ಭಾರತದ ಮಾರುಕಟ್ಟೆಯಲ್ಲಿ ರಿಯಲ್‌ಮಿಯ ಹೊಸ ಇಯರ್‌ಫೋನ್‌ ಬಿಡುಗಡೆ!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ರಿಯಲ್‌ಮಿ ಸಂಸ್ಥೆ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದೆ. ಅಲ್ಲದೆ ತನ್ನ ವಿಭಿನ್ನ ಇಯರ್‌ಫೋನ್‌ಗಳ ಮೂಲಕವೂ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನ ಭದ್ರಪಡಿಸಿಕೊಂಡಿದೆ. ಇದೀಗ ತನ್ನ ರಿಯಲ್‌ಮಿ ಬಡ್ಸ್ ಏರ್ ಪ್ರೊ ಮತ್ತು ಬಡ್ಸ್ ವಾಯರ್‌ಲೆಸ್ ಪ್ರೊ ಇಯರ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ರಿಯಲ್‌ಮಿ ಬಡ್ಸ್‌ ಏರ್‌ ಪ್ರೊ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಆಗಿದ್ದು, ಬಡ್ಸ್ ವಾಯರ್‌ಲೆಸ್ ಪ್ರೊ ನೆಕ್‌ಬ್ಯಾಂಡ್ ಶೈಲಿಯ ವಾಯರ್‌ಲೆಸ್ ವಿನ್ಯಾಸವನ್ನು ಹೊಂದಿದೆ.

ರಿಯಲ್‌ಮಿ ಸಂಸ್ಥೆ

ಹೌದು, ರಿಯಲ್‌ಮಿ ಸಂಸ್ಥೆ ತನ್ನ ರಿಯಲ್‌ಮಿ ಬಡ್ಸ್ ಏರ್ ಪ್ರೊ ಮತ್ತು ಬಡ್ಸ್ ವಾಯರ್‌ಲೆಸ್ ಪ್ರೊ ಇಯರ್‌ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಈ ಇಯರ್‌ಫೋನ್‌ಗಳು ಕ್ರಮವಾಗಿ 3,999 ರೂ ಮತ್ತು 4,999 ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಎರಡೂ ಹೊಸ ಜೋಡಿ ಇಯರ್‌ಫೋನ್‌ಗಳು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಸಿಸ್ಟಂ ಅನ್ನು ಹೊಂದಿವೆ. ಅಲ್ಲದೆ ಕಿವಿಯ ವಿನ್ಯಾಸಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಸಹ ಹೊಂದಿದೆ. ಇನ್ನುಳಿದಂತೆ ಈ ಇಯರ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ರಿಯಲ್‌ಮಿ ಬಡ್ಸ್ ಏರ್ ಪ್ರೊ

ರಿಯಲ್‌ಮಿ ಬಡ್ಸ್ ಏರ್ ಪ್ರೊ

ಇದು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಸಿಸ್ಟಂ ಅನ್ನು ಹೊಂದಿರುವ ರಿಯಲ್‌ಮಿ ಸಂಸ್ಥೆಯ ಮೊದಲ ವಾಯರ್‌ಲೆಸ್‌ ಇಯರ್‌ಫೋನ್‌ ಆಗಿದೆ. ಇನ್ನು ಈ ಬಡ್ಸ್ ಏರ್ ಪ್ರೊ 35DB ವರೆಗಿನ ಶಬ್ದ ಕಡಿತವನ್ನು ಭರವಸೆ ನೀಡುತ್ತದೆ. ಅಲ್ಲದೆ ಎಎನ್‌ಸಿ ಮತ್ತು ವಾಯ್ಸ್‌ ಕಾಲ್‌ಗಳಿಗಾಗಿ ಡ್ಯುಯಲ್-ಮೈಕ್ರೊಫೋನ್ ವ್ಯವಸ್ಥೆಯನ್ನು ಹೊಂದಿದೆ. ಜೊತೆಗೆ 94ms ಕಡಿಮೆ ಲೇಟೆನ್ಸಿ ಮೋಡ್, ಪಾರದರ್ಶಕತೆ ಮೋಡ್, ಇಯರ್‌ಫೋನ್‌ ಮತ್ತು ಕೇಸ್‌ನಲ್ಲಿ 25 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ವೇಗದ ಚಾರ್ಜಿಂಗ್, ಟಚ್ ಕಂಟ್ರೋಲ್‌ ಮತ್ತು IPX4 ವಾಟರ್‌ resistance ಅನ್ನು ಒಳಗೊಂಡಿದೆ.

