರ್ಟ್‌ಫೋನ್ ಮೆಚಾ ವಿನ್ಯಾಸವನ್ನು ಹೊಂದಿವೆ. ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುವುದು. ಮುಂಬರುವ ರಿಯಲ್‌ಮಿ 14 ಸರಣಿಯನ್ನು #PerformanceDominator ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಂಡಿದೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸಲಿದೆ.

ರಿಯಲ್‌ಮಿ 14 5G ಬೆಲೆ (ಸೋರಿಕೆ)
ಕಂಪನಿಯು ಈ ಹೊಸ ಸರಣಿಯ ಅಡಿಯಲ್ಲಿ ರಿಯಲ್‌ಮಿ 14 5G (Realme 14 5G) ಫೋನನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದು ಮಧ್ಯಮ ಬಜೆಟ್‌ನ ಮೊಬೈಲ್ ಆಗಿರುತ್ತದೆ. ಈ ಹೊಸ ಫೋನಿನ ಬೆಲೆಯನ್ನು ರಿಯಲ್‌ಮಿ 14x 5G ಮತ್ತು ರಿಯಲ್‌ಮಿ 14 ಪ್ರೊ ಲೈಟ್ 5G ನಡುವೆ ಇರಿಸಲಿದೆ ಎಂದು ಹೇಳಲಾಗುತ್ತಿದೆ. ಅಂದರೆ, ರಿಯಲ್‌ಮಿ 14 5G ಫೋನನ್ನು 15 ಸಾವಿರ ರೂ.ನಿಂದ 20 ಸಾವಿರ ರೂ.ಗಳ ನಡುವಿನ ಬೆಲೆಯಲ್ಲಿ ಬಿಡುಗಡೆ ಮಾಡಬಹುದು. ವರದಿಯ ಪ್ರಕಾರ, ಈ ರಿಯಲ್‌ಮಿ 5G ಮೊಬೈಲ್ ಪಿಂಕ್, ಸಿಲ್ವರ್ ಮತ್ತು ಟೈಟಾನಿಯಂ ಬಣ್ಣಗಳ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ.
ರಿಯಲ್‌ಮಿ 14 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ 14 5G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿರುತ್ತದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್ ಸ್ಕ್ರೀನ್ ಆಗಿದೆ. ಈ ಫೋನ್ 120Hz ರಿಫ್ರೆಶ್ ದರ ಮತ್ತು 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ನೂತನ ರಿಯಲ್‌ಮಿ 14 5G ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 4 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿರಲಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ರಿಯಲ್‌ಮಿ 5G ಮೊಬೈಲ್ 8GB RAM, 12GB RAM ರೂಪಾಂತರಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಇದು ವಿಸ್ತರಿಸಬಹುದಾದ RAM ತಂತ್ರಜ್ಞಾನ ಸಹ ಹೊಂದಿದೆ. ಭೌತಿಕ RAMಗೆ ವರ್ಚುವಲ್ RAM ಸೇರಿಸುವ ಮೂಲಕ ಹೆಚ್ಚು ಬಳಸಬಹುದು. ಈ ಎರಡೂ ರೂಪಾಂತರಗಳು 256GB ಸ್ಟೋರೇಜ್ ಆಯ್ಕೆ ಒಳಗೊಂಡಿರುತ್ತವೆ.
ಕ್ಯಾಮೆರಾ ಸೆಟಪ್
ರಿಯಲ್‌ಮಿ 14 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಸೋರಿಕೆಯ ಪ್ರಕಾರ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿರುತ್ತದೆ. ಇದು OIS ಬೆಂಬಲದೊಂದಿಗೆ ಬರುತ್ತದೆ. ಹಾಗೆಯೇ ಸೆಕೆಂಡರಿ ಲೆನ್ಸ್ ಇರುತ್ತದೆ. ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಮುಂಬರುವ ರಿಯಲ್‌ಮಿ 14 5G ಮೊಬೈಲ್ 6,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬರಲಿದೆ. ರಿಯಲ್‌ಮಿ 14x 5G ಫೋನಿನಲ್ಲಿಯೂ ಸಹ ಇದೇ ಬ್ಯಾಟರಿಯನ್ನು ಅಳವಡಿಸಲಾಗಿದೆ. ಸೋರಿಕೆ ಪ್ರಕಾರ, ರಿಯಲ್‌ಮಿ 14 5G ಫೋನ್ 45W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.


Click it and Unblock the Notifications








