Home
ಸುದ್ದಿಜಾಲ

ಭಾರತಕ್ಕೆ ಶೀಘ್ರದಲ್ಲೇ Realme 15 ಸರಣಿ ಎಂಟ್ರಿ: ನಿರೀಕ್ಷಿತ ಬೆಲೆ ₹18,000!

ಬಹುನಿರೀಕ್ಷಿತ Realme 15 ಸರಣಿಯ ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿವೆ. ಈ ಸರಣಿಯಲ್ಲಿ Realme 15 5G ಮತ್ತು Realme 15 Pro 5G ಮಾಡೆಲ್‌ಗಳು ಸೇರಿವೆ ಎಂದು ಕಂಪನಿಯು ಅಧಿಕೃತ ಟೀಸರ್ ಮೂಲಕ ದೃಢಪಡಿಸಿದೆ. ಈ ಫೋನ್‌ಗಳ ನಿಖರವಾದ ಬಿಡುಗಡೆ ದಿನಾಂಕವನ್ನು ಕಂಪೆನಿಯು ಇನ್ನೂ ಘೋಷಿಸದಿದ್ದರೂ, ಜುಲೈನಲ್ಲಿ ಈ ಸರಣಿ ಭಾರತದಲ್ಲಿ ಲಭ್ಯವಾಗುವ ಸಾಧ್ಯತೆಯಿದೆ ಎಂದು ಹಿಂದಿನ ಸೋರಿಕೆಗಳು ಸೂಚಿಸಿವೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Realme 15 Pro 5G ಮಾಡೆಲ್ ಜನವರಿಯಲ್ಲಿ ಬಿಡುಗಡೆಯಾದ Realme 14 Pro 5G ಫೋನಿನ ಉತ್ತರಾಧಿಕಾರಿಯಾಗಿ ಮಾರುಕಟ್ಟೆಗೆ ಬರಲಿದೆ ಎಂದು ತಿಳಿದುಬಂದಿದೆ. Realme 15 Pro 5G ಯನ್ನು ಕಂಪನಿಯು ತನ್ನ ಅತ್ಯಾಧುನಿಕ "AI ಪಾರ್ಟಿ ಫೋನ್" ಎಂದು ಬಿಂಬಿಸಿದೆ. ಈ ಹ್ಯಾಂಡ್‌ಸೆಟ್ ಪ್ರಮುಖ ವೈಶಿಷ್ಟ್ಯಗಳೊಂದಿಗೆ ಬರಲಿದೆ ಎಂದು ಹೇಳಲಾಗಿದೆ, ಇದು ಹಿಂದೆ ಪ್ರೊ+ ರೂಪಾಂತರಕ್ಕೆ ಸೀಮಿತವಾಗಿತ್ತು. ಇಷ್ಟೇ ಅಲ್ಲದೆ, Realme 15 ಸರಣಿಯು "ಪಾರ್ಟಿ-ಪ್ರೇರಿತ ಕ್ಯಾಮೆರಾ ವೈಶಿಷ್ಟ್ಯಗಳನ್ನು" ಒಳಗೊಂಡಿರುತ್ತದೆ ಎಂದು Realme ಹೇಳಿಕೊಂಡಿದೆ.

Realme 15 ಸರಣಿಯಲ್ಲಿ ಬರಲಿರುವ ಈ ಎರಡು ಸ್ಮಾರ್ಟ್‌ಫೋನ್‌ಗಳು, ಸಂಗೀತ ಕಚೇರಿಗಳು, ನೃತ್ಯ ಮಹಡಿಗಳು ಅಥವಾ ಹೌಸ್ ಪಾರ್ಟಿಗಳಂತಹ ಡೈನಾಮಿಕ್ ಬೆಳಕಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಶಟರ್ ವೇಗ, ಕಾಂಟ್ರಾಸ್ಟ್ ಮತ್ತು ಸ್ಯಾಚುರೇಶನ್ ಅನ್ನು ನೈಜ ಸಮಯದಲ್ಲಿ ಹೊಂದಿಸುವ AI-ಬೆಂಬಲಿತ ಇಮೇಜಿಂಗ್ ವೈಶಿಷ್ಟ್ಯವನ್ನು ಹೊಂದಿವೆ ಇದು ಪಾರ್ಟಿ ವಾತಾವರಣದಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಬಳಕೆದಾರರಿಗೆ ಸಹಾಯ ಮಾಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದು Realme ಕ್ಯಾಮೆರಾ ಪ್ರಿಯರಿಗೆ ಹೊಸದಾಗಿ ದೊರೆಯುತ್ತಿರುವ ವೈಶಿಷ್ಟ್ಯವಾಗಿದೆ.

ಭಾರತಕ್ಕೆ ಶೀಘ್ರದಲ್ಲೇ Realme 15 ಸರಣಿ ಎಂಟ್ರಿ: ನಿರೀಕ್ಷಿತ ಬೆಲೆ ₹18,000!

