Just In
- 50 min ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- 1 hr ago
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- 1 hr ago
ಬ್ಯಾಂಕ್ ಹೆಸರಲ್ಲಿ ಬಂದ SMS ನಲ್ಲಿನ ಲಿಂಕ್ ಕ್ಲಿಕ್ ಮಾಡಿದ ಮಹಿಳೆ; ಮುಂದಾಗಿದ್ದೇನು?
- 3 hrs ago
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
Don't Miss
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Sports
IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್
- News
Srirangapatna bypass: ಸಂಚಾರಕ್ಕೆ ಮುಕ್ತವಾದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯ ಶ್ರೀರಂಗಪಟ್ಟಣ ಬೈಪಾಸ್
- Movies
ಮೊದಲ ವೀಕೆಂಡ್ನಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ದಾಖಲೆಯಲ್ಲಿ ಕೆಜಿಎಫ್ 2 ಹಿಂದಿಕ್ಕಿತಾ ಪಠಾಣ್?
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಿಯಲ್ ಮಿ 3 ಪ್ರೋ ಖರೀದಿಸುವುದು ಈಗಲೂ ಸೂಕ್ತವೇ?
ರಿಯಲ್ ಮಿ 3 2019 ರ ಆರಂಭದಲ್ಲಿ ಬಿಡುಗಡೆಗೊಂಡಿತ್ತು ಮತ್ತು ಅದರ ಯಶಸ್ಸಿನ ಸರಣಿ ರಿಯಲ್ ಮಿ 5 ಪ್ರೋ ಕೂಡ ಈಗಾಗಲೇ ಬಿಡುಗಡೆಗೊಂಡಿದೆ. ರಿಯಲ್ ಮಿ 3 ಈಗಲೂ ಕೂಡ ಗ್ರೇಟ್ ಸ್ಮಾರ್ಟ್ ಫೋನ್ ಎಂದು ನಾವು ಹೇಳಿದರೆ ನಿಮಗೆ ನಂಬಿಕೆ ಬರಲಿದೆಯಾ? ಹೌದು ಸೆಪ್ಟೆಂಬರ್ 29 ರಿಂದ ಆರಂಭವಾಗುತ್ತಿರುವ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಈ ಫೋನಿಗೆ ಭರ್ಜರಿ ರಿಯಾಯಿತಿ ಕೂಡ ಇದೆ.

ರಿಯಲ್ ಮಿ 3 ಪ್ರೋ ಬಿಡುಗಡೆಗೊಂಡಾಗಿನ ಆರಂಭಿಕ ಬೆಲೆ 13,999 ರುಪಾಯಿಗಳು. ಫ್ಲಿಪ್ ಕಾರ್ಟಿನ ವಾರ್ಷಿಕ ಸೇಲ್ ನ ಭಾಗವಾಗಿ ಈ ಡಿವೈಸ್ ಇದೀಗ ನಿಮಗೆ 3,000 ರುಪಾಯಿ ರಿಯಾಯಿತಿಯಲ್ಲಿ ಅಂದರೆ ಕೇವಲ 10,999 ರುಪಾಯಿ ಬೆಲೆಗೆ ಸಿಗುತ್ತಿದೆ.
ಆದರೆ ನೆನಪಿನಲ್ಲಿಡಿ. ಯಾರು ಆನ್ ಲೈನ್ ಪಾವತಿ(ಪ್ರೀ-ಪೇಯ್ಡ್ ಆರ್ಡರ್) ಮಾಡುತ್ತಾರೆಯೋ ಅವರಿಗೆ ಮಾತ್ರ ಈ ಬೆಲೆ ಸಿಗುತ್ತದೆ. ಕ್ಯಾಷ್ ಆನ್ ಡೆಲಿವರಿ ಆಯ್ಕೆಯನ್ನು ಪಡೆಯುವವರು ಹೆಚ್ಚುವರಿ 1,000 ರುಪಾಯಿ ಪಾವತಿ ಮಾಡಬೇಕಾಗುತ್ತದೆ.

