'ರಿಯಲ್‌ಮಿ' ಸ್ಮಾರ್ಟ್‌ಫೋನ್ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ!!

|

ಭಾರತದಲ್ಲಿ ಅತಿವೇಗವಾಗಿ ಬಳೆಯುತ್ತಿರುವ ಉದಯೋನ್ಮುಖ ಮೊಬೈಲ್ ಬ್ರಾಂಡ್‌ "ರಿಯಲ್‌ಮೀ' ಸ್ಮಾರ್ಟ್‌ಫೋನ್‌ಗಳು ಈಗ ದೇಶದ ಆಫ್‌ಲೈನ್‌ ಮಾರುಕಟ್ಟೆ ಪ್ರವೇಶಿಸಿವೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ "ರಿಯಲ್‌ಮಿ2, "ರಿಯಲ್‌ಮಿ2 ಪ್ರೋ' ಹಾಗೂ "ರಿಯಲ್‌ಮಿ ಸಿ1′ ಎಂಬ ಮೂರು ಸ್ಮಾರ್ಟ್‌ಫೋನ್‌ಗಳು ಈಗ ಆಫ್‌ಲೈನ್ ಮಾರುಕಟ್ಟೆಗೆ ಬಿಡುಗಡೆಯಾಗಿವೆ.

ಇಂದು ಮೊಬೈಲ್‌ಫೋನ್‌ ಎಂಬುದು ಜೀವನದ ಅವಿಭಾಜ್ಯ ಅಂಗದಂತಾಗಿದೆ. ಎಲ್ಲಾ ವ್ಯವಹಾರಗಳು ಆನ್‌ಲೈನ್‌ನಲ್ಲಿ ಮೊಬೈಲ್‌ ಮೂಲಕವೇ ನಡೆಯುತ್ತಿರುವುದರಿಂದ ಆಂಡ್ರಾಯ್ಡ್ ಮೊಬೈಲ್‌ ಅತ್ಯವಶ್ಯಕವಾಗಿದೆ. ಹಾಗಾಗಿ ಆನ್‌ಲೈನ್ ಮಾರುಕಟ್ಟೆಯಿಂದ ಆಫ್‌ಲೈನ್‌ ಮಾರುಕಟ್ಟೆಗೆ ತಮ್ಮ ಫೋನ್‌ಗಳನ್ನು ವಿಸ್ತರಿಸುತ್ತಿರುವುದಾಗಿ ಕಂಪನಿಯ ಸಿಇಒ ಮಾಧವ ಸೇಠ್ ಅವರು ಹೇಳಿದ್ದಾರೆ.

'ರಿಯಲ್‌ಮಿ' ಸ್ಮಾರ್ಟ್‌ಫೋನ್ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ!!

2019ರ ಜನವರಿ ಆರಂಭದಲ್ಲಿ ದೇಶದ ಹತ್ತು ನಗರಗಳ ಮಾರುಕಟ್ಟೆಯನ್ನು ರಿಯಲ್‌ಮಿ ಪ್ರವೇಶಿಸಿದ್ದು, ಪ್ರತಿ ತ್ತೈಮಾಸಿಕದ ಅಂತ್ಯದ ವೇಳೆಗೆ 50 ನಗರಗಳನ್ನು ಸೇರಿಸುವ ಉದ್ದೇಶವಿದ್ದು, ಬೆಂಗಳೂರು ನಗರದಲ್ಲಿ 150 ರಿಟೇಲ್ ಮಳಿಗೆ ಸೇರಿದಂತೆ ರಾಜ್ಯದಲ್ಲಿ ಒಟ್ಟ 500 ಮೊಬೈಲ್ ಮಳಿಗೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದು ಕಂಪೆನಿಯ ಮುಖ್ಯಸ್ಥರು ತಿಳಿಸಿದ್ದಾರೆ.

ಇನ್ನು ರಿಯಲ್‌ಮಿ2, "ರಿಯಲ್‌ಮಿ2 ಪ್ರೊ' ಹಾಗೂ ರಿಯಲ್‌ಮಿ ಸಿ1 ಎಂಬ ಮೂರು ಸ್ಮಾರ್ಟ್‌ಫೋನ್‌ಗಳನ್ನು ಆಫ್‌ಲೈನಿನಲ್ಲಿ ಖರೀದಿಸಬಹುದಾಗಿದ್ದು, ಅದರಲ್ಲಿ ರಿಯಲ್‌ಮಿ ಸಿ1 ಭಾರೀ ಮಾರಾಟವಾಗುತ್ತಿರುವ ಬಜೆಟ್ ಸ್ಮಾರ್ಟ್‌ಫೋನ್ ಹಾಗಿದೆ. ಹಾಗಾದರೆ, ರಿಯಲ್‌ಮೀ ಸಿ1 ಸ್ಮಾರ್ಟ್‌ಫೋನ್‌ ಹೇಗಿದೆ?, ಅದರ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ರಿಯಲ್‌ ಮಿ C1 ವಿನ್ಯಾಸ