ಹಿಂದಿನ ವರದಿಗಳ ಪ್ರಕಾರ, Realme 15 Pro 5G ಸ್ಮಾರ್ಟ್‌ಫೋನ್ ವಿವಿಧ RAM ಮತ್ತು ಸಂಗ್ರಹಣಾ ಸಂರಚನೆಗಳಲ್ಲಿ ಲಭ್ಯವಿರಲಿದೆ. ಇವುಗಳಲ್ಲಿ 8GB + 128GB, 8GB + 256GB, 12GB + 256GB, ಮತ್ತು 12GB + 512GB ಆಯ್ಕೆಗಳು ಸೇರಿವೆ. ಅಲ್ಲದೆ, ಈ ಹ್ಯಾಂಡ್‌ಸೆಟ್ ಫ್ಲೋಯಿಂಗ್ ಸಿಲ್ವರ್, ರೇಷ್ಮೆ ನೇರಳೆ ಮತ್ತು ವೆಲ್ವೆಟ್ ಹಸಿರು ಬಣ್ಣಗಳಲ್ಲಿ ಲಭ್ಯವಿರಬಹುದು ಎಂದು ಹೇಳಲಾಗಿದೆ. Realme 15 Pro 5G ನಂತೆಯೇ, Realme 15 5G ಫೋನ್ ಕೂಡ ಒಂದೇ ರೀತಿಯ ಮೆಮೊರಿ ಮತ್ತು ಬಣ್ಣಗಳ ಆಯ್ಕೆಗಳಲ್ಲಿ ಗ್ರಾಹಕರ ಕೈಸೇರಲಿದೆ ಎಂದು ಹೇಳಲಾಗಿದೆ.

ಸೋರಿಕೆಗಳ ಪ್ರಕಾರ, ಮೂಲ Realme 15 5G ಫೋನಿನ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಇದು ಸ್ನಾಪ್‌ಡ್ರಾಗನ್ 7 ಜೆನ್ 4 SoC ಪ್ರೊಸೆಸರ್ ಅನ್ನು ಹೊಂದಿರಬಹುದು. ಅಲ್ಲದೆ, ಇದು 45W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,300mAh ಬ್ಯಾಟರಿಯನ್ನು ಒಳಗೊಂಡಿರಬಹುದು. ಕ್ಯಾಮೆರಾದ ವಿಷಯದಲ್ಲಿ, ಇದು 50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಯುನಿಟ್ ಮತ್ತು 32-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿರಬಹುದು. ಡಿಸ್ಪ್ಲೇ ವಿಭಾಗದಲ್ಲಿ, ಹ್ಯಾಂಡ್‌ಸೆಟ್ 120Hz ರಿಫ್ರೆಶ್ ದರದೊಂದಿಗೆ ಫ್ಲಾಟ್ AMOLED ಡಿಸ್ಪ್ಲೇಯನ್ನು ಹೊಂದಿರಬಹುದು ಎನ್ನಲಾಗಿದೆ.

ಕೆಲವು ವರದಿಗಳ ಪ್ರಕಾರ, Realme 15 5G ಫೋನಿನ ನಿರೀಕ್ಷಿತ ಬೆಲೆ ಶ್ರೇಣಿಯು ₹18,000 ರಿಂದ ₹20,000 ನಡುವೆ ಇರಬಹುದು. ಅದೇ ರೀತಿ, Realme 15 Pro 5G ಫೋನ್ ₹25,000 ಸುತ್ತಮುತ್ತಲಿರುವ ಬೆಲೆಗೆ ಲಭ್ಯವಾಗಬಹುದು ಎಂದು ಊಹಿಸಲಾಗಿದೆ. Realme 15 ಸರಣಿಯ ಬಿಡುಗಡೆ ದಿನಾಂಕ ಮತ್ತು ಇತರ ವಿವರಗಳಿಗಾಗಿ ಕಂಪನಿಯ ಅಧಿಕೃತ ಘೋಷಣೆಯ ನಿರೀಕ್ಷೆ ಮಾಡಬೇಕಾಗಿದೆ. ಒಂದು ವೇಳೆ, ಈ ನಿರೀಕ್ಷಿತ ಆರಂಭಿಕ ಬೆಲೆಯಲ್ಲಿಯೇ Realme 15 ಸರಣಿಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾದರೆ, ಗ್ರಾಹಕರಿಗೆ ಸಂತೋಷವಾಗಬಹುದು.

ಭಾರತದಲ್ಲಿ Realme 15 5G ಫೋನ್ ಬಿಡುಗಡೆಗೊಳ್ಳುತ್ತಿರುವಾಗ, ಗಮನಿಸಬೇಕಾದ ಪ್ರಮುಖ ಅಂಶವೆಂದರೆ, Realme 14 5G ಯ ಮೂಲ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೊಂಡಿಲ್ಲ.!

Best Mobiles in India

English summary
Realme 15 series, featuring the Realme 15 5G and Realme 15 Pro 5G, is set to launch in India soon, as confirmed by the company in a press release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+