Home
ಸುದ್ದಿಜಾಲ

64MP ಕ್ಯಾಮೆರಾದೊಂದಿಗೆ ಬರುತ್ತಾ ಹೊಸ ರಿಯಲ್‌ಮಿ ಸ್ಮಾರ್ಟ್‌ಫೋನ್‌..?

By Gizbot Bureau

ಪ್ರಸಿದ್ಧ ರಿಯಲ್‌ಮಿ ಕಂಪನಿ ತನ್ನ ಸ್ಮಾರ್ಟ್‌ಫೋನ್‌ ಸರಣಿಯನ್ನು ಮುಂದುವರೆಸುತ್ತಿದ್ದು, ರಿಯಲ್‌ಮಿ 3ರ ನಂತರ ರಿಯಲ್‌ಮಿ 5 ಸ್ಮಾರ್ಟ್‌ಫೋನ್‌ನ್ನು ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಅದಲ್ಲದೇ ಬಳಕೆದಾರರಿಗೆ ಕೈಗೆಟುಕುವ ದರಲ್ಲಿ ಹೊಸ ಮೊಬೈಲ್‌ನ್ನು ನೀಡಲು ಕಂಪನಿ ಪ್ಲಾನ್‌ ಮಾಡಿಕೊಂಡಿದೆ. ಇತ್ತೀಚಿನ ಕೆಲವು ಮಾಹಿತಿಗಳಂತೆ ಹೊಸ ಸ್ಮಾರ್ಟ್‌ಫೋನ್ 64MP ಕ್ಯಾಮೆರಾ ಹೊಂದಿರಲಿದೆ ಎಂಬುದು ಕೇಳಿಬರುತ್ತಿದೆ. ಆದರೆ, ಕಂಪನಿಯು ಬೇರೆ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದು, ರಿಯಲ್‌ಮಿ 5ನ್ನು ಮಾರುಕಟ್ಟೆಗೆ ಗ್ರಾಂಡ್‌ ಆಗಿ ಪರಿಚಯಿಸಲು ಸಜ್ಜಾಗಿದೆ.

64MP ಕ್ಯಾಮೆರಾ ಡೌಟ್

64MP ಕ್ಯಾಮೆರಾ ಡೌಟ್

ರಿಯಲ್‌ಮಿ 5 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ 64MP ಕ್ಯಾಮೆರಾ ಇರುವುದು ಡೌಟ್‌ ಎಂದು ಕೆಲವು ಉದ್ಯಮ ಮೂಲಗಳು ಹೇಳಿವೆ. ಆದರೆ, ಈ ಹಿಂದಿನ ಮಾಹಿತಿ ಮತ್ತು ಕೆಲವು ಸೋರಿಕೆಗಳಿಗೆ ಈ ಅಂಶ ವಿರುದ್ಧವಾಗಿದೆ. ಭಾರತದಲ್ಲಿ ರಿಯಲ್‌ಮಿ ಆಗಸ್ಟ್ 8ರಂದು ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿದ್ದು, ಅಲ್ಲಿ ರಿಯಲ್‌ಮಿ 5 ಮತ್ತು ರಿಯಲ್‌ಮಿ 5 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಪ್ರದರ್ಶಿಸುವ ಸಾಧ್ಯತೆಯಿದೆ.

ಕ್ವಾಡ್‌ ಕ್ಯಾಮೆರಾ ಮಾದರಿ

ಕ್ವಾಡ್‌ ಕ್ಯಾಮೆರಾ ಮಾದರಿ

ರಿಯಲ್‌ಮಿ 5 ಸರಣಿಯ ಸ್ಮಾರ್ಟ್‌ಫೋನ್‌ಗಳು 64MP ಕ್ಯಾಮೆರಾ ನೀಡದಿದ್ದರೂ, ಪ್ರಾಥಮಿಕ ಕ್ವಾಡ್ ಕ್ಯಾಮೆರಾ ಮಾದರಿಯನ್ನು ನೀಡುತ್ತವೆ ಎನ್ನಲಾಗಿದೆ, ರಿಯಲ್‌ಮಿ 5 ಸ್ಮಾರ್ಟ್‌ಫೋನ್ 16MP ಪ್ರಾಥಮಿಕ ಕ್ಯಾಮೆರಾ ಹೊಂದಿದರೆ, ರಿಯಲ್‌ಮಿ 5 ಪ್ರೊ ಸ್ಮಾರ್ಟ್‌ಫೋನ್‌ 48MP ಕ್ಯಾಮೆರಾ ಸೆನ್ಸಾರ್‌ ಹೊಂದಿರಲಿದೆ ಎಂಬ ಮಾಹಿತಿಯಿದೆ.

