Home
ಸುದ್ದಿಜಾಲ

ಭಾರತದಲ್ಲಿ ರಿಯಲ್‌ಮಿ 9 ಪ್ರೊ 5G ಫೋನ್‌ ಸರಣಿ ಬಿಡುಗಡೆ! ಬೆಲೆ ಎಷ್ಟು?

ಬಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ರಿಯಲ್‌ಮಿ ಕಂಪೆನಿ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ರಿಯಲ್‌ಮಿ 9 ಪ್ರೊ 5G ಮತ್ತು ರಿಯಲ್‌ಮಿ 9ಪ್ರೊ + 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಜೊತೆಗೆ ಡೈನಾಮಿಕ್ RAM ವಿಸ್ತರಣೆಯನ್ನು ಒಳಗೊಂಡಿವೆ. ಇದು ಇಂಟರ್‌ಬಿಲ್ಟ್‌ ಸ್ಟೋರೇಜ್‌ ಬಳಸಿಕೊಂಡು RAM ಅನ್ನು 5GB ವರೆಗೆ ವಿಸ್ತರಿಸುವುದಕ್ಕೆ ಅವಕಾಶ ನೀಡಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪೆನಿ ಭಾರತದಲ್ಲಿ ಹೊಸ ರಿಯಲ್‌ಮಿ 9 ಪ್ರೊ 5G ಸರಣಿಯನ್ನು ಲಾಂಚ್‌ ಮಾಡಿದೆ. ಈ ಸರಣಿಯ ಸ್ಮಾರ್ಟ್‌ಫೋನ್‌ಗಳು ಸ್ಟ್ರೀಟ್ ಫೋಟೋಗ್ರಫಿ ಮೋಡ್ 2.0 ನೊಂದಿಗೆ ಪ್ರೀ ಲೋಡ್ ಆಗಿದೆ. ಇನ್ನು ರಿಯಲ್‌ಮಿ 9 ಪ್ರೊ 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 695 SoC ಪ್ರೊಸೆಸರ್‌ ಹೊಂದಿದೆ. ಆದರೆ ರಿಯಲ್‌ಮಿ 9ಪ್ರೊ+ 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಹಾಗಾದ್ರೆ ರಿಯಲ್‌ಮಿ 9 ಪ್ರೊ 5G ಸರಣಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ 9 ಪ್ರೊ 5G ಸ್ಮಾರ್ಟ್‌ಫೋನ್‌

ರಿಯಲ್‌ಮಿ 9 ಪ್ರೊ 5G ಸ್ಮಾರ್ಟ್‌ಫೋನ್‌

ರಿಯಲ್‌ಮಿ 9 ಪ್ರೊ 5G ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ HD+ LCD ಡಿಸ್‌ಪ್ಲೇಯನ್ನು ಹೊಂದಿದೆ. 120Hz (ಆರು-ಹಂತದ ಅಡಾಪ್ಟಿವ್) ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಡಾರ್ಟ್ ಚಾರ್ಜ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ v5.2, GPS/ A-GPS, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ.

ರಿಯಲ್‌ಮಿ 9 ಪ್ರೊ+ 5G ಸ್ಮಾರ್ಟ್‌ಫೋನ್‌

ರಿಯಲ್‌ಮಿ 9 ಪ್ರೊ+ 5G ಸ್ಮಾರ್ಟ್‌ಫೋನ್‌

ರಿಯಲ್‌ಮಿ 9 ಪ್ರೊ+ 5G ಸ್ಮಾರ್ಟ್‌ಫೋನ್‌ 6.4 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಇದು 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ಮತ್ತು 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾಟೆಕ್‌ ಡೈಮೆನ್ಸಿಟಿ 920 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 12 ಆಧಾರಿತ ರಿಯಲ್‌ಮಿ UI 3.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದ್ದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಬೆಂಬಲಿಸಲಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೋನಿ IMX355 ಸೆನ್ಸಾರ್‌ f/2.2 ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಒಳಗೊಂಡಿದೆ. ಇದಲ್ಲದೆ 16-ಮೆಗಾಪಿಕ್ಸೆಲ್ ಸೋನಿ IMX471 ಸೆಲ್ಫಿ ಕ್ಯಾಮೆರಾ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಪ್ರೈಮೆರಿ ಕ್ಯಾಮೆರಾ ಪ್ರೊಲೈಟ್‌ ಇಮೇಜಿಂಗ್ ಟೆಕ್ನಾಲಜಿಯನ್ನು ಹೊಂದಿದೆ. ಇದು ಉತ್ತಮ ಬೆಳಕಿನ ಸೇವನೆಯನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 60W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ v5.2, GPS/ A-GPS, USB-Type-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ.

