ರಿಯಲ್‌ಮಿ ಬ್ಲ್ಯಾಕ್‌ ಫ್ರೈಡೇ ಸೇಲ್‌! ಫೋನ್‌ಗಳಿಗೆ 7,000 ರೂ ಡಿಸ್ಕೌಂಟ್‌!

|

ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿಗಳಲ್ಲಿ ಒಂದಾಗಿರುವ ರಿಯಲ್‌ಮಿ ತನ್ನ ಬ್ಲ್ಯಾಕ್‌ ಫ್ರೈಡೇ ಸೇಲ್‌ ಅನ್ನು ಘೋಷಣೆ ಮಾಡಿದೆ. ಇನ್ನು ಈ ಸೇಲ್‌ ಇದೇ ನವೆಂಬರ್ 27 ರಿಂದ ಪ್ರಾರಂಭವಾಗಲಿದೆ. ಬ್ಲ್ಯಾಕ್ ಫ್ರೈಡೇ ಯುಎಸ್‌ನಲ್ಲಿ ಥ್ಯಾಂಕ್ಸಿಂಗ್‌ ವಿಂಗ್ ದಿನದ ನಂತರ ಬರುವ ಒಂದು ವಾರ್ಷಿಕ ಕಾರ್ಯಕ್ರಮವಾಗಿದೆ. ಇದು ಕ್ರಿಸ್‌ಮಸ್ ಶಾಪಿಂಗ್ ಸೀಸನ್‌ ಆರಂಭವನ್ನು ಸೂಚಿಸುತ್ತದೆ. ಆದರೆ ಟೆಕ್ ಕಂಪನಿಗಳು ಇತ್ತೀಚೆಗೆ ತಮ್ಮ ಉತ್ಪನ್ನಗಳಿಗೆ ಭಾರಿ ರಿಯಾಯಿತಿ ನೀಡುವ ಮೂಲಕ ಬೇರೆ ರಾಷ್ಟ್ರಗಳಲ್ಲೂ ಆಚರಿಸಲು ಪ್ರಾರಂಭಿಸಿವೆ. ಸದ್ಯ ಇದೀಗ ರಿಯಲ್‌ಮಿ ಸಂಸ್ಥೆ ಭಾರತದಲ್ಲಿ ಗ್ರಾಹಕರಿಗೆ ಬ್ಲ್ಯಾಕ್‌ ಫ್ರೈಡೇ ಸೇಲ್‌ ಅನ್ನು ಆಯೋಜಿಸುತ್ತಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಸಂಸ್ಥೆ ಭಾರತದಲ್ಲಿ ನವೆಂಬರ್ 27 ರಿಂದ ಬ್ಲ್ಯಾಕ್‌ ಫ್ರೈಡೇ ಸೇಲ್‌ ಅನ್ನು ಆಯೋಜಿಸುತ್ತಿದೆ. ಇದು ನವೆಂಬರ್‌ 27ರ ಮಧ್ಯರಾತ್ರಿಯಿಂದ 24 ಗಂಟೆಗಳವರೆಗೆ ಮಾತ್ರ ನಡೆಯಲಿದೆ. ಇನ್ನು ಈ ಸೇಲ್‌ನಲ್ಲಿ ಸಾಕಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ರಿಯಲ್‌ಮಿ X3, X3 ಜೂಮ್‌ ಸ್ಮಾರ್ಟ್‌ಫೋನ್‌ಗಳ ಮೇಲೆ 4,000 ರೂ ಗಳವರೆಗೆ ರಿಯಾಯಿತಿಯನ್ನು ನೀಡಲಾಗುತ್ತೆ ಎನ್ನಲಾಗಿದೆ. ಇನ್ನು ಈ ಸೇಲ್‌ನಲ್ಲಿ ಯಾವೆಲ್ಲಾ ಆಫರ್‌ಗಳಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಯಲ್‌ಮಿ ಬ್ಲ್ಯಾಕ್ ಫ್ರೈಡೇ ಸೇಲ್

ರಿಯಲ್‌ಮಿ ಬ್ಲ್ಯಾಕ್ ಫ್ರೈಡೇ ಸೇಲ್ ರಿಯಲ್‌ಮಿ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಪ್ರಾರಂಭವಾಗಲಿದೆ. ಈ ಬ್ಲ್ಯಾಕ್ ಫ್ರೈಡೇ ಕೊಡುಗೆಗಳು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಎರಡರಲ್ಲೂ ಸಹ ಪಡೆದುಕೊಳ್ಳಲಿವೆ. ಅಲ್ಲಿರುವ ರಿಯಾಯಿತಿಯ ಮೇಲೆ ಮತ್ತು ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿನ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳಲ್ಲಿನ ಇಎಂಐ ವಹಿವಾಟಿನ ಮೇಲೆ ಇನ್ನೂ 5% ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಜೊತೆಗೆ ಆರು ತಿಂಗಳವರೆಗೆ ನೋ ಕಾಸ್ಟ್‌ EMI ಪಾವತಿ ಆಯ್ಕೆಯನ್ನು ಸಹ ನೀಡಲಾಗಿದೆ. ರಿಯಲ್‌ಮಿ ಬ್ಲ್ಯಾಕ್ ಫ್ರೈಡೇ ಸೇಲ್ ಕೇವಲ 24 ಗಂಟೆಗಳ ಕಾಲ ನಡೆಯುತ್ತಿರುವುದರಿಂದ, ಕಂಪನಿಯು ರಿಯಲ್‌ಮಿ ಡೇಸ್ ಸೇಲ್ ಅಡಿಯಲ್ಲಿ ಆಫರ್‌ಗಳನ್ನು ವಿಸ್ತರಿಸುತ್ತಿದ್ದು, ಇದು ಸ್ಮಾರ್ಟ್‌ಫೋನ್‌ಗಳಲ್ಲಿ ನವೆಂಬರ್ 30 ರವರೆಗೆ ಆಫರ್‌ ಮುಂದುವರಿಸಲಿದೆ.

