Home
ಸುದ್ದಿಜಾಲ

ಭಾರತದಲ್ಲಿ ಶೀಘ್ರವೇ Realme 15 5G ಬಿಡುಗಡೆ?..ಮತ್ತಷ್ಟು ಮಾಹಿತಿ ಲೀಕ್!

ಬಿಡುಗಡೆಯಾದಾಗ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ Realme 14 5G ಉತ್ತರಾಧಿಕಾರಿಯಾಗಿ ಶೀಘ್ರವೇ Realme 15 5G ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ Realme 15 5G ಸ್ಮಾರ್ಟ್‌ಫೋನ್ ಕುರಿತಂತೆ Realme ಕಂಪೆನಿಯು ಇನ್ನೂ ಯಾವುದೇ ಅಧಿಕೃತ ಮಾಹಿತಿ ಒದಗಿಸಿಲ್ಲ. ಆದರೆ, ಹೊಸ ಸೋರಿಕೆಗಳು ಈ Realme 15 5G ಫೋನ್‌ನ ಸಂಭಾವ್ಯ ಬಣ್ಣ ಆಯ್ಕೆಗಳು, RAM ಮತ್ತು ಸಂಗ್ರಹಣಾ ವಿವರಗಳನ್ನು ಬಹಿರಂಗಪಡಿಸಿವೆ. ಮುಂಬರುವ Realme 15 5G ಫೋನ್ ಮೂರು ಆಕರ್ಷಕ ಬಣ್ಣಗಳಲ್ಲಿ ಮತ್ತು ನಾಲ್ಕು RAM ಹಾಗೂ ಸಂಗ್ರಹಣಾ ಮಾದರಿಗಳಲ್ಲಿ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ. ಇದು 12GB RAM ಮತ್ತು ಗರಿಷ್ಠ 512GB ವರೆಗೆ ಸಂಗ್ರಹಣೆ ಹೊಂದಿದೆ ಮತ್ತು ಸ್ನಾಪ್‌ಡ್ರಾಗನ್ 7 Gen 4 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ವದಂತಿಗಳಿವೆ.

ಹೆಸರಿಸದ ರೀಟೇಲ್ ಮೂಲಗಳನ್ನು ಉಲ್ಲೇಖಿಸಿ 91Mobiles ಹಿಂದಿ ಈ ಕುರಿತು ವರದಿ ಮಾಡಿದ್ದು, Realme 15 5G (ಮಾದರಿ ಸಂಖ್ಯೆ RMX5106) ಸ್ಮಾರ್ಟ್‌ಫೋನ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಿದೆ. ಮುಂಬರುವ ಈ ಸ್ಮಾರ್ಟ್‌ಫೋನ್ 8GB + 128GB, 8GB + 256GB, 12GB + 256GB ಮತ್ತು 12GB + 512GB ನಾಲ್ಕು RAM ಮತ್ತು ಸಂಗ್ರಹಣಾ ಆಯ್ಕೆಗಳಲ್ಲಿ ಲಭ್ಯವಿರಲಿವೆ ಮತ್ತು ಈ ಮಾದರಿಗಳು ₹18,000 ರಿಂದ ₹20,000 ಬೆಲೆ ಶ್ರೇಣಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ವರದಿ ಮಾಡಿದೆ. ಬಣ್ಣಗಳ ವಿಷಯದಲ್ಲಿ, ಈ Realme 15 5G ಸ್ಮಾರ್ಟ್‌ಫೋನ್ ಫ್ಲೋಯಿಂಗ್ ಸಿಲ್ವರ್, ಸಿಲ್ಕ್ ಪಿಂಕ್, ಮತ್ತು ವೆಲ್ವೆಟ್ ಗ್ರೀನ್ ಎಂಬ ಮೂರು ಆಕರ್ಷಕ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

Realme 15 5G ಪ್ರಮುಖ ವೈಶಿಷ್ಟ್ಯಗಳು(ನಿರೀಕ್ಷಿತ)
ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಮುಂಬರುವ Realme 15 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 7 Gen 4 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಬ್ಯಾಟರಿ ವಿಭಾಗದಲ್ಲಿ, ಈ ಫೋನ್ 45W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,300mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರಬಹುದು. ಡಿಸ್‌ಪ್ಲೇ ವಿಭಾಗದಲ್ಲಿ, ಈ ಫೋನ್ 120Hz ರಿಫ್ರೆಶ್ ದರದ ಫ್ಲಾಟ್ AMOLED ಡಿಸ್ಪ್ಲೇಯನ್ನು ಹೊಂದಿರಬಹುದು. ಕ್ಯಾಮೆರಾ ವಿಭಾಗದಲ್ಲಿ. ಮುಖ್ಯ ಕ್ಯಾಮೆರಾ 50-ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಸಹಿತ ಇದು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿರಬಹುದು. ಸೆಲ್ಫಿಗಳಿಗಾಗಿ, ಫೋನ್ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಇದು ಸ್ಪಷ್ಟ ಮತ್ತು ವಿವರವಾದ ಸೆಲ್ಫಿಗಳನ್ನು ಖಚಿತಪಡಿಸುತ್ತದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಶೀಘ್ರವೇ Realme 15 5G ಬಿಡುಗಡೆ?..ಮತ್ತಷ್ಟು ಮಾಹಿತಿ ಲೀಕ್!

Realme 15 5G: ಕಳೆದ Realme 14 5G ಗೆ ಹೋಲಿಕೆ
Realme 15 5G, ಮಾರ್ಚ್‌ನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾದ Realme 14 5G ಗಿಂತ ಗಮನಾರ್ಹ ಅಪ್‌ಗ್ರೇಡ್‌ಗಳನ್ನು ಪಡೆಯುತ್ತಿದೆ ನಿರೀಕ್ಷೆಯಿದೆ. ಈ Realme 14 5G ಸ್ಮಾರ್ಟ್‌ಫೋನ್ 6.67-ಇಂಚಿನ ಪೂರ್ಣ-HD+ ಡಿಸ್ಪ್ಲೇ, 16-ಮೆಗಾಪಿಕ್ ಸೆಲ್ ಮುಂಭಾಗದ ಕ್ಯಾಮೆರಾ, Snapdragon 6 Gen 4 ಚಿಪ್‌ಸೆಟ್, 50-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿ ಹೊಂದಿದೆ. ಇದೀಗ ಮುಂಬರುವ Realme 15 5G ಈ ಹಿಂದಿನ ಮಾದರಿಗಿಂತ ಉತ್ತಮ ಪ್ರೊಸೆಸರ್, ದೊಡ್ಡ ಬ್ಯಾಟರಿ, ಸುಧಾರಿತ ಸೆಲ್ಫಿ ಕ್ಯಾಮೆರಾ ಮತ್ತು ಹೆಚ್ಚಿನ RAM/ಸಂಗ್ರಹಣಾ ಆಯ್ಕೆಗಳಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. Realme 15 5G ಯ ​​ಅಧಿಕೃತ ಬಿಡುಗಡೆ ಮತ್ತು ಸಂಪೂರ್ಣ ವಿಶೇಷಣಗಳಿಗಾಗಿ Realme ಕಂಪೆನಿಯ ದೃಢೀಕರಣಕ್ಕಾಗಿ ನಾವು ಕಾಯುತ್ತಿದ್ದೇವೆ.

Best Mobiles in India

English summary
Realme 15 5G is set to launch in India soon, identified by the model number RMX5106. The device is expected to offer four different RAM and storage configurations in the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+