ಶೀಘ್ರದಲ್ಲೇ ಭಾರತದಲ್ಲಿ ರಿಯಲ್‌ಮಿ ಬಡ್ಸ್‌ ಏರ್ 2 ಬಿಡುಗಡೆ!

|

ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ರಿಯಲ್‌ಮಿ ಕಂಪೆನಿ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಈ ಮೂಲಕ ಕಡಿಮೆ ಆವಧಿಯಲ್ಲಿಯೇ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲ ಇಯರ್‌ಬಡ್ಸ್‌, ಪವರ್‌ಬ್ಯಾಂಕ್‌ ಸೇರಿದಂತೆ ಇತರೆ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನು ಸಹ ಪರಿಚಯಿಸಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಮಡಿದೆ. ಸದ್ಯ ಇದೀಗ ತನ್ನ ಹೊಸ ರಿಯಲ್‌ಮಿ ಬಡ್ಸ್‌ ಏರ್‌ 2 ಅನ್ನು ಭಾರತದಲ್ಲಿ ಪರಿಚಯಿಸಲು ಸಿದ್ಧತೆ ನಡೆಸಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪೆನಿ ಹೊಸ ರಿಯಲ್‌ಮಿ ಬಡ್ಸ್ ಏರ್ 2 ಅನ್ನು ಭಾರತದಲ್ಲಿ ಇದೇ ಫೆಬ್ರವರಿ 24 ರಂದು ಲಾಂಚ್‌ ಮಾಡಲಿದೆ. ಇನ್ನು ಈ ಬಡ್ಸ್‌ ಏರ್ 2 ಬಿಡುಗಡೆಗೂ ಮುನ್ನವೇ ಇದರ ವಿಶೇಷತೆ ಏನು ಅನ್ನೊದು ಬಹಿರಂಗಗೊಂಡಿವೆ. ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಮುಂಬರುವ ನಿಜವಾದ ವೈರ್‌ಲೆಸ್ ಸ್ಟಿರಿಯೊ ಇಯರ್‌ಬಡ್ಸ್‌ ಫೀಚರ್ಸ್‌ ಮತ್ತು ವಿನ್ಯಾಸವನ್ನು ಪರಿಚಯಿಸಿದೆ. ಹಾಗಾದ್ರೆ ರಿಯಲ್‌ಮಿ ಬಡ್ಸ್‌ ಏರ್‌ 2 ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ ಬಡ್ಸ್ ಏರ್ 2

ರಿಯಲ್‌ಮಿ ಬಡ್ಸ್ ಏರ್ 2 ಗಾಗಿ ಮೀಸಲಾದ ಪೇಜ್‌ ಕಂಪನಿಯ ಸೈಟ್‌ನಲ್ಲಿ ಲೈವ್‌ ಆಗಿದೆ. ಈ ಪೇಜ್‌ ಇಯರ್‌ಬಡ್ಸ್‌ಗಳ ಬಿಡುಗಡೆ ವಿವರಗಳನ್ನು ನೀಡಿದೆ. ಜೊತೆಗೆ ಈ ಇಯರ್‌ಬಡ್ಸ್‌ ವಿನ್ಯಾಸ ಮತ್ತು ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ಇನ್ನು ಈ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳು ರಿಯಲ್ಮೆ ಬಡ್ಸ್ ಏರ್ ಪ್ರೊ ಮಾದರಿಯನ್ನೇ ಹೋಲುತ್ತವೆ. ಇದರಲ್ಲಿ ಎಎನ್‌ಸಿಯನ್ನು ಮುಂದುವರಿಸಿದರೆ, ರಿಯಲ್‌ಮಿ ಬಡ್ಸ್ ಏರ್ 2 22.5 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಕೇವಲ 10 ನಿಮಿಷಗಳ ಚಾರ್ಜಿಂಗ್ ಬಳಕೆದಾರರಿಗೆ ಎರಡು ಗಂಟೆಗಳ ಪ್ಲೇಬ್ಯಾಕ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಗೇಮಿಂಗ್

ಇದಲ್ಲದೆ ಗೇಮಿಂಗ್ ಮೋಡ್‌ನಲ್ಲಿ 88 ಮಿಲಿಸೆಕೆಂಡ್ ಸೂಪರ್ ಲೋ ಲೇಟೆನ್ಸಿ, 10 ಎಂಎಂ ಡೈಮಂಡ್ ಕ್ಲಾಸ್ ಹೈ-ಫೈ ಡ್ರೈವರ್‌ಗಳು ರಿಚ್‌ ಬಾಸ್, ಸ್ಪಷ್ಟವಾದ ಧ್ವನಿ ಮತ್ತು ಉತ್ತಮ ಆವರ್ತನ ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸುತ್ತವೆ ಎಂದು ಹೇಳಲಾಗುತ್ತದೆ. ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು 25DB ಎಂದು ರೇಟ್ ಮಾಡಲಾಗಿದೆ. ಇದು ರಿಯಲ್‌ಮಿ ಬಡ್ಸ್ ಏರ್ ಪ್ರೊ ನೀಡುವ 35 ಡಿಬಿ ಎಎನ್‌ಸಿಗಿಂತ ಸ್ವಲ್ಪ ಕಡಿಮೆ ಇರಲಿದೆ. ಇನ್ನು ರಿಯಲ್‌ಮಿ ಬಡ್ಸ್ ಏರ್ 2 ಜೊತೆಗೆ, ಕಂಪನಿಯು ಎರಡು ಹೊಸ ಫೋನ್‌ಗಳನ್ನು ನಾರ್ಜೊ ಶ್ರೇಣಿಯಲ್ಲಿ ಬಿಡುಗಡೆ ಮಾಡುವುದನ್ನು ದೃಡಪಡಿಸಿದೆ.

ರಿಯಲ್‌ಮಿ ಬಡ್ಸ್

ಇನ್ನು ರಿಯಲ್‌ಮಿ ಬಡ್ಸ್ ಏರ್ 2 ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಮತ್ತು 10mm ಡೈಮಂಡ್-ಕ್ಲಾಸ್ ಹೈ-ಫೈ ಡ್ರೈವರ್‌ಗಳನ್ನು ಹೊಂದಿದೆ. ಅಲ್ಲದೆ ರಿಯಲ್ಮೆ ಬಡ್ಸ್ ಏರ್ 2 ರ ವಿನ್ಯಾಸವು ಈ ಹಿಂದೆ ಪ್ರಾರಂಭಿಸಲಾದ ರಿಯಲ್ಮೆ ಬಡ್ಸ್ ಏರ್ ಪ್ರೊ ಮಾದರಿಯಲ್ಲಿಯನ್ನೇ ಹೋಲುತ್ತದೆ. ಇನ್ನು ಈ ಬಡ್ಸ್‌ ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಬರುತ್ತವೆ ಎನ್ನಲಾಗಿದೆ. ಇದರ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Best Mobiles in India

English summary
Realme Buds Air 2 specifications have been revealed ahead of its February 24 India launch.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X