ಮೊಬೈಲ್ ಮಾರುಕಟ್ಟೆಯಲ್ಲಿ 4ನೇ ಸ್ಥಾನ ಪಡೆದ 'ರಿಯಲ್‌ಮಿ'ಗೆ ಇದೆ ದೊಡ್ಡ ಗುರಿ!!

|

2019ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಶೆ. 7 ರಷ್ಟು ಮಾರುಕಟ್ಟೆ ಪಾಲನ್ನು ಗಳಿಸಿಕೊಂಡು ಆಶ್ಚರ್ಯ ಮೂಡಿಸಿರುವ ರಿಯಲ್‌ಮಿ ಈ ವರ್ಷ 15 ದಶಲಕ್ಷ ಹ್ಯಾಂಡ್ಸೆಟ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಹಾಕಿಕೊಂಡಿದೆ. "ನಾವು ಈ ವರ್ಷ ಕನಿಷ್ಠ 15 ದಶಲಕ್ಷ ಹ್ಯಾಂಡ್ಸೆಟ್‌ಗಳನ್ನು ಮಾರಾಟ ಮಾಡಲು ಗುರಿ ಹೊಂದಿದ್ದೇವೆ ಮತ್ತು ಆ ಮಾರಾಟ ಸಂಖ್ಯೆಗಳನ್ನು ನಂಬುತ್ತೇವೆ" ಎಂದು ರಿಯಲ್ ಇಂಡಿಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಧವ್ ಶೆತ್ ಅವರು ತಿಳಿಸಿದ್ದಾರೆ.

ಹೌದು, 2018ರಲ್ಲಿ ಅಸ್ತಿತ್ವಕ್ಕೆ ಬಂದ ಆನ್‌ಲೈನ್ ಕೇಂದ್ರಿತ ಮೊಬೈಲ್ ಮಾರಾಟ ಕಂಪೆನಿ ರಿಯಲ್‌ಮಿ, ಈಗಾಗಲೇ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಬ್ರ್ಯಾಂಡ್ ಎಂಬ ಹೆಗ್ಗಳಿಕೆ ಪಡೆದಿದೆ. ಆನ್ಲೈನ್‌ನಲ್ಲಿ ಮಾತ್ರ ಬ್ರಾಂಡ್ ಆಗಿ ಪ್ರಾರಂಭವಾದ ರಿಯಲ್‌ಮಿ ಈಗ ಆಫ್ಲೈನ್ ​​ಚಾನೆಲ್‌ಗಳಲ್ಲೂ ಮಾರಾಟವಾಗುತ್ತಿದ್ದು, ರಿಯಲ್‌ಮಿ ಜನಪ್ರಿಯತೆಯಿಂದಾಗಿ, ಇದೀಗ ಮೆಟ್ರೋ ನಗರಗಳಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್‌ ಮಾರಾಟಕ್ಕೆ ಆರು ವಿಶೇಷ ಮಳಿಗೆಗಳನ್ನು ವರ್ಷಾಂತ್ಯದಲ್ಲಿ ಸ್ಥಾಪಿಸುವುದಾಗಿ ಮಾಧವ್ ತಿಳಿಸಿದ್ದಾರೆ.

ಮೊಬೈಲ್ ಮಾರುಕಟ್ಟೆಯಲ್ಲಿ 4ನೇ ಸ್ಥಾನ ಪಡೆದ 'ರಿಯಲ್‌ಮಿ'ಗೆ ಇದೆ ದೊಡ್ಡ ಗುರಿ!!

ಪ್ರಸ್ತುತ ರಿಯಲ್‌ಮಿ ಬ್ರ್ಯಾಂಡ್ ಮುಂಬೈ, ಹೈದರಾಬಾದ್, ಸೂರತ್, ಲುಧಿಯಾನ ಮತ್ತು ಚಂಡೀಗಢ ಸೇರಿದಂತೆ 50 ನಗರಗಳಲ್ಲಿ ಚಿಲ್ಲರೆ ಮಾರಾಟವನ್ನು ಹೊಂದಿದೆ ಮತ್ತು ಗ್ರಾಹಕರ ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು ಮುಂದಾಗಿದೆ. ಹಾಗಾಗಿ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ರಿಯಲ್‌ಮಿ ವಿಶೇಷ ಮಳಿಗೆಗಳನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ಇನ್ನು ರಿಯಲ್‌ಮಿ ಇತ್ತೀಚಿಗೆ ಬಿಡುಗಡೆ ಮಾಡಿರುವ ರಿಯಲ್‌ಮಿ 3 ಪ್ರೋ ಸ್ಮಾರ್ಟ್‌ಫೋನ್ ಹೆಚ್ಚು ಜನಪ್ರಿಯತೆಗಳಿಸಿರುವುದನ್ನು ನೀವಿಲ್ಲಿ ನೋಡಬಹುದು.