ಇದಲ್ಲದೆ, ಎರಡೂ ಹ್ಯಾಂಡ್‌ಸೆಟ್‌ಗಳು ಟೆಲಿಫೋಟೋ ಸೆನ್ಸಾರ್‌ನೊಂದಿಗೆ ಬರುತ್ತಿವೆ. ಕ್ವಾಲ್‌ಕಾಮ್ ಚಿಪ್‌ಸೆಟ್ ಮೂಲಕ ಸ್ಮಾರ್ಟ್‌ಫೋನ್‌ ಕಾರ್ಯನಿರ್ವಹಿಸಲಿದೆ. ಆದರೆ, ಇನ್ನಿತರ ಕನ್ಪಿಗರೇಷನ್‌ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಪ್ರೊ ಆವೃತ್ತಿ ಯು ಆಕಾರದ ನೋಚ್‌ನೊಂದಿಗೆ AMOLED ಡಿಸ್‌ಪ್ಲೇ ಹೊಂದಿರಲಿದೆ.

ಲಭ್ಯತೆ

ಲಭ್ಯತೆ

ಸದ್ಯ, ರಿಯಲ್‌ಮಿ 5 ಸರಣಿಯ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗೆ ಅಧಿಕೃತ ದಿನಾಂಕ ನಿಗದಿಯಾಗಿಲ್ಲ. ಆದರೆ, ಮಾಧವ್ ಸೇಠ್ ಅವರ ಇತ್ತೀಚಿನ ಟ್ವೀಟ್‌ನಲ್ಲಿ ಭಾರತದಲ್ಲಿ ಬಿಡುಗಡೆಯ ಬಗ್ಗೆ ಸುಳಿವನ್ನು ನೀಡಲಾಗಿದೆ. ಆಗಸ್ಟ್‌ 8ರ ಕಾರ್ಯಕ್ರಮದಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ರಿಯಲ್‌ಮಿ, ಯಾವ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತದೆ ಎಂಬುದು ಕುತೂಹಲವಾಗಿದೆ. ಇನ್ನು, ಆಗಸ್ಟ್ 15ರಂದು ಚೀನಾದಲ್ಲಿ ಕಾರ್ಯಕ್ರಮ ನಿಗದಿಯಾಗಿದ್ದು, ಅಲ್ಲಿ ರಿಯಲ್‌ಮಿ 5 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ನಿರೀಕ್ಷೆಯಿದೆ.

ನಮ್ಮ ಆಲೋಚನೆಗಳು

ನಮ್ಮ ಆಲೋಚನೆಗಳು

ಹೆಚ್ಚಿನ ಹಾರ್ಡ್‌ವೇರ್ ಫೀಚರ್‌ಗಳು ಇನ್ನು ಬಿಡುಗಡೆಯಾಗದ ಸಂದರ್ಭದಲ್ಲಿ ಕ್ವಾಡ್ ಕ್ಯಾಮೆರಾ ವ್ಯವಸ್ಥೆ ಪ್ರಮುಖ ಅಪ್‌ಗ್ರೇಡ್ ಆಗಿರುತ್ತದೆ. ರಿಯಲ್‌ಮಿ ಎಕ್ಸ್ ಸೇರಿದಂತೆ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಪನಿಯು ಡ್ಯುಯಲ್ ಲೆನ್ಸ್ ವ್ಯವಸ್ಥೆಯನ್ನು ನೀಡಿತ್ತು. ಈಗ ನಾವು ಟ್ರಿಪಲ್ ಲೆನ್ಸ್ ಸೆಟಪ್ ಹೊಂದಿರುವ ಸಾಧನ ನಿರೀಕ್ಷಿಸುತ್ತಿದ್ದೇವೆ. ಕ್ವಾಡ್ ಕ್ಯಾಮೆರಾ ಸಾಧನ ತರುವ ಕಂಪನಿಯ ಯೋಜನೆ ಉತ್ತಮವಾಗಿದ್ದು, ಮಧ್ಯಮ ಶ್ರೇಣಿ ವಿಭಾಗದಲ್ಲಿ ಬೇರೆ ಕಂಪನಿಗಳಿಗೆ ಕಠಿಣ ಸ್ಪರ್ಧೆಯನ್ನು ನಿರೀಕ್ಷಿಸಬಹುದು.

Best Mobiles in India

English summary
Realme 5, Realme 5 Pro To Come Sans 64MP Primary Camera
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+