ಶಿಯೋಮಿ ಕಾಲ ಮುಗಿತಾ ಬಂತು; ಶುರುವಾಗಲಿದೆ ರಿಯಲ್ ಮಿ ಶಕೆ...!

|

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ರಿಯಲ್ ಮಿ ಹೆಸರಿನಲ್ಲಿ ಸ್ಮಾರ್ಟ್‌ಫೋನ್‌ ಲಾಂಚ್ ಮಾಡಿರುವ ಒಪ್ಪೋ, ಅತೀ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಯನ್ನು ಸೃಷ್ಠಿಸಿಕೊಂಡಿದೆ. ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುವ ಸಲುವಾಗಿಯೇ ಕಾಣಿಸಿಕೊಂಡ ರಿಯಲ್ ಮಿ 1 ಸ್ಮಾರ್ಟ್‌ಪೋನ್, ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡ ಪರಿಣಾಮವಾಗಿ, ಶೀಘ್ರವೇ ಮಾರುಕಟ್ಟೆಗೆ ರಿಯಲ್ ಮಿ 2 ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಿ ಒಪ್ಪೋ ಮುಂದಾಗಿದೆ..

ಶಿಯೋಮಿ ಕಾಲ ಮುಗಿತಾ ಬಂತು; ಶುರುವಾಗಲಿದೆ ರಿಯಲ್ ಮಿ ಶಕೆ...!

ಶೀಘ್ರವೇ ಮಾರುಕಟ್ಟೆಗೆ ರಿಯಲ್ ಮಿ 2 ಸ್ಮಾರ್ಟ್‌ಫೋನ್ ಕಾಲಿಡಲಿದ್ದು, ಇದಕ್ಕಿತಲೂ ಮುಂಚೆ ಈ ಸ್ಮಾರ್ಟ್‌ಫೋನ್ ಕುರಿತ ಫೋಟೋವೊಂದು ಲೀಕ್ ಆಗಿದೆ, ತನ್ನ ವಿನ್ಯಾಸದಿಂದಲೇ ಸದ್ದು ಮಾಡುತ್ತಿರುವ ರಿಯಲ್ ಮಿ 2, ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಹೊಸ ಅಧ್ಯಾಯವನ್ನು ಆರಂಭಿಸಿದರೂ ಆಶ್ಚರ್ಯಪಡಬೇಕಾಗಿಲ್ಲ. ಈ ಸ್ಮಾರ್ಟ್‌ಫೋನ್ ಬಿಡುಗಡೆ ಆಗುತ್ತಿರುವುದಕ್ಕೆ ಶಿಯೋಮಿ ಸೇರಿದಂತೆ ಹಲವು ಕಂಪನಿಗಳು ಬೆದರುತ್ತಿವೆ ಎನ್ನಲಾಗಿದೆ.

ನೋಚ್ ಡಿಸ್‌ಪ್ಲೇ:

ನೋಚ್ ಡಿಸ್‌ಪ್ಲೇ:

ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಹುಟ್ಟಿಹಾಕಿರುವ ನೋಚ್ ಡಿಸೈನ್ ಡಿಸ್‌ಪ್ಲೇಯನ್ನು ರಿಯಲ್ ಮಿ 2 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಲೀಕ್ ಆಗಿರುವ ಮಾಹಿತಿಯ ಪ್ರಕಾರ ಇದು 6.23 ಇಂಚಿನದಾಗಿದ್ದು, 19:9 ಅನುಪಾತದಿಂದ ಕೂಡಿದೆ. ಇದಲ್ಲದೇ ದೊಡ್ಡ ಡಿಸ್‌ಪ್ಲೇಯಾಗಿರುವ ಕಾರಣದಿಂದಾಗಿ ವಿಡಿಯೋ ನೋಡುವ ಮತ್ತು ಗೇಮಿಂಗ್ ಅನುಭವನ್ನು ಉತ್ತಮ ಪಡಿಸಲಾಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ರಿಯಲ್ ಮಿ 2 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ನೀವು ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಇದು ಈ ಸ್ಮಾರ್ಟ್‌ಫೋನ್‌ ಬೇಡಿಕೆಯ ಮೇಲೆ ಹೆಚ್ಚಿನ ಪರಿಣಾವನ್ನು ಬೀರಲಿದೆ ಎನ್ನಲಾಗಿದೆ. 16 + 2 MP ಕ್ಯಾಮೆರಾ ಸೆಟಪ್ ಅನ್ನು ರಿಯಲ್ ಮಿ 2 ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ.

ಬೆಲೆ:

ಬೆಲೆ:

ರಿಯಲ್ ಮಿ 2 ಸ್ಮಾರ್ಟ್‌ಫೋನ್ ಮೂರು ಮಾದರಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಹಿಂದಿನ ಫೋನ್ ಸಹ ಮಾರುಕಟ್ಟೆಯಲ್ಲಿ ಮೂರು ಆವೃತ್ತಿಯಲ್ಲಿ ದೊರೆಯುತ್ತಿದ್ದ ಕಾರಣಕ್ಕಾಗಿಯೇ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ರಿಯಲ್ ಮಿ 2 ಸ್ಮಾರ್ಟ್‌ಫೋನ್ ರೂ.15000ಕ್ಕೆ ಆರಂಭಿಕ ಆವೃತ್ತಿಯೂ ದೊರೆಯಲಿದೆ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ಸಂಚಲನ:

ಮಾರುಕಟ್ಟೆಯಲ್ಲಿ ಸಂಚಲನ:

ರಿಯಲ್ ಮಿ 2 ಸ್ಮಾರ್ಟ್‌ಫೋನ್ ಲೀಕ್ ಇಮೇಜ್ ನೋಡುತ್ತಿದ್ದಂತೆ ಮಾರುಕಟ್ಟೆಯಲ್ಲಿ ಸಂಚಲನ ಶುರುವಾಗಿದ್ದು, ಈಗಾಗಲೇ ಹಲವು ಮಂದಿ ಈ ಸ್ಮಾರ್ಟ್‌ಫೋನ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೇ ಬೆಲೆಯ ವಿಭಾಗದಲ್ಲಿ ಹೆಚ್ಚಿನ ಸ್ಪರ್ಧೆಯನ್ನು ನಿರೀಕ್ಷಿಸಲಾಗುತ್ತಿದೆ.

Best Mobiles in India

English summary
Realme 2 leaks ahead of official announcement. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X