ರಿಯಲ್‌ಮಿ ಟ್ರೂಲಿ ವೈಯರ್‌ಲೆಸ್‌ ಇಯರ್‌ಬಡ್ಸ್‌ ಬಿಡುಗಡೆ !

|

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ರಿಯಲ್‌ಮಿ ತನ್ನ ಮೊದಲ ಟ್ರೂಲಿ ವೈರ್‌ಲೆಸ್‌ ಇಯರ್‌ಬಡ್‌ ರಿಯಲ್‌ ಮಿ ಬಡ್ಸ್‌ ಏರ್‌ ಅನ್ನ ಬಿಡುಗಡೆ ಮಾಡಿದೆ. ಸದ್ಯ ರಿಯಲ್‌ ಮಿಯ ಇಯರ್‌ ಬಡ್‌ಗಳು ಆಪಲ್‌ನ ಏರ್‌ಪಾಡ್‌ಗಳಂತೆಯೆ ವಿನ್ಯಾಸವನ್ನ ಹೊಂದಿದೆ. ಜೊತಗೆ ಹೊಸ ವರ್ಷದ ನಂತರ ಇನ್ನಷ್ಟು ಸ್ಮಾರ್ಟ್‌ಪ್ರಾಡಕ್ಟ್‌ಗಳನ್ನ ಪರಿಚಯಿಸಲಿದ್ದೇವೆ ಎಂದು ಕಂಪೆನಿ ಹೇಳಿಕೊಂಡಿದೆ.

 ರಿಯಲ್‌ಮಿ

ಹೌದು ರಿಯಲ್‌ಮಿ ಟ್ರೂಲಿ ಇಯರ್‌ ಬಡ್ಸ್‌ ಬಿಡುಗಡೆ ಯಾಗಿದ್ದು ಈ ಇಯರ್‌ ಬಡ್ಸ್‌ 17 ಗಂಟೆಗಳ ಸಂಗೀತ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ, ಇನ್ನು ರಿಯಲ್ಮೆ ಬಡ್ಸ್ ಏರ್ 12 ಎಂಎಂ ಬಾಸ್ ಬೂಸ್ಟ್ ಡ್ರೈವರ್, ಮಲ್ಟಿ-ಲೇಯರ್ ಕಾಂಪೋಸಿಟ್ ಡಯಾಫ್ರಾಮ್ ಬೆಂಬಲವನ್ನೊ ಹೊಂದಿದೆ. ಈ ಬ್ಯಾಕ್‌ಅಪ್ ಇಯರ್‌ಬಡ್‌ ವೈರ್‌ಲೆಸ್ ಚಾರ್ಜಿಂಗ್ ಮಾದರಿಯನ್ನ ಒಳಗೊಂಡಿದ್ದು, ಸಂಗೀತ ಆಲಿಸಲು ಉತ್ತಮವಾದ ವಿನ್ಯಾಸಮಾಡಲಾಗಿದೆ ಎಂದು ಕಂಪೆನಿ ಹೇಳಿದೆ.

ಡ್ಯುಯಲ್

ಅಲ್ಲದೆ ಈ ಇಯರ್‌ಬಡ್‌ಗಳು ಡ್ಯುಯಲ್-ಚಾನೆಲ್ ಆಯ್ಕೆಯನ್ನ ಬೆಂಬಲಿಸಲಿದ್ದು, ಗೇಮಿಂಗ್ ಮೋಡ್ ಅನ್ನು ಸಹ ಹೊಂದಿದೆ. ಅಲ್ಲದೆ ವೈರ್‌ಲೆಸ್ ಚಾರ್ಜಿಂಗ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆಯನ್ನ ಹೊಂದಿದ್ದು, ಬಡ್ಸ್ ಏರ್‌ ಚಾರ್ಜಿಂಗ್ ಕೇಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ ಮತ್ತು ನೀವು ಕೇಬಲ್ ಬಳಸಿ ಚಾರ್ಜ್ ಮಾಡಲು ಬಯಸಿದರೆ ಅದು ಯುಎಸ್‌ಬಿ ಟೈಪ್-ಸಿ ಅನ್ನು ಸಹ ಒಳಗೊಂಡಿದೆ.