ವಿಶೇಷ ಫೀಚರ್ಸ್‌

ವಿಶೇಷ ಫೀಚರ್ಸ್‌

ರಿಯಲ್‌ಮಿ 9 ಪ್ರೊ+ 5G ಸ್ಮಾರ್ಟ್‌ಫೋನ್‌ನಲ್ಲಿರುವ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಹಾಟ್‌ಬೀಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದು ಹೃದಯ ಬಡಿತ ಪತ್ತೆ ಮತ್ತು ರೆಕಾರ್ಡಿಂಗ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತದೆ. ಎಂಟು ವಿಭಿನ್ನ ಮಾದರಿಯ ಹಾರ್ಟ್‌ಬೀಟ್‌ ವಿಶ್ಯುಯಲ್‌ ಲೇಬಲ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಜನರಲ್‌, ವರ್ಕ್‌, ವ್ಯಾಯಾಮ, ವಿಶ್ರಾಂತಿ; ಉತ್ಸುಕತೆ, ಒತ್ತಡ, ಪೂರ್ಣ ಶಕ್ತಿ ಮತ್ತು ನಿದ್ರಾಹೀನತೆ ಸೇರಿವೆ. ಯಾವುದೇ ನಿರ್ದಿಷ್ಟ ಸಮಯದಲ್ಲಿ ತಮ್ಮ ಹೃದಯ ಬಡಿತವನ್ನು ಟ್ರ್ಯಾಕ್ ಮಾಡಲು ಬಳಕೆದಾರರಿಗೆ ಸಹಾಯ ಮಾಡಲು ಇವುಗಳನ್ನು ಕ್ಲೈಮ್ ಮಾಡಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ರಿಯಲ್‌ಮಿ 9 ಪ್ರೊ 5G ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆ ಬೇಸ್ ಮಾಡೆಲ್‌ 6GB RAM + 128GB ಸ್ಟೋರೇಜ್ ರೂಪಾಂತರಕ್ಕಾಗಿ 17,999ರೂ.ಬೆಲೆ ಹೊಂದಿದೆ. ಇನ್ನು 8GB + 128GB ಮಾದರಿಯ ಆಯ್ಕೆಗೆ 20,999.ರೂ ಬೆಲೆ ಹೊಂದಿದೆ. ಆದರೆ ರಿಯಲ್‌ಮಿ 9 ಪ್ರೊ + 5G ಸ್ಮಾರ್ಟ್‌ಫೋನ್‌ 6GB + 128GB ರೂಪಾಂತರದ ಆಯ್ಕೆಯ ಬೆಲೆ 24,999ರೂ.ಆಗಿದೆ. ಇದರ 8GB+128GB ಆಯ್ಕೆಯ ಬೆಲೆ 26,999ರೂ.ಆಗಿದೆ. ಇನ್ನು ಟಾಪ್-ಆಫ್-ಲೈನ್ 8GB + 256GB ಮಾಡೆಲ್ ಬೆಲೆ 28,999.ರೂ ಆಗಿದೆ. ಈ ಸ್ಮಾರ್ಟ್‌ಫೋನ್‌ಗಳು ಅರೋರಾ ಗ್ರೀನ್, ಮಿಡ್‌ನೈಟ್ ಬ್ಲ್ಯಾಕ್ ಮತ್ತು ಸನ್‌ರೈಸ್ ಬ್ಲೂ ಬಣ್ಣಗಳಲ್ಲಿ ಲಭ್ಯವಿರುತ್ತವೆ. ಇದರಲ್ಲಿ ರಿಯಲ್‌ಮಿ 9 ಪ್ರೊ 5G ಫೆಬ್ರವರಿ 23 ರಂದು ಮಧ್ಯಾಹ್ನ 12 ಗಂಟೆಯಿಂದ (ಮಧ್ಯಾಹ್ನ) ಮಾರಾಟವಾಗಲಿದೆ. ಆದರೆ ರಿಯಲ್‌ಮಿ 9 ಪ್ರೊ + 5G ಫೆಬ್ರವರಿ 21 ರಂದು 12 ಗಂಟೆಗೆ (ಮಧ್ಯಾಹ್ನ) ಖರೀದಿಗೆ ಲಭ್ಯವಿರುತ್ತದೆ. ಈ ಫೋನ್‌ಗಳು ಫ್ಲಿಪ್‌ಕಾರ್ಟ್‌, ರಿಯಲ್‌ಮಿ.ಕಾಮ್‌ ಸೈಟ್‌ಗಳಲ್ಲಿ ದೊರೆಯಲಿವೆ.

Best Mobiles in India

English summary
realme 9 pro 5g, realme 9 pro 5g price in india, realme 9 pro+ 5g, realme 9 pro 5g price in india, realme 9 pro 5g specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+