ರಿಯಲ್ ಮಿ 5ಎಸ್, ರಿಯಲ್ ಮಿ ಎಕ್ಸ್2 ಪ್ರೋ ನವೆಂಬರ್ 20 ಕ್ಕೆ ಭಾರತದಲ್ಲಿ ಬಿಡುಗಡೆ
ನವೆಂಬರ್ 20 ರಂದು ಭಾರತದಲ್ಲಿ ರಿಯಲ್ ಮಿ ಎಕ್ಸ್2 ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಸ್ವಲ್ಪವೇ ಮಾಹಿತಿಯನ್ನು ವಾರಗಳ ಹಿಂದೆಯೇ ಕಂಪೆನಿ ಖಾತ್ರಿಗೊಳಿಸಿತ್ತು.

ಪ್ಲಿಪ್ ಕಾರ್ಟ್ ನಲ್ಲಿ ಟೀಸರ್:
ವಾರಗಳ ಹಿಂದೆ ಫ್ಲ್ಯಾಗ್ ಶಿಪ್ ರಿಯಲ್ ಮಿ ಎಕ್ಸ್2 ಪ್ರೋ ಫ್ಲಿಪ್ ಕಾರ್ಟ್ ನಲ್ಲಿ ಲಿಸ್ಟ್ ಆಗಿತ್ತು ಮತ್ತು ಅದರ ಜೊತೆಗೆ ಕೆಲವು ಪ್ರಮುಖ ವೈಶಿಷ್ಟ್ಯತೆಗಳ ಬಗ್ಗೆಯೂ ಕೂಡ ಹೇಳಲಾಗಿತ್ತು. ಇದೀಗ ಫ್ಲಿಪ್ ಕಾರ್ಟ್ ನ ಹೊಸ ಟೀಸರ್ ರಿಯಲ್ ಮಿ ಎಕ್ಸ್2 ಪ್ರೋ ಜೊತೆಗೆ ಚೀನಾ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ರಿಯಲ್ ಮಿ 5 ಅಕಾದ ಯಶಸ್ಸಿನ ಸರಣಿ ರಿಯಲ್ ಮಿ 5ಎಸ್ ನ್ನು ಕೂಡ ಬಿಡುಗಡೆಗೊಳಿಸಲಿದೆ ಎಂದು ತಿಳಿಸುತ್ತಿದೆ.ಇದಕ್ಕೆ ಸಂಬಂಧಿಸಿದಂತೆ ಬಿಡುಗಡೆಯ ದಿನಾಂಕ ಮತ್ತು ಬಜೆಟ್ ಸ್ಮಾರ್ಟ್ ಫೋನಿನ ಹೆಸರು, ಮುಂಬರುವು ರಿಯಲ್ ಮಿ 5ಎಸ್ ನ ಕೆಲವು ಪ್ರಮುಖ ವೈಶಿಷ್ಟ್ಯತೆಗಳನ್ನು ಕೂಡ ಫ್ಲಿಪ್ ಕಾರ್ಟ್ ಟೀಸರ್ ಬಹಿರಂಗ ಪಡಿಸುತ್ತಿದೆ.

ಪ್ಲಿಪ್ ಕಾರ್ಟ್ ಟೀಸರ್ ತಿಳಿಸುವ ಪ್ರಕಾರ ರಿಯಲ್ ಮಿ 5ಎಸ್ ನಲ್ಲಿ 48ಎಂಪಿ ಕ್ವಾಡ್ ಕ್ಯಾಮರಾ ಸೆಟ್ ಅಪ್ ಇರುತ್ತದೆ. ಇತರೆ ಎರಡು ರಿಯಲ್ ಮಿ 5 ಸರಣಿ ಸ್ಮಾರ್ಟ್ ಫೋನ್ ಗಳು ಅಕಾ ರಿಯಲ್ ಮಿ 5 ಮತ್ತು ರಿಯಲ್ ಮಿ 5 ಪ್ರೋ ಗಳು ಕೂಡ ಕ್ವಾಡ್ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿರುತ್ತದೆ. ಪ್ಲಿಪ್ ಕಾರ್ಟ್ ಟೀಸರ್ ಬಹಿರಂಗಪಡಿಸುವಂತೆ ಮುಂಬರುವ ರಿಯಲ್ ಮಿ 5ಎಸ್ "ಅಲ್ಟ್ರಾ-ಡೀಟೇಲ್ಡ್ ಪಿಕ್ಚರ್ಸ್" ನ್ನು ಕ್ಯಾಪ್ಚರ್ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಟೀಸರ್ ತಿಳಿಸುವ ಪ್ರಕಾರ ರಿಯಲ್ ಮಿ 5ಎಸ್ ನಲ್ಲಿ ಶೂಟ್ ಮಾಡಲಾಗಿರುವ ಪಿಕ್ಚರ್ ಗಳು ನೀವು ಝೂಮ್ ಮಾಡಿದಾಗಲೂ ಬಹಳ ಶಾರ್ಪ್ ಆಗಿ ಇರಲಿವೆಯಂತೆ.