ರಿಯಲ್‌ ಮಿ C1 ವಿನ್ಯಾಸ

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ ಓಷಿಯನ್ ಬ್ಲೂ ಮತ್ತು ಡೀಪ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿದ್ದು, ಮುಂಭಾಗದದಲ್ಲಿ ಐಫೋನ್ X ಮಾದರಿಯ ನೋಚ್‌ನಲ್ಲಿ ಸೆಲ್ಫಿ ಕ್ಯಾಮೆರಾ ಹೊಂದಿದ್ದು, AI ಫೇಸ್‌ ಅನ್‌ಲಾಕ್ ಫೀಚರ್‌ ಇದೆ. ಯುನಿಬಾಡಿ ಗ್ಲಾಸಿ ವಿನ್ಯಾಸ ಹೊಂದಿದ್ದು, ಬೆಜಲ್‌ ಲೆಸ್‌ ಡಿಸ್‌ಪ್ಲೇ ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ 6.2 ಇಂಚಿನ HD+ ಗುಣಮಟ್ಟದ 19:9 ಅನುಪಾತನದ ಡಿಸ್‌ಪ್ಲೇ ಹೊಂದಿದೆ. ಹೊಸ ಮಾದರಿಯ ಐಫೋನ್ X ಮಾದರಿಯ ನೋಚ್ ಡಿಸ್‌ಪ್ಲೇ ಹಾಗೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಇದು ವಿಡಿಯೋ ನೋಡುವ ಅನುಭವವನ್ನು ಉತ್ತಮ ಪಡಿಸಲಿದೆ. ಇದು ಆಂಡ್ರಾಯ್ಡ್ 8.1 ಓರಿಯೋ ಬೆಂಬಲಿತ ColorOS 5.1 ನಿಂದ ಕಾರ್ಯನಿರ್ವಹಿಸುತ್ತಿದ್ದು, ಆಂಡ್ರಾಯ್ಡ್ 9.0 ಪೈ ಅಪ್‌ಡೇಟ್ ದೊರೆಯಲಿದೆ.

ಪ್ರೊಸೆಸರ್

ಪ್ರೊಸೆಸರ್

ರಿಯಲ್ ಮಿ C1ನಲ್ಲಿ ಒಕ್ಟಾಕೋರ್‌ನ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 450 ಪ್ರೊಸೆಸರ್ ಅಳವಡಿಸಲಾಗಿದೆ. ಆಡ್ರಿನೋ 506 GPU ಕೂಡ ಕಾಣಬಹುದಾಗಿದ್ದು, ಗೇಮಿಂಗ್‌ ಮತ್ತೀತರ ಮಲ್ಟಿಮೀಡಿಯಾ ಅನುಭವಗಳನ್ನು ಉತ್ತಮಗೊಳಿಸಿತ್ತದೆ. ರಿಯಲ್‌ಮಿ C1ನ ವೇಗ 1.8GHz ಇದ್ದು, ಇಷ್ಟು ಕಡಿಮೆ ಬೆಲೆಯಲ್ಲಿ ದೊರೆಯುವ ಬೆಸ್ಟ್‌ ಸ್ಮಾರ್ಟ್‌ಫೋನ್‌ ಆಗಿದೆ.

ಮೆಮೊರಿ

ಮೆಮೊರಿ

ರಿಯಲ್ ಮಿ C1 ಒಂದೇ ಆವೃತ್ತಿಯಲ್ಲಿ ದೊರೆಯುತ್ತಿದ್ದು, 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿದೆ. ಈ ಮೆಮೊರಿಯನ್ನು ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 256 GBವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ರಿಯಲ್ ಮಿ C1ನಲ್ಲಿ ಅತಿ ಕಡಿಮೆ ಬೆಲೆಗೆ ಡ್ಯುಯಲ್‌ ಕ್ಯಾಮೆರಾ ನೀಡಿದ್ದು, ಹಿಂಭಾಗದಲ್ಲಿ 13 MP+2 MP ಲೆನ್ಸ್‌ ಅಳವಡಿಸಲಾಗಿದೆ. ಮುಂಭಾಗದಲ್ಲಿ 5 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಸೆಲ್ಫಿ ಕ್ಯಾಮೆರಾ AI ಬೆಂಬಲಿತವಾಗಿದ್ದು, ಉತ್ತಮ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ.

ದೀರ್ಘ ಬ್ಯಾಟರಿ

ದೀರ್ಘ ಬ್ಯಾಟರಿ

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ 4230mAh ಬ್ಯಾಟರಿ ಹೊಂದಿದ್ದು. ಎರಡು ದಿನಗಳ ಕಾಲ ಬ್ಯಾಟರಿ ಲೈಫ್ ನೀಡುತ್ತದೆ. ಅಲ್ಲದೇ ಪವರ್ ಸೇವಿಂಗ್ ಮೋಡ್ ಇದ್ದು, ದೀರ್ಘ ಬ್ಯಾಟರಿ ಬಾಳಿಕೆಯನ್ನು ಕಾಣಬಹುದು.

Most Read Articles
Best Mobiles in India

English summary
Realme on Thursday announced its entry into the offline segment as it ... MobilesNews; Realme to Be Available in Offline Retail Market. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more