ರಿಯಲ್‌ ಮಿ 3 ಪ್ರೋ ಸ್ಮಾರ್ಟ್‌ಫೋನ್ 6.3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರೊಂದಿಗೆ ಸ್ನ್ಯಾಪ್‌ಡ್ರಾಗನ್ 710 SoC ಪ್ರೊಸೆಸರ್‌ ಶಕ್ತಿ ಒದಗಿಸಲಾಗಿದೆ. ಫೋನ್‌ ವೇಗವಾಗಿ ಮಲ್ಟಿಕಾಸ್ಕ್ ಕೆಲಸಗಳನ್ನು ನಿರ್ವಹಿಸಲಿದೆ. ಹಾಗೇ 4GB ಮತ್ತು 6GB RAM ಎರಡು ವೇರಿಯಂಟ್ ಮಾದರಿಗಳ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಹಾಗಾದರೇ ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ? ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್

ಡಿಸೈನ್

3D ಸ್ಪೀಡ್‌ ವೇ ಡಿಸೈನ್‌ನಲ್ಲಿ ಆಕರ್ಷಕ ರಚನೆಯನ್ನು ಹೊಂದಿದ್ದು, ಗ್ರೇಡಿಯಂಟ್ ಕಲರ್‌ ಫೋನಿನ ಅಂದ ಹೆಚ್ಚಿಸಿದೆ. ಡಿಸ್‌ಪ್ಲೇಯ ಸುತ್ತಲೂ ಅತೀ ಕಡಿಮೆ ಅಂಚನ್ನು ನೀಡಲಾಗಿದ್ದು, ಸಂಪೂರ್ಣ ಡಿಸ್‌ಪ್ಲೇಯ ಅನುಭವ ದೊರೆಯಲಿದೆ. ಹಾಗೇ ಡಿಸ್‌ಪ್ಲೇಯ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ 5 ಸಹ ನೀಡಲಾಗಿದೆ. ನಿಟ್ರೊ ಬ್ಲೂ ಮತ್ತು ಲೈಟ್‌ ಪರ್ಪಲ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

1,080 x 2,340 ಪಿಕ್ಸಲ್ ರೆಸಲ್ಯೂಶನ್‌ ನೊಂದಿಗೆ 6.3 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ರಚನೆಯ ನಡುವಿನ ರೆಶಿಯೋ ಶೇ.90.8% ಆಗಿದೆ ಹಾಗೂ ಅನುಪಾತವು 19.5:9 ಆಗಿದೆ. ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 409 PPI ಆಗಿದೆ. ಸಂಪೂರ್ಣ ಅಂಚುರಹಿತ ಡಿಸ್‌ಪ್ಲೇಯ ಅನುಭವ ನೀಡಲಿದೆ ಎನ್ನಲಾಗಿದೆ.

ಪ್ರೊಸೆಸರ್

ಪ್ರೊಸೆಸರ್

ರಿಯಲ್ ಮಿ 3 ಪ್ರೋ ಸ್ಮಾರ್ಟ್‌ಫೋನ್ ಕ್ಚಾಲ್ಕಮ್ ಚಿಪ್‌ ಸೆಟ್‌ನೊಂದಿಗೆ, ಸ್ನ್ಯಾಪ್‌ಡ್ರಾಗನ್ 710 AIE ಪ್ರೊಸೆಸರ್‌ ಹೊಂದಿದ್ದು, ಫೋನಿನ ಮಲ್ಟಿಟಾಸ್ಕ್‌ ಕಾರ್ಯವೈಖರಿಯು ವೇಗವಾಗಿರಲಿದೆ. ಹಾಗೇ ಆಂಡ್ರೆನೊ 616 GPU ಸಹ ಹೊಂದಿದ್ದು, ಇದರೊಂದಿಗೆ ಆಂಡ್ರಾಯ್ಡ್‌ 9.0 ಪೈ, ಆಧಾರಿತ ಕಲರ್‌ 6.0 ಓಎಸ್‌ ಈ ಫೋನಿನಲ್ಲಿ ಇರಲಿದೆ.

ಮೆಮೊರಿ

ಮೆಮೊರಿ

ರಿಯಲ್‌ ಮಿ 3 ಪ್ರೋ ಸ್ಮಾರ್ಟ್‌ಫೋನ್ ನಿರೀಕ್ಷೆಯಂತೆ ಎರಡು ವೇರಿಯಂಟ್‌ಗಳಲ್ಲಿ ಲಾಂಚ್ ಆಗಿದೆ. 4GB RAM ಮತ್ತು 64GB ಸಂಗ್ರಹ ಸಾಮರ್ಥ್ಯ ಹಾಗೂ 6GB RAM + 128GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಹೊಂದಿರುವ ವೇರಿಯಂಟ್‌ ಮಾದರಿಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ. ಕಂಪನಿಯ ಫ್ಲ್ಯಾಗ್‌ಶಿಪ್‌ ಮಾದರಿಯ ಸ್ಮಾರ್ಟ್‌ಫೋನ್‌ ಎನಿಸಿಕೊಂಡಿದೆ.