ಚಾರ್ಜಿಂಗ್

ಜೊತೆಗೆ ಈ ಇಯರ್‌ ಬಡ್‌ಗಳ ಚಾರ್ಜಿಂಗ್ ಕೇಸ್ ಕಿ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಆದ್ದರಿಂದ ಇದನ್ನು ಯಾವುದೇ ಕಿ-ಹೊಂದಾಣಿಕೆಯ ಚಾರ್ಜರ್‌ಗಳೊಂದಿಗೆ ಬಳಸಬಹುದು. ಜೊತೆಗೆ ಎರಡು ಮೈಕ್ರೊಫೋನ್, ಗೂಗಲ್ ಅಸಿಸ್ಟೆಂಟ್ ಮತ್ತು ಟಚ್‌ ಕಂಟ್ರೋಲ್‌ ಮೂಲಕ ಈ ಇಯರ್‌ ಬಡ್ಸ್‌ ಅನ್ನ ನಿಯಂತ್ರಿಸಬಹುದಾಗಿದೆ. ಇನ್ನು ಈ ಇಯರ್‌ಬಡ್‌ಗಳು ಬ್ಲೂಟೂತ್ 5.0 ಅನ್ನು ಪ್ಯಾಕ್ ಮಾಡಲಿವೆ.

ಇಯರ್‌ಬಡ್‌

ಇನ್ನು ರಿಯಲ್‌ ಮಿ ಬಡ್ಸ್‌ ಏರ್‌ನ ಒಂದೇ ಇಯರ್‌ಬಡ್‌ನ ತೂಕ 4.16 ಗ್ರಾಂ,ಇದ್ದು ಚಾರ್ಜಿಂಗ್ ಕೇಸ್ 42.3 ಗ್ರಾಂ ಇರಲಿದೆ. ರಿಯಲ್‌ಮಿ ಬಡ್ಸ್ ಏರ್ ಸೌಂದರ್ಯ, ತೂಕ ಮತ್ತು ಸೌಕರ್ಯ ವಿಚಾರದಲ್ಲಿ ವಿಶೇಷವಾಗಿ ವಿನ್ಯಾಸಮಾಡಲಾಗಿದೆ ಎಂದು ರಿಯಲ್‌ಮಿ ಕಂಪೆನಿ ಹೇಳಿಕೊಂಡಿದೆ. ಅಷ್ಟೇ ಅಲ್ಲ ಈ ವಿನ್ಯಾಸವು ಹೆಚ್ಚಿನ ಬಳಕೆದಾರರ ಕಿವಿಗೆ ಹೊಂದಿಕೊಳ್ಳುವಂತೆ ಮಾಡಲಾಗಿದೆ ಎಂದು ಹೇಳಿದೆ.

ಹೇಟ್-ಟು-ವೇಟ್

ಇನ್ನು ರಿಯಲ್‌ಮಿ ಬಡ್ಸ್ ಹೇಟ್-ಟು-ವೇಟ್ ಮಾರಾಟದಲ್ಲಿ ಮೊದಲ ಬಾರಿಗೆ ಮಾರಾಟ ಮಾಡಲಾಗಿದ್ದು. ರಿಯಲ್‌ಮಿ ಬಡ್ಸ್‌ ಏರ್‌ನ ಮುಂದಿನ ಮಾರಾಟವನ್ನು ಡಿಸೆಂಬರ್ 23 ರಂದು ನಿಗದಿಪಡಿಸಲಾಗಿದೆ. ಹಳದಿ, ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಇಯರ್‌ ಬಡ್ಸ್‌ ಲಭ್ಯವಿದ್ದು. ರಿಯಲ್‌ಮಿ ಬಡ್ಸ್ ಏರ್ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ.ಕಾಮ್ ಮೂಲಕ ಖರೀದಿ ಮಾಡಬಹುದಾಗಿದೆ. ಸದ್ಯ ಇದರ ಪ್ರಾರಂಭಿಕ ಬೆಲೆ 3,999ರೂ ಆಗಿದೆ.

Most Read Articles
Best Mobiles in India

English summary
Realme Buds Air, the Chinese smartphone maker's first truly wireless earbuds, are here. Announced on Tuesday alongside the Realme X2 at an event in New Delhi, the earbuds come with a design that is quite reminiscent of the Apple AirPods. The earbuds join the company's growing accessory portfolio in India that the company wants to further expand as we enter the new year in a few days.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more