ಭಾರತದಲ್ಲಿ ರಿಯಲ್‌ಮಿ 9 ಪ್ರೊ ಸ್ಮಾರ್ಟ್‌ಫೋನ್ ಸರಣಿ ಲಾಂಚ್ ಡೇಟ್ ಫಿಕ್ಸ್!
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ರಿಯಲ್‌ಮಿ ಕಂಪೆನಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ರಿಯಲ್‌ಮಿ 9 ಪ್ರೊ ಸರಣಿಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇನ್ನು ಈ ಸ್ಮಾರ್ಟ್‌ಫೋನ್ ಇದೇ ಫೆಬ್ರವರಿ 16ರಂದು ಬಿಡುಗಡೆ ಆಗಲಿದೆ ಎಂದು ಲಾಂಚ್ ಡೇಟ್ ಬಹಿರಂಗಗೊಳಿಸಿದೆ. ಈ ಸ್ಮಾರ್ಟ್‌ಫೋನ್ ರಿಯಲ್‌ಮಿ 9 ಪ್ರೊ ಮತ್ತು ರಿಯಲ್‌ಮಿ 9 ಪ್ರೊ + ಮಾದರಿಯಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಿದೆ.

ಹೌದು, ರಿಯಲ್‌ಮಿ ಕಂಪೆನಿ ತನ್ನ ಹೊಸ ರಿಯಲ್‌ಮಿ 9 ಪ್ರೊ ಮತ್ತು ರಿಯಲ್‌ಮಿ 9 ಪ್ರೊ + ಸ್ಮಾರ್ಟ್‌ಫೋನ್ ಲಾಂಚ್ ಡೇಟ್ ಬಹಿರಂಗಗೊಳಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್ ಫೀಚರ್ಸ್ ಕೂಡ ಈಗಾಗಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಅದರಂತೆ ಈ ಸರಣಿಯ ಸ್ಮಾರ್ಟ್‌ಫೋನ್‌ಗಳು 5G ತಂತ್ರಜ್ಞಾನವನ್ನು ಬೆಂಬಲಿಸಲಿವೆ ಎಂದು ಹೇಳಲಾಗಿದೆ. ಜೊತೆಗೆ ರಿಯಲ್‌ಮಿ 9 ಪ್ರೊ + ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ರಿಯಲ್‌ಮಿ 9 ಪ್ರೊ ಸ್ಮಾರ್ಟ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಯಲ್‌ಮಿ 9 ಪ್ರೊ ಡಿಸ್‌ಪ್ಲೇ ವಿನ್ಯಾಸ
ರಿಯಲ್‌ಮಿ 9 ಪ್ರೊ ಸ್ಮಾರ್ಟ್‌ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇಯು ಅಮೋಲೆಡ್ ಡಿಸ್‌ಪ್ಲೇ ವಿನ್ಯಾಸ ಹೊಂದಿದೆ. ಇನ್ನು ಡಿಸ್‌ಪ್ಲೇ ರಚನೆಯ ಅನುಪಾತ 20:9 ಆಗಿದ್ದು, 120Hz ರಿಫ್ರೇಶ್ ರೇಟ್ ಒಳಗೊಂಡಿದೆ. ಜೊತೆಗೆ 430 ನಿಟ್ಸ್ ಬ್ರೈಟ್‌ನೆಸ್ ಅನ್ನು ಕೂಡ ಹೊಂದಿದೆ.

ಪ್ರೊಸೆಸರ್ ಯಾವುದು?
ರಿಯಲ್‌ಮಿ 9 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 5G ಪ್ರೊಸೆಸರ್ ಹೊಂದಿರುವ ಸಾಧ್ಯತೆ ಇದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಆದರೆ ರಿಯಲ್‌ಮಿ 9 ಪ್ರೊ+ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 5G ಪ್ರೊಸೆಸರ್ ಹೊಂದಿರಲಿದೆ ಎನ್ನಲಾಗಿದೆ.

ಕ್ಯಾಮೆರಾ ಹೇಗಿರಲಿದೆ?
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುತ್ತದೆ ಎಂದು ಅಧಿಕೃತ ಟೀಸರ್ ಬಹಿರಂಗಪಡಿಸುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಆದರೆ ರಿಯಲ್‌ಮಿ 9 ಪ್ರೊ+ಸ್ಮಾರ್ಟ್‌ಫೋನ್ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 OIS ಸೆನ್ಸಾರ್ ಹೊಂದಿರಲಿದೆ.

ಬ್ಯಾಟರಿ ಮತ್ತು ಇತರೆ
ರಿಯಲ್‌ಮಿ 9 ಪ್ರೊ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ ಎನ್ನಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಹಾಟ್‌ಸ್ಪಾಟ್, ಬ್ಲೂಟೂತ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ರಿಯಲ್‌ಮಿ 9 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್ ಬ್ಯಾಟರಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದಲ್ಲದೆ ರಿಯಲ್‌ಮಿ ಕಂಪೆನಿ ಭಾರತದಲ್ಲಿ ಇತ್ತೀಚಿಗೆ ಹೊಸ ರಿಯಲ್‌ಮಿ 9i ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೇಶ್ ರೇಟ್ ಅನ್ನು ಒಳಗೊಂಡಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ರಿಯಲ್‌ಮಿ UI 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ.
ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಡಾರ್ಟ್ ಚಾರ್ಜ್ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 13,999ರೂ ಆಗಿದೆ


Click it and Unblock the Notifications