ಫ್ಲಿಪ್ ಕಾರ್ಟ್ ಟೀಸರ್ ನಲ್ಲಿದೆ ಫೋಟೋ:
ಕೇವಲ ಕ್ಯಾಮರಾ ಫೀಚರ್ ಗಳ ಬಗ್ಗೆ ಅಷ್ಟೇ ಅಲ್ಲ ಬದಲಾಗಿ ಫ್ಲಿಪ್ ಕಾರ್ಟ್ ಟೀಸರ್ ನಲ್ಲಿ ರಿಯಲ್ ಮಿ 5ಎಸ್ ನ ಸಂಪೂರ್ಣ ಚಿತ್ರವನ್ನು ಕೂಡ ಹಾಕಲಾಗಿದೆ. ಈ ಪಿಕ್ಚರ್ ಬಹಿರಂಗಪಡಿಸುವಂತೆ ರಿಯಲ್ ಮಿ 5ಎಸ್ ರಿಯಲ್ ಮಿ 5 ನ ಡಿಸೈನ್ ನ್ನೇ ಹೊಂದಿರುತ್ತದೆ.ಸ್ಮಾರ್ಟ್ ಫೋನಿನಲ್ಲಿ ಸ್ಪೋರ್ಟ್ ಕ್ವಾಡ್ ಕ್ಯಾಮರಾ ಸೆಟ್ ಅಪ್ ಹಿಂಭಾಗದ ಪೆನಲ್ ನ ಮೇಲ್ಬಾಗದ ಎಡಗಡೆ ಇರಲಿದೆ. ಮಧ್ಯಭಾಗದಲ್ಲಿ ಹಿಂಭಾಗದ ಪೆನಲ್ ಇರಲಿದ್ದು ಅದರಲ್ಲಿ ಸರ್ಕ್ಯುಲರ್ ಆಗಿರುವ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಅಳವಡಿಸಲಾಗಿರುತ್ತದೆ.

ಫೋಟೋ ನೀಡುವ ಮಾಹಿತಿ:
ಹಿಂಭಾಗದ ಪೆನಲ್ ನ ಕೆಳಭಾಗದ ಎಡಬದಿಯಲ್ಲಿ ಬ್ರ್ಯಾಂಡ್ ಲೋಗೋ ಇರುತ್ತದೆ.ಚಿತ್ರದಲ್ಲಿ ಹೇಳಿರುವ ಪ್ರಕಾರ ಮುಂಬರುವ ರಿಯಲ್ ಮಿ 5ಎಸ್ ಕೆಂಪು ವರ್ಣದ್ದಾಗಿರುತ್ತದೆ. ನಾವು ನಿರೀಕ್ಷಿಸುವಂತೆ ರಿಯಲ್ ಮಿ5ಎಸ್ ನಲ್ಲಿ ಇನ್ನೂ ಅನೇಕ ಬಣ್ಣಗಳನ್ನು ಸಂಸ್ಥೆ ಬಿಡುಗಡೆಗೊಳಿಸಲಿದೆ. ಪ್ರಮುಖವಾಗಿ ಗಮನಿಸಬೇಕಾಗಿರುವ ಅಂಶವೇನೆಂದರೆ ಟೀಸರ್ ನಲ್ಲಿರುವ ಚಿತ್ರವು ಕೇವಲ ಫೋನಿನ ಹಿಂಭಾಗದ ಡಿಸೈನ್ ನ್ನು ಮಾತ್ರವೇ ತೋರಿಸುತ್ತದೆ.

