ದೇಶಿ ಮಾರುಕಟ್ಟೆಯಲ್ಲಿ ರಿಯಲ್‌ಮಿ ಬಡ್ಸ್ ಏರ್ ಪ್ರೊ ಮಾಸ್ಟರ್‌ ಎಡಿಷನ್‌ ಲಾಂಚ್‌!

|

ರಿಯಲ್‌ಮಿ ಸಂಸ್ಥೆ ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಇಯರ್‌ಬಡ್ಸ್ ಮಾರುಕಟ್ಟೆಯಲ್ಲೂ ಸೈ ಎನಿಸಿಕೊಂಡಿದೆ. ವಿವಿದ ಪ್ರಾಡಕ್ಟ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸಮಚಲನ ಮೂಡಿಸಿರುವ ರಿಯಲ್‌ಮಿ ಇದೀಗ ತನ್ನ ಹೊಸ ರಿಯಲ್‌ಮಿ ಬಡ್ಸ್ ಏರ್ ಪ್ರೊ ಮಾಸ್ಟರ್ ಎಡಿಷನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಇಯರ್‌ಬಡ್‌ಗಳನ್ನು ಜನಪ್ರಿಯ ಕಲಾವಿದ ಜೋಸ್ ಲೆವಿ ವಿನ್ಯಾಸಗೊಳಿಸಿದ್ದು, ಮೃದುವಾದ ಹೊಳಪುಳ್ಳ ಮಿರರ್‌ ಫಿನಿಶ್‌ ಅನ್ನು ಹೊಂದಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪೆನಿ ತನ್ನ ಹೊಸ ರಿಯಲ್‌ಮಿ ಬಡ್ಸ್ ಏರ್ ಪ್ರೊ ಮಾಸ್ಟರ್‌ ಅವೃತ್ತಿಯನ್ನ ಭಾರತದಲ್ಲಿ ಅನಾವರಣಗೊಳಿಸಿದೆ. ಇದು ಮಿರರ್‌ ಫಿನಿಶ್‌ ಅನ್ನು ಹೊಂದಿದ್ದು, ರಿಯಲ್‌ಮಿ ಬಡ್ಸ್ ಏರ್ ಪ್ರೊ ಮಾಸ್ಟರ್ ಆವೃತ್ತಿಯ ವಿಶೇಷತೆಗಳು ರಿಯಲ್‌ಮಿ ಬಡ್ಸ್ ಏರ್ ಪ್ರೊಗೆ ಹೋಲುತ್ತವೆ. ಇನ್ನು ಈ ಇಯರ್‌ಬಡ್ಸ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌, 94 ಮಿಲಿಸೆಕೆಂಡ್ ಸೂಪರ್ ಲೋ ಲೇಟೆನ್ಸಿ, ಮತ್ತು ಕರೆಗಳಿಗಾಗಿ ಡ್ಯುಯಲ್-ಮೈಕ್ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಅನ್ನು ಹೊಂದಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ಫೀಚರ್ಸ್‌ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ ಬಡ್ಸ್

ರಿಯಲ್‌ಮಿ ಬಡ್ಸ್ ಏರ್ ಪ್ರೊ ಮಾಸ್ಟರ್ ಎಡಿಷನ್ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದ್ದು, 94mm ಲೋ ಲೇಟೆನ್ಸಿ ಮೋಡ್ ಅನ್ನು ಒಳಗೊಂಡಿದೆ. ಜೊತೆಗೆ ಸುತ್ತುವರಿದ ಶಬ್ದವನ್ನು ಅನುಮತಿಸುವ ಪಾರದರ್ಶಕತೆ ಮೋಡ್ ಅನ್ನು ಸಹ ಒಳಗೊಂಡಿದೆ. ಇನ್ನು ರಿಯಲ್‌ಮಿ ಬಡ್ಸ್ ಏರ್ ಪ್ರೊ ಮಾಸ್ಟರ್ ಎಡಿಷನ್ 486mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 25 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ. ಇದರಲ್ಲಿ ಎಎನ್‌ಸಿ ಇರುವುದರಿಂದ, ನೀವು ಅವುಗಳನ್ನು 20 ಗಂಟೆಗಳವರೆಗೆ ಬಳಸಬಹುದು ಎಂದು ರಿಯಲ್‌ಮಿ ಸಂಸ್ಥೆ ಹೇಳಿಕೊಂಡಿದೆ. ಇದು ಏಳು ನಿಮಿಷಗಳ ಪ್ಲೇಬ್ಯಾಕ್ ನೀಡುವ 15 ನಿಮಿಷಗಳ ಚಾರ್ಜ್‌ನೊಂದಿಗೆ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಲಾಗುತ್ತದೆ.