ರಿಯಲ್‌ಮಿ ಬಡ್ಸ್ ವಾಯರ್‌ಲೆಸ್ ಪ್ರೊ

ರಿಯಲ್‌ಮಿ ಬಡ್ಸ್ ವಾಯರ್‌ಲೆಸ್ ಪ್ರೊ

ಬಡ್ಸ್ ವಾಯರ್‌ಲೆಸ್ ಪ್ರೊ, ಆಕ್ಟಿವ್‌ ನಾಯ್ಸ್‌ ಕ್ಯಾನ್ಸಕೇಶನ್‌ ಅನ್ನು ಹೊಂದಿದೆ. ಇದು ಪಾರದರ್ಶಕತೆ ಮೋಡ್, ಲೋ ಲೇಟೆನ್ಸಿ ಮೋಡ್, ಐಪಿಎಕ್ಸ್ 4 ವಾಟರ್ ರೆಸಿಸ್ಟೆನ್ಸ್ ಮತ್ತು ಫಾಸ್ಟ್ ಚಾರ್ಜಿಂಗ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ, ನೆಕ್‌ಬ್ಯಾಂಡ್ ಶೈಲಿಯ ಈ ಇಯರ್‌ಫೋನ್‌ ಪ್ರತಿ ಚಾರ್ಜ್‌ಗೆ 22 ಗಂಟೆಗಳವರೆಗೆ ಕ್ಲೈಮ್ ಮಾಡಲಾದ ಬ್ಯಾಟರಿ ಅವಧಿಯನ್ನು ಹೊಂದಿದೆ. ಹಾಗೇಯೇ 13.6 ಎಂಎಂ ಡೈನಾಮಿಕ್ ಆಡಿಯೋ ಡ್ರೈವರ್‌ಗಳಿಂದ ನಿಯಂತ್ರಿಸಲ್ಪಡುತ್ತವೆ. ಇನ್ನು ಈ ನೆಕ್‌ಬ್ಯಾಂಡ್‌ ಇಯರ್‌ಫೋನ್‌‌ ಎಲ್‌ಡಿಎಸಿ ಬ್ಲೂಟೂತ್ ಕೊಡೆಕ್‌ಗೆ ಬೆಂಬಲಿಸಲಿದ್ದು, ದೊಡ್ಡ ಡೇಟಾ ಸ್ಟ್ರೀಮ್‌ಗಳನ್ನು ನಿರ್ವಹಿಸುವ ಸಾಮರ್ಥ್ಯಕ್ಕೆ ಉತ್ತಮ ಧ್ವನಿ ಗುಣಮಟ್ಟವನ್ನು ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ರಿಯಲ್‌ಮಿ ಬಡ್ಸ್ ಏರ್ ಪ್ರೊ 4,999 ರೂ ಬೆಲೆಯನ್ನು ಹೊಂದಿದ್ದು, 500 ರೂ. ರಿಯಾಯಿತಿಯೊಂದಿಗೆ 4,499 ರೂಗಳಿಗೆ ಲಭ್ಯವಾಗಲಿದೆ. ಇದು ಅಕ್ಟೋಬರ್ 16 ರಿಂದ ರಿಯಲ್‌ಮಿ ಆನ್‌ಲೈನ್ ಸ್ಟೋರ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ ಮತ್ತು ಶೀಘ್ರದಲ್ಲೇ ದೇಶದ ವಿವಿಧ ಆಫ್‌ಲೈನ್ ಮಳಿಗೆಗಳಲ್ಲಿ ಲಭ್ಯವಾಗಲಿದೆ.ಇನ್ನು ರಿಯಲ್‌ಮಿ ಬಡ್ಸ್ ವಾಯರ್‌ಲೆಸ್ ಪ್ರೊ ಇಯರ್‌ಫೊನ್‌ ಕೂಡ ಅಕ್ಟೋಬರ್ 16 ರ ಮಧ್ಯರಾತ್ರಿಯಿಂದ ರಿಯಲ್‌ಮಿ ಆನ್‌ಲೈನ್ ಸ್ಟೋರ್ ಮತ್ತು ಅಮೆಜಾನ್‌ನಲ್ಲಿ ಖರೀದಿಗೆ ಲಬ್ಯವಾಗಲಿದೆ. ಇದರ ಬೆಲೆ 3,999 ರೂ ಆಗಿದ್ದು, ಪರಿಚಯಾತ್ಮಕ ವಾಗಿ 1,000 ರೂಗಳ ರಿಯಾಯಿತಿ ನೀಡುವುದರಿಂದ 2,999,ರೂ ಬೆಲೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Realme Buds Air Pro and Buds Wireless Pro earphones have been launched in India, priced at Rs. 3,999 and Rs. 4,999 respectively.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X