ರಿಯಲ್ ಮಿ 5 ಎಸ್ ವೈಶಿಷ್ಟ್ಯತೆಗಳು:
ವೈಶಿಷ್ಟ್ಯತೆಗಳ ಬಗ್ಗೆ ಗಮನ ಹರಿಸುವುದೇ ಆದಲ್ಲಿ ರಿಯಲ್ ಮಿ 5ಎಸ್ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಂಡಿರುವ ರಿಯಲ್ ಮಿ 5 ಗಿಂತ ಹೆಚ್ಚೇನು ಭಿನ್ನವಾಗಿರಲಿಕ್ಕಿಲ್ಲ.ರಿಯಲ್ ಮಿ 5 6.5-ಇಂಚಿನ IPS LCD ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲ ಗ್ಲಾಸ್ 3+ ಪ್ರೊಟೆಕ್ಷನ್, ಸ್ನ್ಯಾಪ್ ಡ್ರ್ಯಾಗನ್ 665, 4GB ವರೆಗಿನ RAM ಮತ್ತು 128GB ಸ್ಟೋರೇಜ್ ವ್ಯವಸ್ಥೆ, ನಾಲ್ಕು ಹಿಂಭಾಗದ ಕ್ಯಾಮರಾಗಳು,13MP ಸೆಲ್ಫೀ ಕ್ಯಾಮರಾ, 5000mAh ಬ್ಯಾಟರಿ ಮತ್ತು ಇತ್ಯಾದಿ ಸೌಲಭ್ಯವನ್ನು ಹೊಂದಿದೆ.

ಎರಡು ಫೋನ್ ಗಳು ಬಿಡುಗಡೆ:
ನವೆಂಬರ್ 20 ರಂದು ರಿಯಲ್ ಮಿ ಎರಡು ಪ್ರಮುಖ ಫೋನ್ ಗಳನ್ನು ಬಿಡುಗಡೆಗೊಳಿಸುತ್ತಿದೆ. ಅದರಲ್ಲಿ ಒಂದು ಕೈಗೆಟುಕುವ ಬೆಲೆಯ ರಿಯಲ್ ಮಿ 5ಎಸ್. ಎರಡನೆಯದ್ದು ಫ್ಲ್ಯಾಗ್ ಶಿಪ್ ಡಿವೈಸ್ ಆಗಿದ್ದು ಅದರ ಹೆಸರು ರಿಯಲ್ ಮಿ ಎಕ್ಸ್2 ಪ್ರೋ.ರಿಯಲ್ ಮಿ ಎಕ್ಸ್2 ಪ್ರೋ ಬಗ್ಗೆ ಈಗಾಗಲೇ ಕಂಪೆನಿಯು ಕೆಲವು ವಿವರಗಳನ್ನು ಹೇಳಿದೆ.

ರಿಯಲ್ ಮಿ ಎಕ್ಸ್ 2 ಪ್ರೋ ವೈಶಿಷ್ಟ್ಯತೆಗಳು:
ರಿಯಲ್ ಮಿ ಎಕ್ಸ್ 2 ಪ್ರೋ ಫೋನಿನ ಪ್ರಮುಖ ವೈಶಿಷ್ಟ್ಯತೆಯೆಂದರೆ ಈ ಫೋನ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್,ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್, ಸೂಪರ್ AMOLED ಡಿಸ್ಪ್ಲೇ, 90hz ಡಿಸ್ಪ್ಲೇ,64MP ಪ್ರೈಮರಿ ಹಿಂಭಾಗದ ಕ್ಯಾಮರಾ, ಕ್ವಾಡ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಹೊಂದಿರುತ್ತದೆ ಮತ್ತು 50W ಸೂಪರ್ ಫ್ಲ್ಯಾಶ್ ಚಾರ್ಜಿಂಗ್ ಗೆ ಬೆಂಬಲವನ್ನು ಇದು ನೀಡುತ್ತದೆ.


Click it and Unblock the Notifications








