6000 ರೂ.ಗೆ 4230mAh ಬ್ಯಾಟರಿ, ನೋಚ್ ಡಿಸ್‌ಪ್ಲೇ, ಫೇಸ್‌ಲಾಕ್ ಸ್ಮಾರ್ಟ್‌ಫೋನ್!!

|

ಜನಪ್ರಿಯ ಮೊಬೈಲ್ ಬ್ರ್ಯಾಂಡ್ ರಿಯಲ್ ಮಿ ಭಾರತೀಯರಿಗೆ ಮತ್ತೊಂದು ಸಿಹಿಸುದ್ದಿ ನೀಡಲು ತಯಾರಾಗಿದೆ. ದೇಶದಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳ ಅತಿ ಹೆಚ್ಚು ಬೇಡಿಕೆಯನ್ನು ಕಂಡಿರುವ ರಿಯಲ್‌ಮಿ, ಇದೀಗ 6000 ಕ್ಕಿಂತ ಕಡಿಮೆ ಬೆಲೆಯಲ್ಲಿ ಡಿಸ್‌ಪ್ಲೇ ನೋಚ್, ಡ್ಯುಯಲ್ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಲು ಮುಂದಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

ಹೌದು, ದೇಶದಲ್ಲಿ ಶಿಯೋಮಿಗೆ ಸೆಡ್ಡು ಹೊಡೆಯುತ್ತಿರುವ ರಿಯಲ್‌ಮಿ ಕಂಪೆನಿ ಇದೀಗ 'ರಿಯಲ್ ಮಿ ಎ1' ಎಂಬ ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲು ತಯಾರಾಗಿದೆ ಎನ್ನಲಾಗಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ಗಾಳಿಸುದ್ದಿಯ ಪ್ರಕಾರ, ಇದೇ ಮಾರ್ಚ್ ತಿಂಗಳ ಅಂತ್ಯದ ವೇಳೆಗೆ ಈ ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

6000 ರೂ.ಗೆ 4230mAh ಬ್ಯಾಟರಿ, ನೋಚ್ ಡಿಸ್‌ಪ್ಲೇ, ಫೇಸ್‌ಲಾಕ್ ಸ್ಮಾರ್ಟ್‌ಫೋನ್!!

'ರಿಯಲ್ ಮಿ ಎ1' ಸ್ಮಾರ್ಟ್‌ಫೋನ್ ಸಂಪೂರ್ಣ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿರಲಿದ್ದುದೆಯಾದರೂ ಐಫೋನ್ X ಮಾದರಿಯ ನೋಚ್‌ನಲ್ಲಿ ಈ ಸ್ಮಾರ್ಟ್‌ಪೋನ್ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಹಾಗಾದರೆ, ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿರುವ ರಿಯಲ್‌ಮಿ ಕಂಪೆನಿಯ 'ರಿಯಲ್ ಮಿ ಎ1' ಫೋನ್ ಹೇಗಿರಲಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ರಿಯಲ್‌ ಮಿ ಎ1 ವಿನ್ಯಾಸ

ರಿಯಲ್‌ ಮಿ ಎ1 ವಿನ್ಯಾಸ

ರಿಯಲ್‌ ಮಿ ಕಂಪೆನಿ ಇತ್ತೀಚಿಗಷ್ಟೇ ಬಿಡುಗಡೆ ಮಾಡಿದ್ದ 'ರಿಯಲ್ ಮಿ C1' ಸ್ಮಾರ್ಟ್‌ಫೋನಿನ ವಿನ್ಯಾಸವನ್ನೇ ಈ ರಿಯಲ್‌ ಮಿ ಎ1 ಸ್ಮಾರ್ಟ್‌ಫೋನ್ ಕೂಡ ಹೊಂದಿರಲಿದೆ ಎಂದು ಹೇಳಲಾಗಿದೆ. ನೋಚ್ ಡಿಸ್‌ಪ್ಲೇ, ನೋಚ್ ಒಳಗೆ ಸೆಲ್ಫಿ ಕ್ಯಾಮೆರಾ, AI ಫೇಸ್‌ ಅನ್‌ಲಾಕ್ ಫೀಚರ್ ಜೊತೆಗೆ ಬೆಜಲ್ ಲೆಸ್‌ ಯುನಿಬಾಡಿ ಗ್ಲಾಸ್ ವಿನ್ಯಾಸವನ್ನು ಹೊಂದಿರಲಿದೆ ಎನ್ನಲಾಗಿದೆ.

ಡಿಸ್‌ಪ್ಲೇ ಸಾಮರ್ಥ್ಯ?

ಡಿಸ್‌ಪ್ಲೇ ಸಾಮರ್ಥ್ಯ?

