Home
ಸುದ್ದಿಜಾಲ

ಇದೇ ಮಾರ್ಚ್‌ 5ಕ್ಕೆ ರಿಯಲ್‌ಮಿ ಸ್ಮಾರ್ಟ್‌ಬ್ಯಾಂಡ್‌ ಲಾಂಚ್‌!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಬ್ಯಾಂಡ್‌, ಸ್ಮಾರ್ಟ್‌ ವಾಚ್‌, ಸೇರಿದಂತೆ ವೇರಿಯೆಬಲ್ಸ್‌ ಸ್ಮಾರ್ಟ್‌ ಡಿವೈಸ್‌ಗಳಿಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆ ದೊರೆಯುತ್ತಿದೆ. ಅದರಲ್ಲೂ ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ ಡಿವೈಸ್‌ಗಳಿಗೆ ಭಾರಿ ಬೇಡಿಕೆ ಇದ್ದು, ಈಗಾಗ್ಲೆ ಹಲವು ಮಾದರಿಯ ಸ್ಮಾರ್ಟ್ ಬ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇನ್ನು ಮಾರುಕಟ್ಟೆಯಲ್ಲಿ ಸಾಕಷ್ಟು ಕಂಪೆನಿಗಳ ಸ್ಮಾರ್ಟ್‌ ಡಿವೈಸ್‌ಗಳು ಲಭ್ಯವಿದ್ದರೂ ಗ್ರಾಹಕರು ಮಾತ್ರ ಬ್ರ್ಯಾಂಡ್‌ ಕಂಪೆನಿಗಳ ಸ್ಮಾರ್ಟ್‌ ಬ್ಯಾಂಡ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಇದೀಗ ರಿಯಲ್‌ಮಿ ಕಂಪೆನಿ ಕೂಡ ಹೊಸ ಸ್ಮಾರ್ಟ್‌ ಬ್ಯಾಂಡ್‌ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಹೌದು

ಹೌದು, ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ರಿಯಲ್‌ಮಿ ಸ್ಮಾರ್ಟ್‌ಪೋನ್‌ ಮಾತ್ರವಲ್ಲದೆ ಇತರೆ ಸ್ಮಾರ್ಟ್‌ ಪ್ರಾಡಕ್ಟಗಳನ್ನ ಸಹ ಮಾರುಕಟ್ಟೆಗೆ ಪರಿಚಯಿಸಿದೆ. ಈಗಾಗ್ಲೆ ಹಲವು ಮಾದರಿಯ ಸ್ಮಾರ್ಟ್‌ ಪ್ರಾಡಕ್ಟಗಳನ್ನ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿರುವ ರಿಯಲ್‌ಮಿ ಕಂಪೆನಿ ಇದೀಗ ತನ್ನ ಹೊಸ ಸ್ಮಾರ್ಟ್‌ಬ್ಯಾಂಡ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿದೆ ಹೇಳಿಕೊಂಡಿದೆ. ಸ್ಮಾರ್ಟ್ ಸ್ಕ್ರೀನ್, ಸ್ಮಾರ್ಟ್ ವಾಚ್, ಸ್ಮಾರ್ಟ್ ಸ್ಪೀಕರ್ ಮತ್ತು ಸ್ಮಾರ್ಟ್ ಇಯರ್‌ ಫೋನ್‌ಗಳನ್ನು ಒಳಗೊಂಡಿರುವ ನಾಲ್ಕು ಸ್ಮಾರ್ಟ್ ಹಬ್‌ಗಳನ್ನು ಮಾರುಕಟ್ಟೆಗೆ ತರಲು ಕಂಪೆನಿ ಪ್ಲ್ಯಾನ್‌ ಮಾಡಿಕೊಂಡಿದ್ದು, ಇದೆ ಮಾರ್ಚ್ 5 ರಂದು ರಿಯಲ್‌ಮಿ ಸ್ಮಾರ್ಟ್ ಬ್ಯಾಂಡ್ ಬಿಡುಗಡೆಯಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ರಿಯಲ್‌ಮಿ ಸ್ಮಾರ್ಟ್‌ಬ್ಯಾಂಡ್‌

ರಿಯಲ್‌ಮಿ ಸ್ಮಾರ್ಟ್‌ಬ್ಯಾಂಡ್‌

ಸದ್ಯ ರಿಯಲ್‌ಮಿ ಕಂಪೆನಿ ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್‌ಬ್ಯಾಂಡ್‌ಗೆ ಇನ್ನು ಯಾವುದೇ ರೀತಿಯ ಹೆಸರನ್ನು ಸೂಚಿಸಿಲ್ಲ. ಸದ್ಯ ರಿಯಲ್‌ಮಿ ಕಂಪೆನಿ ಇಂಟರ್‌ನೆಟ್‌ ಆಧಾರಿತ ಸ್ಮಾರ್ಟ್‌ ಡಿವೈಸ್‌ಗಳನ್ನ ಬಿಡುಗಡೆ ಮಾಡುವ ಮೊದಲ ಪ್ರಯತ್ನವಾಗಿ ಈ ಸ್ಮಾರ್ಟ್‌ಬ್ಯಾಂಡ್‌ ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗ್ತಿದೆ. ರಿಯಲ್‌ಮಿ ಕಂಪೆನಿ ಶೀಘ್ರದಲ್ಲೇ ಸ್ಮಾರ್ಟ್ ಬ್ಯಾಂಡ್ ಮತ್ತು ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದೆ ಆದರೂ ಮಾರ್ಚ್ 5 ರಂದು ಸ್ಮಾರ್ಟ್‌ಬ್ಯಾಂಡ್‌ ಬಿಡುಗಡೆಯಾಗಲಿದೆ ಅನ್ನೊದನ್ನ ರಿಯಲ್‌ಮಿ ಕಂಪೆನಿ ಸಿಇಒ ಮಾಧವ್ ಶೆಠ್‌ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.

