Realme 5 Pro: ಭಾರತದಲ್ಲಿ ರಿಯಲ್‌ಮಿ 5 ಪ್ರೊ ಸ್ಮಾರ್ಟ್‌ಫೋನ್‌ನ ಬೆಲೆ ಕಡಿತ!
ಚೀನಾದ ಸ್ಮಾರ್ಟ್‌ಫೋನ್ ಕಂಪೆನಿ ರಿಯಲ್ ಮಿ ಈಗಾಗ್ಲೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಕಮಾಲ್ ತೋರಿದೆ. ಸದ್ಯ ವೇಗವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಸ್ಮಾರ್ಟ್‌ಫೋನ್ ಆಗಿ ಗುರ್ತಿಸಿಕೊಂಡಿರುವ ರಿಯಲ್‌ಮಿ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ರಿಯಲ್‌ಮಿ 5ಪ್ರೊ ಸ್ಮಾರ್ಟ್‌ಫೋನ್ ಮೇಲಿನ ಬೆಲೆಯಲ್ಲಿ 1,000 ರೂ ಗಳನ್ನ ಕಡಿತಗೊಳಿಸಿದ್ದು ಗ್ರಾಹಕರನ್ನ ಆಕರ್ಷಿಸುತ್ತಿದ್ದು, ರಿಯಲ್‌ಮಿ5 ಪ್ರೊ ಸ್ಮಾರ್ಟ್‌ಫೋನ್ ಬಯಸುವವರು ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ.ಕಾಂ ನಲ್ಲಿ ಖರೀದಿಸಬಹುದಾಗಿದೆ.

ಹೌದು, ರಿಯಲ್‌ಮಿ ಕಂಪೆನಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಿದ್ದ ರಿಯಲ್‌ಮಿ 5 ಪ್ರೊ ಸ್ಮಾರ್ಟ್‌ಫೋನ್ ನ ಬೆಲೆಯನ್ನ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬೆಲೆ ಕಡಿತವನ್ನು ಮಾಡಿದ್ದು, ರಿಯಲ್‌ಮಿ 5ಪ್ರೊ ಸ್ಮಾರ್ಟ್‌ಫೋನ್ ಪ್ರಿಯರು ಫೋನ್ ಕೊಳ್ಳಲು ಇದು ಸಕಾಲ ಎಂದೇ ಹೇಳಬಹುದು. ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್ಪ್ಲೇ
ರಿಯಲ್ಮೆ 5 ಪ್ರೊ ಸ್ಮಾರ್ಟ್‌ಫೋನ್ ಉತ್ತಮ ರೆಸಲ್ಯೂಶನ್ ಹೊಂದಿರುವ 6.3-ಇಂಚಿನ ಫುಲ್ ಎಚ್‌ಡಿ+ ಡಿಸ್ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ ಯು ಯು ಶೇಪ್ ಅನ್ನು ಒಳಗೊಂಡಿದ್ದು, ಮೆಲ್ಬಾಗದಲ್ಲಿ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೆ ಡಿಸ್‌ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3+ ಅನ್ನು ಅಳವಡಿಸಲಾಗಿದ್ದು, ಸ್ಕ್ರೀನ್ ಉತ್ತಮ ವಿನ್ಯಾಸವನ್ನು ಒಳಗೊಂಡಿದೆ.

ಪ್ರೊಸೆಸರ್
ಇನ್ನು ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 712 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 9 ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದು 4GB RAM ಮತ್ತು 64GB, 6GB RAM ಮತ್ತು 64GB, ಹಾಗೂ 8GBRAM + 128GB ಶೇಖರಣಾ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯವಿದ್ದು, ಮೆಮೊರಿ ಕಾರ್ಡ್ ಮೂಲಕ 256GB ವರೆಗೆ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ
ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, ಮೊದಲನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್ ಸೆನ್ಸಾರ್, ಮೂರು ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇನ್ನು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನ ನೀಡಲಾಗಿದೆ.

ಬ್ಯಾಟರಿ ಮತ್ತು ಲಭ್ಯತೆ
ರಿಯಲ್ಮೆ 5 ಪ್ರೊ ಸ್ಮಾರ್ಟ್‌ಫೋನ್ 4,035mAh ಬ್ಯಾಟರಿ ಪ್ಯಾಕ್‌ಆಪ್ ಹೊಂದಿದ್ದು, VOOC 3.0 ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ರಿಯಲ್‌ಮಿ ಪ್ರೊ ಸ್ಮಾರ್ಟ್‌ಫೋನ್ ನ 4GB RAM ಮತ್ತು 64GB, ಮಾದರಿಗೆ 12,999 ರೂ,ಆಗಿದ್ದು. 6GB RAM ಮತ್ತು 64GB, ಮತ್ತು 8GBRAM + 128GB ಆಯ್ಕೆಗಳಲ್ಲಿ ಕ್ರಮವಾಗಿ ರೂ. 13,999 ಮತ್ತು ರೂ. 15,999 ರೂ. ಬೆಲೆಗೆ ಲಭ್ಯವಾಗಲಿದ್ದು. ಸ್ಪಾರ್ಕ್ಲಿಂಗ್ ಬ್ಲೂ ಮತ್ತು ಕ್ರಿಸ್ಟಲ್ ಗ್ರೀನ್ ಬಣ್ಣ ಆಯ್ಕೆಗಳಲ್ಲಿ ರಿಯಲ್‌ಮಿ.ಕಾಮ್ ಮತ್ತು ಫ್ಲಿಪ್‌ಕಾರ್ಟನಲ್ಲಿ ರಿಯಾಯಿತಿ ದರದಲ್ಲಿ ದೊರಯಲಿದೆ.


Click it and Unblock the Notifications