ರಿಯಲ್‌ ಮಿ ಎ1 ಸ್ಮಾರ್ಟ್‌ಫೋನ್ 19:9 ಅನುಪಾತನದಲ್ಲಿ 6.2 ಇಂಚಿನ HD+ ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿರುವ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತೆ ಇರಲಿದೆ. 'ರಿಯಲ್ ಮಿ C1' ಸ್ಮಾರ್ಟ್‌ಫೋನಿನಲ್ಲಿನ ಡಿಸ್‌ಪ್ಲೇ ಸಾಮರ್ಥ್ಯ ಕೂಡ ಇದೇ ಆಗಿದೆ.

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

'ರಿಯಲ್ ಮಿ ಎ1' ನಲ್ಲಿ ಒಕ್ಟಾಕೋರ್‌ನ 1.8GHz ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 450 ಪ್ರೊಸೆಸರ್ ಇರಲಿದೆ ಎನ್ನಲಾಗಿದೆ. ಗೇಮಿಂಗ್‌ ಮತ್ತಿತರ ಮಲ್ಟಿಮೀಡಿಯಾ ಅನುಭವಗಳನ್ನು ಉತ್ತಮಗೊಳಿಸಲು ಆಡ್ರಿನೋ 506 GPU ಕೂಡ ಕಾಣಬಹುದಾಗಿದೆ. ಇದು ಆಂಡ್ರಾಯ್ಡ್ 8.1 ಓರಿಯೋ ಬೆಂಬಲಿತ ColorOS 5.1 ನಿಂದ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.

ಮೆಮೊರಿ ಸಾಮರ್ಥ್ಯ

ಮೆಮೊರಿ ಸಾಮರ್ಥ್ಯ

ರಿಯಲ ಮಿ ಎ1 ಸ್ಮಾರ್ಟ್‌ಫೋನ್ 2GB ಅಥವಾ 3GB RAM ವೇರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ ಎಂದು ಅಂದಾಜಿಸಲಾಗಿದೆ. 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ಕೂಡ ಇರಲಿದೆ.

ಕ್ಯಾಮೆರಾ ಸಾಮರ್ಥ್ಯ?

ಕ್ಯಾಮೆರಾ ಸಾಮರ್ಥ್ಯ?

ರಿಯಲ್ ಮಿ C1ನಲ್ಲಿ ನೀಡಲಾಗಿದ್ದ ಕ್ಯಾಮೆರಾ ಸೆಟಪ್ ಅನ್ನೇ ಈ ರಿಯಲ್ ಮಿ ಎ1 ಸ್ಮಾರ್ಟ್‌ಫೋನಿನಲ್ಲಿ ನೀಡಲಾಗುತ್ತಿದೆ. ಹಿಂಭಾಗದಲ್ಲಿ 13 MP+2 MP ಲೆನ್ಸ್ ಡ್ಯುಯಲ್‌ ರಿಯರ್ ಕ್ಯಾಮೆರಾ ಅಳವಡಿಸಲಾಗಿದ್ದು,ಮುಂಭಾಗದಲ್ಲಿ 5 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. AI ಬೆಂಬಲಿತ ರಿಯಲ್ ಮಿ C1 ಸೆಲ್ಫಿ ಕ್ಯಾಮೆರಾ ಉತ್ತಮ ಕ್ಯಾಮೆರಾ ಎಂಬುದನ್ನು ಇಲ್ಲಿ ನಾವು ಗಮನಿಸಬೇಕು.

4230mAh ಬ್ಯಾಟರಿ

4230mAh ಬ್ಯಾಟರಿ

ರಿಯಲ್ ಮಿ ಎ1 ಸ್ಮಾರ್ಟ್‌ಫೋನಿನಲ್ಲಿ 4230mAh ಬ್ಯಾಟರಿ ಶಕ್ತಿಯನ್ನು ನೀಡಲಾಗುತ್ತದೆ ಎಂದು ಹೇಲಲಾಗಿದೆ, ಈಗಾಗಲೇ ರಿಯಲ್ ಮಿ C1 ಸ್ಮಾರ್ಟ್‌ಫೋನ್ ಹೊಂದಿರುವ ಬಹುಮುಖ್ಯ ಫೀಚರ್ ಇದಾಗಿದ್ದು, ಈ ಸ್ಮಾರ್ಟ್‌ಫೋನ್ ಎರಡು ದಿನಗಳ ಕಾಲ ಬ್ಯಾಟರಿ ಲೈಫ್ ನೀಡುತ್ತದೆ. ಅಲ್ಲದೇ ಪವರ್ ಸೇವಿಂಗ್ ಮೋಡ್ ಇದ್ದು, ದೀರ್ಘ ಬ್ಯಾಟರಿ ಬಾಳಿಕೆಯನ್ನು ಕಾಣಬಹುದು.

Best Mobiles in India

English summary
This entry-level smartphone is tipped to launch soon, close on the heels of the Realme U1 which was launched in India last month.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X