ಇಯರ್‌ಬಡ್ಸ್‌

ಇನ್ನು ಈ ಹೊಸ ಇಯರ್‌ಬಡ್ಸ್‌ ಐಪಿಎಕ್ಸ್ 4 ನೀರಿನ ಪ್ರತಿರೋಧದೊಂದಿಗೆ ಬರುತ್ತವೆ. ಇಂಟೆಲಿಜೆನ್ಸ್‌ ನಾಯ್ಸ್‌ ಕ್ಯಾನ್ಸಕೇಶನ್‌ಗೆ ರಿಯಲ್‌ಮಿ S1 ಚಿಪ್ ಅನ್ನು ಹೊಂದಿವೆ. ತೀಕ್ಷ್ಣವಾದ ಮತ್ತು ಸ್ಪಷ್ಟವಾದ ಕರೆಗಳಿಗಾಗಿ ಡ್ಯುಯಲ್-ಮೈಕ್ ಶಬ್ದ ರದ್ದತಿಯೂ ಇದೆ. ಈ ಕೇಸ್‌ ವಿಶಿಷ್ಟವಾದ ಕೋಬಲ್ ಆಕಾರವನ್ನು ಹೊಂದಿದೆ ಮತ್ತು ಇಯರ್‌ಬಡ್‌ಗಳು ತಲಾ 5 ಗ್ರಾಂ ತೂಗುತ್ತವೆ. ಸ್ಮಾರ್ಟ್ ಉಡುಗೆ ಪತ್ತೆ, ಸ್ಪರ್ಶ ನಿಯಂತ್ರಣಗಳು ಮತ್ತು ಧ್ವನಿ ಸಹಾಯದಂತಹ ಫೀಚರ್ಸ್‌ಗಳನ್ನು ಸಂಯೋಜಿಸಲಾಗಿದೆ.

ರಿಯಲ್‌ಮಿ

ಇದರಲ್ಲಿ ಸ್ಮಾರ್ಟ್‌ಫೋನ್‌ಗಳೊಂದಿಗೆ ಸಂಪರ್ಕ ಸಾಧಿಸಲು ರಿಯಲ್‌ಮಿ ಲಿಂಕ್ ಅಪ್ಲಿಕೇಶನ್‌ನೊಂದಿಗೆ ರಿಯಲ್‌ಮಿ ಬಡ್ಸ್ ಏರ್ ಪ್ರೊ ಮಾಸ್ಟರ್ ಆವೃತ್ತಿ ಜೋಡಿಯನ್ನು ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ V5 ಅನ್ನು ಹೊಂದಿದೆ. ಇದು 10 ಎಂಎಂ ಡೈನಾಮಿಕ್ ಡ್ರೈವರ್‌ಗಳಿಂದ ನಿಯಂತ್ರಿಸಲ್ಪಡುತ್ತವೆ. ಎಎನ್‌ಸಿ ಮತ್ತು ಧ್ವನಿ ಕರೆಗಳಿಗಾಗಿ ಡ್ಯುಯಲ್-ಮೈಕ್ರೊಫೋನ್ ವ್ಯವಸ್ಥೆಯನ್ನು ಸಹ ಹೊಂದಿವೆ. ಇದು 35 ಡಿಬಿ ವರೆಗಿನ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಸಹ ನೀಡಲಾಗಿದೆ.

ರಿಯಲ್‌ಮಿ ಬಡ್ಸ್

ರಿಯಲ್‌ಮಿ ಬಡ್ಸ್ ಏರ್ ಪ್ರೊ ಮಾಸ್ಟರ್ ಆವೃತ್ತಿ ಭಾರತದಲ್ಲಿ 4,999 ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಹೊಸ ಇಯರ್‌ಬಡ್ಸ್‌ ಫಸ್ಟ್‌ ಸೇಲ್‌ ಜನವರಿ 8 ರಂದು ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ) ನಡೆಯಲಿದೆ. ಇದು ಫ್ಲಿಪ್‌ಕಾರ್ಟ್, ರಿಯಲ್‌ಮಿ.ಕಾಮ್ ಮತ್ತು ಪಾಲುದಾರಿಕೆ ಆಫ್‌ಲೈನ್ ಮಳಿಗೆಗಳ ಮೂಲಕ ಲಭ್ಯವಿರುತ್ತವೆ. ರಿಯಲ್‌ಮಿ ಬಡ್ಸ್ ಏರ್ ಪ್ರೊ ಮಾಸ್ಟರ್ ಆವೃತ್ತಿಯನ್ನು ಕಂಪನಿಯ ಸೈಟ್‌ನಲ್ಲಿ ‘ನ್ಯೂ ವೇವ್ ಸಿಲ್ವರ್' ಬಣ್ಣ ಆಯ್ಕೆಯಾಗಿ ಪಟ್ಟಿ ಮಾಡಲಾಗಿದೆ.

Best Mobiles in India

English summary
Realme Buds Air Pro Master Edition true wireless stereo (TWS) earbuds have launched alongside the Realme Watch S and the Realme Watch S Pro smartwatches in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X