ಕ್ಯಾಮೆರಾ

ಕ್ಯಾಮೆರಾ

ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ರೇರ್ ಕ್ಯಾಮೆರಾವನ್ನು ಹೊಂದಿದ್ದು, ಪ್ರಾಥಮಿಕ ರೇರ್‌ ಕ್ಯಾಮೆರಾವು 16 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, ಸೋನಿಯ IMX519 ಸೆನ್ಸಾರ್‌ ಅನ್ನು ಹೊಂದಿರಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು 5ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, f/2.4 ಅಪರ್ಚರ್ ಇರಲಿದೆ. AI ಸೆನ್ಸಾರ್‌ ಪಡೆದುಕೊಂಡಿದ್ದು, ಫೋಟೋಗಳು ಅತ್ಯುತ್ತಮವಾಗಿ ಮೂಡಿಬರಲಿವೆ.

ಸೆಲ್ಫಿ ಕ್ಯಾಮೆರಾ

ಸೆಲ್ಫಿ ಕ್ಯಾಮೆರಾ

ರಿಯಲ್‌ ಮಿ 3 ಪ್ರೋ ಸ್ಮಾರ್ಟ್‌ಫೋನಿನಲ್ಲಿ 25 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದ್ದು, ಈ ಕ್ಯಾಮೆರಾವು f/2.0 ಅಪರ್ಚರ್ ಅನ್ನು ಹೊಂದಿದೆ. ಹಾಗೇ ಸೆಲ್ಫಿ ಕ್ಯಾಮೆರಾ 1/2.8 ಸೆನ್ಸಾರ್‌ನಲ್ಲಿ ಕೆಲಸ ಮಾಡಲಿದೆ. ರಿಯಲ್‌ ಮಿ 3 ಪ್ರೋ ಸ್ಮಾರ್ಟ್‌ಫೋನಿನ ಸೆಲ್ಫೀ ಕ್ಯಾಮೆರಾದಲ್ಲಿ ಹಲವು ಹೊಸದಾದ ಬ್ಯೂಟಿ ತಂತ್ರಜ್ಞಾನಗಳನ್ನು ರಿಯಲ್‌ಮಿ ಪರಿಚಯಿಸಿದೆ.

ಬ್ಯಾಟರಿ

ಬ್ಯಾಟರಿ

4045mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದ್ದು, ಇದರೊಂದಿಗೆ ಸ್ಮಾರ್ಟ್‌ಫೋನ್ ವೇಗದ ಚಾರ್ಜಿಂಗ್‌ಗಾಗಿ VOOC 3.0, ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ನೀಡಲಾಗಲಿದೆ. ಈ ತಂತ್ರಜ್ಞಾನದ ನೆರವಿನಿಂದ ಸ್ಮಾರ್ಟ್‌ಫೋನ್ ಕ್ವಿಕ್‌ ಆಗಿ ಚಾರ್ಜ್‌ ಪಡೆದುಕೊಳ್ಳಲಿದ್ದು, 30 ನಿಮಿಷದಲ್ಲಿ ಶೇ. 50% ಚಾರ್ಜ್‌ ಪಡೆದುಕೊಳ್ಳವ ಶಕ್ತಿಯನ್ನು ಒದಗಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರಿಯಲ್‌ ಮಿ 3 ಪ್ರೋ ಸ್ಮಾರ್ಟ್‌ಫೋನ್ ಇಂದು ಮೊದಲ ಸೇಲ್‌ ಆರಂಭವಾಗಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು. ನಿಟ್ರೊ ಬ್ಲೂ ಮತ್ತು ಲೈಟ್‌ ಪರ್ಪಲ್ ಬಣ್ಣಗಳ ಆಯ್ಕೆಗಳು ದೊರೆಯಲಿವೆ. ಇನ್ನು ರಿಯಲ್‌ ಮಿ 3 ಪ್ರೋ ಸ್ಮಾರ್ಟ್‌ಫೋನಿನ 4GB RAM+64GB ವೇರಿಯಂಟ್‌ ಬೆಲೆಯು 13,999ರೂ.ಗಳು ಹಾಗೂ 6GB RAM+128GB ಮಾದರಿಯ ವೇರಿಯಂಟ್‌ ಬೆಲೆ 16,999ರೂ.ಗಳು ಆಗಿದೆ.

Best Mobiles in India

English summary
Realme Aims to Sell 15 Million Phones in India This Year; Locks in on a Tough Battle With Xiaomi. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X