ಜನವರಿ 6ಕ್ಕೆ ರಿಯಲ್‌ಮಿ 5I ಸ್ಮಾರ್ಟ್‌ಫೋನ್‌ ಲಾಂಚ್‌!

|

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ರಿಯಲ್‌ಮಿ ತನ್ನ ಮೊದಲ 5G ಫೋನ್ ಬಿಡುಗಡೆ ಮಾಡುವುದಕ್ಕು ಮುನ್ನವೇ ಮತ್ತೊಂದು ಸ್ಮಾರ್ಟ್‌ಫೋನ್‌ ಅನ್ನ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ. ಹೌದು ಜನವರಿ 7, 2020 ರಂದು 5G ಫೋನ್ ಲಾಂಚ್ ಮಾಡುವುದಾಗಿ ರಿಯಲ್‌ಮಿ ಕಂಪೆನಿ ಈ ಹಿಂದೆ ಹೇಳಿಕೊಂಡಿದೆ. ಇದೀಗ 5G ಫೋನ್ ರಿಯಲ್‌ಮಿ X50 ಬಿಡುಗಡೆಗೆ ಒಂದು ದಿ ಮೊದಲೇ ರಿಯಲ್‌ ಮಿ5i ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ ಎಂದು ಹೇಳಲಾಗ್ತಿದೆ.

ಹೌದು

ಹೌದು, ರಿಯಲ್‌ ಮಿ ಸ್ಮಾರ್ಟ್‌ಫೋನ್‌ ಕಂಪೆನಿ ರಿಯಲ್‌ಮಿ X50 5G ಸ್ಮಾರ್ಟ್‌ಫೋನ್‌ ಬಿಡುಗಡೆಗೂ ಮುನ್ನವೇ ರಿಯಲ್‌ಮಿ 5i ಸ್ಮಾರ್ಟ್‌ಫೋನ್‌‌ ಅನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ರಿಯಲ್‌ಮಿ 5, 5 ಪ್ರೊ ಮತ್ತು 5ಎಸ್ ಸ್ಮಾರ್ಟ್‌ಫೋನ್‌ ಬಿಡುಗಡೆಯಾದ ನಂತರ ಬಿಡುಗಡೆಯಾಗುತ್ತಿರುವ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಇದಾಗಿದ್ದು, ರಿಯಲ್‌ಮಿ ಕಂಪನಿಯು ಜನವರಿ 6 ರಂದು ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಅಷ್ಟಕ್ಕೂ ರಿಯಲ್‌ಮಿ5i ಸ್ಮಾರ್ಟ್‌ಫೋನ್‌ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಈಗಾಗಲೇ ರಿಯಲ್‌ ಮಿ5i ಸ್ಮಾರ್ಟ್‌ಫೋನ್‌ನ ವಿಶೇಷತೆಗಳೇನು ಅನ್ನೋದು ಆನ್‌ಲೈನ್‌ನಲ್ಲಿ ಲೀಕ್‌ ಆಗಿದ್ದು, ಲೀಕ್‌ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ 720 x 1600 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರುವ 6.52-ಇಂಚಿನ ಐಪಿಎಸ್ ಎಲ್‌ಸಿಡಿ ಎಚ್ಡಿ + ಡಿಸ್‌ಪ್ಲೇಯನ್ನ ಹೊಂದಿರಲಿದೆ ಎನ್ನಲಾಗ್ತಿದೆ. ಅಲ್ಲದೆ ಈ ಇದು ವಾಟರ್‌ಡ್ರಾಪ್ ಡಿಸ್‌ಪ್ಲೇಯನ್ನ ಹೊಂದಿರಲಿದ್ದು. ಈ ಸ್ಮಾರ್ಟ್‌ಫೋನ್‌ನ ಬಾಡಿ ಟು ಬಾಡಿ 102.6 ಅನುಪಾತವನ್ನ ಹೊಂದಿರಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ರಿಯಲ್‌ ಮಿ5i ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 665 SoC ಪ್ರೊಸೆಸರ್‌ ಹೊಂದಿದ್ದು ಅಂಡ್ರಾಯ್ಡ್‌9ಒಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ ಅಂಡ್ರಾಯ್ಡ್‌ 10 ಕಲರ್‌ ಒಎಸ್‌ಗೆ ಅಪ್‌ಡೇಟ್‌ ಮಾಡುವ ಸಾಧ್ಯತೆ ಕೂಡ ಇದೆ. ಇನ್ನು ಈ ಸ್ಮಾರ್ಟ್‌ಫೋನ್‌ 4GB RAM ಮತ್ತು 64GB ಶೇಖರಣಾ ಸಾಮರ್ಥ್ಯವನ್ನ ಹೊಂದಿದ್ದು ಮೆಮೊರಿ ಕಾರ್ಡ್‌ ಮೂಲಕ 256GB ವರೆಗೂ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ಸೆಟಪ್‌ ಹೊಂದಿದ್ದು ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದ್ದು, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸೆನ್ಸಾರ್‌ ಹೊಂದಿದೆ, ಅಲ್ಲದೆ ಮೂರು ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಸೆನ್ಸಾರ್‌ ಹೊಂದಿರಲಿದೆ. ಅಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಹೇಳಲಾಗ್ತಿದೆ.

ಬ್ಯಾಟರಿ ಮತ್ತು ಲಭ್ಯತೆ

ಬ್ಯಾಟರಿ ಮತ್ತು ಲಭ್ಯತೆ

ರಿಯಲ್‌ಮಿ 5i ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಪ್ಯಾಕಪ್‌ ಅನ್ನ ಹೊಂದಿದ್ದು, 10W ವೇಗದೊಂದಿಗೆ ಚಾರ್ಜಿಂಗ್‌ ಆಗುತ್ತದೆ. ಅಲ್ಲದೆ ವೈಫೈ , ಬ್ಲೂಟೂತ್‌,ಕನೆಕ್ಟಿವಿಟಿಯನ್ನ ಹೊಂದಿದೆ. ಎಫ್‌ಎಂ ರೆಡಿಯೋ ಆಯ್ಕೆಯನ್ನ ಸಹ ಹೊಂದಿರಲಿದೆ. ಇನ್ನು ಇದರ ಬೆಲೆ VND 4.29 ದಶಲಕ್ಷ( ಸುಮಾರು 13,200 ರೂ) ಇರಲಿದೆ ಎಂದು ಅಂದಾಜಿಸಲಾಗಿದ್ದು. ಬ್ಲೂ ಮತ್ತು ಗ್ರೀನ್‌ ಕಲರ್‌ನಲ್ಲಿ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

Most Read Articles
Best Mobiles in India

English summary
Smartphone maker Realme is likely preparing for the launch of a new smartphone in the coming days. However, this new smartphone will not be the highly anticipated Realme X50. In addition, the company seems to be ready to drop the Realme 5i in the market. This comes months after the launch of Realme 5, 5 Pro, and 5s. It makes Realme 5i the fourth smartphone in the list to join these existing devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more