ಸ್ಮಾರ್ಟ್‌ಬ್ಯಾಂಡ್‌ ವಿನ್ಯಾಸ

ಸ್ಮಾರ್ಟ್‌ಬ್ಯಾಂಡ್‌ ವಿನ್ಯಾಸ

ಈ ಸ್ಮಾರ್ಟ್‌ಬ್ಯಾಂಡ್‌ ಸ್ವಲ್ಪ ಬಾಗಿದ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದ್ದು, ಅದು ಬಳಕೆದಾರರ ಕೈನ ಮಣಿಕಟ್ಟಿನ ಮೇಲೆ ಬ್ಯಾಂಡ್ ಹೆಚ್ಚು ಆರಾಮವಾಗಿ ಕುಳಿತುಕೊಳ್ಳಲು ಸಹಾಯ ಮಾಡಲಿದೆ. ಅಲ್ಲದೆ ಈ ಸ್ಮಾರ್ಟ್‌ ಬ್ಯಾಂಡ್ ವಿನ್ಯಾಸ ಕಳೆದ ವರ್ಷ ಬಿಡುಗಡೆಯಾದ ಹಾನರ್ ಬ್ಯಾಂಡ್ 5 ಗೆ ಹೆಚ್ಚು ಕಡಿಮೆ ಹೋಲಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸದ್ಯ ಕಂಪೆನಿ ಹಂಚಿಕೊಂಡಿರುವ ಟ್ವಿಟ್ಟರ್‌ನಲ್ಲಿನ ವಿಡಿಯೋ ಪ್ರಕಾರ ಈ ಸ್ಮಾರ್ಟ್ ವಾಚ್ ವೃತ್ತಾಕಾರದ ಡಯಲ್ ಮತ್ತು ಕಪ್ಪು ಪಟ್ಟಿಯೊಂದಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.

ಸ್ಮಾರ್ಟ್‌ಬ್ಯಾಂಡ್‌ನ ವಿಶೇಷತೆ

ಸ್ಮಾರ್ಟ್‌ಬ್ಯಾಂಡ್‌ನ ವಿಶೇಷತೆ

ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ನಲ್ಲಿ ವಾಚ್‌ನ ಫೀಚರ್ಸ್‌ ಹೇಗಿರಲಿದೆ, ಇದರ ಗಾತ್ರವೇನು, ಇದರಲ್ಲಿ ಹೊಸದಾಗಿ ನೀಡಲಾಗಿರುವ ಹೊಸ ಮಾದರಿಯ ಫೀಚರ್ಸ್‌ಗಳೇನು ಅನ್ನುವುದರ ಬಗ್ಗೆ ಯಾವುದೇ ಮಾಹಿತಿಯನ್ನ ಕಂಪೆನಿ ಹಂಚಿಕೊಂಡಿಲ್ಲ. ಆದರೆ ಈ ಸ್ಮಾರ್ಟ್‌ಬ್ಯಾಂಡ್‌ ಉತ್ತಮ ವಾಚ್‌ ವಿನಬ್ಯಾಸವನ್ನು ಸಹ ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ
ಈ ಸ್ಮಾರ್ಟ್‌ಬ್ಯಾಂಡ್‌ನಲ್ಲಿ Aiot ವ್ಯವಸ್ಥೆಯನ್ನ ಉತ್ತಮ ಪಡಿಸಲು ರಿಯಲ್‌ಮಿ ರೀಮ್‌ಲಿಂಕ್‌ ಅಪ್ಲಿಕೇಶನ್‌ ಅನ್ನು ಹೊರತರಲಿದೆ. ಈ ಅಪ್ಲಿಕೇಶನ್‌ ಮೂಲಕ ಈ ಸ್ಮಾರ್ಟ್‌ ಬ್ಯಾಂಡ್‌ ಅನ್ನು ನಿಯಂತ್ರಿಸಲಾಗುತ್ತದೆ ಎಂದು ಹೇಳಲಾಗ್ತಿದೆ.

ಇತರೆ

ಇತರೆ

ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಬ್ಯಾಂಡ್‌ ಇದೇ ಮಾಚ್‌ 5ರಂದು ಬಿಡುಗಡೆಯಾಗಲಿದ್ದು, ಇದರ ಬೆಲೆ ಏನು ಅನ್ನೊದು ಇನ್ನು ಬಹಿರಂಗವಾಗಿಲ್ಲ. ಅಲ್ಲದೆ ಇದು ಯಾವ ಯಾವ ಬಣ್ಣದ ಆಯ್ಕೆಯಲ್ಲಿ ಖರೀದಿಸಲು ಲಭ್ಯವಾಗಲಿದೆ ಅನ್ನೊದು ಕೂಡ ಇನ್ನು ತಿಳಿದು ಬಂದಿಲ್ಲ.

Best Mobiles in India

English summary
Realme smart band is launching soon, after numerous teasers. Realme also showed off some of its upcoming devices in a short video shared on Twitter.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+