ಈಗಲೂ ರಿಯಲ್ ಮಿ 3 ಖರೀದಿಸುವುದು ಸೂಕ್ತವೇ?
ಖಂಡಿತವಾಗಲೂ ಸೂಕ್ತ. ಅದರಲ್ಲೂ 10,999 ರುಪಾಯಿ ಖಂಡಿತ ಬೆಲೆಬಾಳುವ ಫೋನ್ ಇದಾಗಿದೆ. ರಿಯಲ್ ಮಿ 3 ಪ್ರೋ 11,000 ರುಪಾಯಿ ಒಳಗೆ ಲಭ್ಯವಾಗುತ್ತಿರುವ ಮೋಸ್ಟ್ ಪವರ್ ಫುಲ್ ಸ್ಮಾರ್ಟ್ ಫೋನ್ ಆಗಿರುತ್ತದೆ. ಈ ಡಿವೈಸ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 710 ಸಾಕೆಟ್ ಜೊತೆಗೆ 4GB RAM ಮತ್ತು 64GB ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿರುತ್ತದೆ. ಆಂಡ್ರಾಯ್ಡ್ 10 ಓಎಸ್ ಬೇಟಾ ಅಪ್ ಡೇಟ್ ಈಗಾಗಲೇ ಈ ಸ್ಮಾರ್ಟ್ ಫೋನಿಗೆ ಲಭ್ಯವಾಗಿದೆ. ಆಂಡ್ರಾಯ್ಡ್ ಓಎಸ್ ನಲ್ಲಿ ಲಭ್ಯವಾಗುವ ಕೈಗೆಟುಕುವ ಬೆಲೆಯ ಬೆಸ್ಟ್ ಸ್ಮಾರ್ಟ್ ಫೋನ್ ಇದಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಕಂಪೆನಿಯು ಸ್ಟೇಬಲ್ ಆಗಿರುವ ಅಪ್ ಡೇಟ್ ನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ.
ಈ ಡಿವೈಸ್ 6.3 ಇಂಚಿನ ಐಪಿಎಸ್ ಎಲ್ ಸಿಡಿ ಸ್ಕ್ರೀನ್ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ನ್ನು ಹೊಂದಿದೆ. ಬಳಕೆದಾರರಿಗೆ ಹೆಚ್ ಡಿ ಮೂವಿಗಳು ಮತ್ತು ಡಿಆರ್ಎಂ ಲೈಸನ್ಸ್ ಇರುವ ಶೋಸ್ ಗಳು ಉದಾಹರಣೆಗೆ ಪ್ರೈಮ್ ವೀಡಿಯೋಗಳನ್ನು ಮತ್ತು ನೆಟ್ ಫ್ಲಿಕ್ಸ್ ಗಳನ್ನು ನೋಡುವುದಕ್ಕೆ ಡಿವೈಸ್ ಕಂಪೈಲ್ ಆಗಿದೆ ಜೊತೆಗೆ ವೈಡ್ ವೈನ್ ಎಲ್1 ಸರ್ಟಿಫಿಕೇಷನ್ ನ್ನು ಹೊಂದಿದೆ.

ಈ ಸ್ಮಾರ್ಟ್ ಫೋನ್ ನಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಇದ್ದು 16MP ಪ್ರೈಮರಿ ಸೆನ್ಸರ್ ಮತ್ತು 5MP ಡೆಪ್ತ್ ಸೆನ್ಸರ್ ವ್ಯವಸ್ಥೆ ಇದೆ. ಸಂಖ್ಯೆಗಳು ಖಂಡಿತ ನಿಮ್ಮ ಕುರುಡಾಗಿಸುವುದಿಲ್ಲ ಯಾಕೆಂದರೆ ಈ ಫೋನ್ ನಲ್ಲಿ ಪ್ರೀಮಿಯಂ ಸೋನಿ ಸೆನ್ಸರ್ ನ್ನು ಬಳಸಲಾಗಿದೆ. ಈ ಸೆನ್ಸರ್ ನ್ನು ಒನ್ ಪ್ಲಸ್ 6ಟಿಯಲ್ಲಿ ಬಳಸಲಾಗುತ್ತದೆ. ಫೋನ್ ನಲ್ಲಿ 25ಎಂಪಿ ಸೆಲ್ಫೀ ಕ್ಯಾಮರಾ ಇದೆ. ಇದು ಪಿಕ್ಸಲ್ ಬಿನ್ನಿಂಗ್ ತಂತ್ರಜ್ಞಾನವನ್ನು ಬಳಸುತ್ತದೆ ಆ ಮೂಲಕ ಕಡಿಮೆ ಬೆಳಕಿನ ಕಂಡೀಷನ್ ನಲ್ಲೂ ಕೂಡ ಉತ್ತಮ ಫೋಟೋಗ್ರಫಿ ಕೆಲಸಕ್ಕೆ ನೆರವಾಗುತ್ತದೆ.