ರಿಯಲ್‌ಮಿ X50 ಪ್ರೊ

ರಿಯಲ್‌ಮಿ X50 ಪ್ರೊ

ರಿಯಲ್‌ಮಿ X50 ಪ್ರೊ ಸ್ಮಾರ್ಟ್‌ಫೋನ್‌ ರಿಯಲ್‌ಮಿ ಬ್ಲ್ಯಾಕ್‌ ಪ್ರೈಡೇ ಸೇಲ್‌ನಲ್ಲಿ 7,000 ರೂ ಗಳ ವರೆಗೆ ರಿಯಾಯಿಯಿಯನ್ನ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್‌ ಬಲವನ್ನು ಪಡದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 8GB RAM ಮತ್ತು 128 GB ಸ್ಟೋರೇಜ್ ರೂಪಾಂತರದ ಮೂಲ ಬೆಲೆ 41,999 ರೂ ಆಗಿದ್ದರೆ ಇದೀಗ 34,999 ರೂ.ಗೆ ಲಭ್ಯವಾಗಲಿದೆ. 12GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಮೂಲ ಬೆಲೆ 47,999 ರೂ ಆಗಿದ್ದು, ಸದ್ಯ ಇದು 40,999 ರೂ.ಗೆ ಮಾರಾಟವಾಗಲಿದೆ.

ರಿಯಲ್‌ಮಿ X3

ರಿಯಲ್‌ಮಿ X3

ರಿಯಲ್‌ಮಿ X3 ಸ್ಮಾರ್ಟ್‌ಫೋನ್‌ ಈಗ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ 3,000 ರೂ.ವರೆಗೆ ರಿಯಾಯಿತಿಯನ್ನು ಪಡೆದುಕೊಂಡಿವೆ. ಇದರಲ್ಲಿ ರಿಯಲ್‌ಮಿ X3 6GB RAM ಮತ್ತು 128 GB ಸ್ಟೋರೇಜ್ ಸಾಮರ್ಥ್ಯದ ಸ್ಮಾರ್ಟ್ಫೋನ್‌ ಮೂಲಬೆಲೆ 24,999 ರೂ, ಆಗಿದ್ದು, ಇದು 21,999 ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ಇದರ 8GB RAM ಮತ್ತು 128GB ಸ್ಟೋರೇಜ್ ಮಾದರಿಯನ್ನು 22,999 ರೂಗಳಿಗೆ ಖರೀದಿಸಬಹುದಾಗಿದೆ. ಇದರ ಮೂಲ ಬೆಲೆ 25,999 ರೂ. ಆಗಿದೆ.

ರಿಯಲ್‌ಮಿ X3 ಸೂಪರ್ ಜೂಮ್

ರಿಯಲ್‌ಮಿ X3 ಸೂಪರ್ ಜೂಮ್

ಇನ್ನು ರಿಯಲ್‌ಮಿ ‍X3 ಸೂಪರ್‌ಜೂಮ್ ಸ್ಮಾರ್ಟ್‌ಫೋನ್‌ ಕ್ರಮವಾಗಿ 8GB RAM - 128 GB ಸ್ಟೋರೇಜ್ ಸಾಮರ್ಥ್ಯಕ್ಕೆ 27,999 ರೂ ಮೂಲಬೆಲೆಯಿಂದ 23,999 ರೂ,ಗೆ ಖರೀದಿಸಬಹುದಾಗಿದೆ. ಇನ್ನು 8GB RAM - 256GB ಸ್ಟೋರೇಜ್ ರೂಪಾಂತರದ ಫೋನ್‌ 25,999 ರೂ.ಗೆ ಲಭ್ಯವಾಗಲಿದೆ. ಇದರ ಮೂಲ ಬೆಲೆ 29,999 ರೂ ಆಗಿದೆ.

1,000 ರೂ ರಿಯಾಯಿತಿ

1,000 ರೂ ರಿಯಾಯಿತಿ

ಬ್ಲ್ಯಾಕ್ ಫ್ರೈಡೇ ಸೇಲ್ ಅಡಿಯಲ್ಲಿ ರಿಯಲ್‌ಮಿ ಹಲವಾರು ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು 1,000 ರೂ.ಗಳಿಂದ ಕಡಿತಗೊಳಿಸುತ್ತಿದೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿ ರಿಯಲ್‌ಮಿ C3, ರಿಯಲ್‌ಮಿ 6, ರಿಯಲ್‌ಮಿ 6I, ಮತ್ತು ರಿಯಲ್‌ಮಿ ನಾರ್ಜೊ 20 ಪ್ರೊ ಸೇರಿವೆ.

Most Read Articles
Best Mobiles in India

English summary
Realme has announced its Black Friday sale with offers and discounts on smartphones, wireless earbuds, smartwatch and more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X