4,045 mAh ಬ್ಯಾಟರಿಯ ಸಾಮರ್ಥ್ಯ ಈ ಸ್ಮಾರ್ಟ್ ಫೋನಿಗಿದ್ದು ಮೈಕ್ರೋ ಯುಎಸ್ ಬಿ ಪೋರ್ಟ್ ಮೂಲಕ VOOC ಫ್ಲ್ಯಾಶ್ ಚಾರ್ಜ್ 3.0 ಗೆ ಬೆಂಬಲ ನೀಡುತ್ತದೆ. ಈ ಬೆಲೆಯಲ್ಲಿ ಹೆಚ್ಚಿನ ಸ್ಮಾರ್ಟ್ ಫೋನ್ ಗಳು ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತವೆ ಆದರೆ ರಿಟೈಲ್ ಪ್ಯಾಕೇಜ್ ನ್ನು ಒಳಗೊಂಡಿರುವುದಿಲ್ಲ ಮತ್ತು ರಿಯಲ್ ಮಿ 3 ಪ್ರೋ 20W ಫಾಸ್ಟ್ ಚಾರ್ಜರ್ ನ್ನು ಬಾಕ್ಸ್ ನಲ್ಲಿ ಸೇರಿಸಿದೆ. ಹೆಚ್ಚಿನ ಸ್ಮಾರ್ಟ್ ಫೋನ್ ಗಳಂತೆ ಇದರಲ್ಲೂ ಡುಯಲ್ ನ್ಯಾನೋ ಸಿಮ್ ಕಾರ್ಡ್ ಸ್ಲಾಟ್ ಜೊತೆಗೆ ನಿರ್ಧಿಷ್ಟವಾಗಿರುವ ಮೈಕ್ರೋಎಸ್ ಡಿ ಕಾರ್ಡ್ ಸ್ಲಾಟ್ ನ್ನು ಹೊಂದಿರುತ್ತದೆ.

ರಿಯಲ್ ಮಿ 3 ಪ್ರೋ ಖರೀದಿಸಬಹುದೇ?
ಒಂದು ವೇಳೆ ನೀವು 12,000 ಬೆಲೆಯ ಒಳಗೆ ಯಾವುದೇ ಸ್ಮಾರ್ಟ್ ಫೋನ್ ನ್ನು ಹುಡುಕುತ್ತಿದ್ದರೆ ಖಂಡಿತ ರಿಯಲ್ ಮಿ 3 ಪ್ರೋ ಬೆಸ್ಟ ಆಯ್ಕೆಯಾಗಿದ್ದು ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಖರೀದಿಸಬಹುದು. ಮಿಡ್ ಟಯರ್ ರೇಂಜ್ ನಲ್ಲಿ ಲಭ್ಯವಾಗಬೇಕಾದ ಎಲ್ಲಾ ಸವಲತ್ತುಗಳನ್ನು ಈ ಸ್ಮಾರ್ಟ್ ಫೋನ್ ನಿಮಗೆ ನೀಡುತ್ತದೆ. ಸೋ ಹ್ಯಾಪಿ ಶಾಪಿಂಗ್!
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470