ರಿಯಲ್‌ಮಿ ಬಡ್ಸ್‌ Q ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಬಿಡುಗಡೆ!

|

ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ರಿಯಲ್‌ಮಿ ಕಂಪೆನಿ ತನ್ನ ಇತರೆ ಸ್ಮಾರ್ಟ್‌ಪ್ರಾಡಕ್ಟ್‌ಗಳಿಂದಲೂ ಕೂಡ ಪ್ರಸಿದ್ಧಿಯನ್ನ ಪಡೆದುಕೊಂಡಿದೆ. ಮಾರುಕಟ್ಟೆಗೆ ಎಂಟ್ರಿ ನೀಡಿದ ಕಡಿಮೆ ಅವಧಿಯಲ್ಲಿಯೇ ಏರುಗತಿಯಲ್ಲಿ ಜನಪ್ರಿಯತೆಯನ್ನ ಪಡೆದುಕೊಂಡಿರುವ ಕಂಪೆನಿ ಆಗಿದೆ. ಸದ್ಯ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿರುವ ರಿಯಲ್‌ಮಿ ತನ್ನ ಇಯರ್‌ಫೋನ್‌ ಮಾರುಕಟ್ಟೆಯಲ್ಲೂ ತನ್ನ ಪ್ರಾಬಲ್ಯವನ್ನ ಹೊಂದಿದೆ. ಇನ್ನು ಈಗಾಗಲೇ ಹಲವು ಮಾದರಿಯ ಇಯರ್‌ಫೋನ್‌ಗಳನ್ನ ಪರಿಚಯಿಸಿರುವ ರಿಯಲ್‌ಮಿ ಇದೀಗ ಹೊಸ ಮಾದರಿಯ ಬಡ್ಸ್‌ಗಳನ್ನ ಲಾಂಚ್‌ ಮಾಡಿದೆ.

ರಿಯಲ್‌ಮಿ

ಹೌದು, ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ರಿಯಲ್‌ಮಿ ತನ್ನ ಎರಡು ಹೊಸ ಮಾದರಿಯ ಇಯರ್‌ಫೋನ್‌ಗಳನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಸದ್ಯ ರಿಯಲ್‌ಮಿ ಕಂಪನಿಯು ರಿಯಲ್‌ಮಿ ಬಡ್ಸ್ ಏರ್ ನಿಯೋ ವಾಯರ್‌ಲೆಸ್‌ ಇಯರ್‌ಫೋನ್‌ಗಳನ್ನು ಚೀನಾ ಮತ್ತು ಭಾರತದ ಮಾರುಕಟ್ಟೆ ಎರಡೂ ಕಡೆಯೂ ಬಿಡುಗಡೆ ಮಾಡಿದೆ. ಇದಲ್ಲದೆ ಬ್ರ್ಯಾಂಡ್ ರಿಯಲ್‌ಮಿ ಬಡ್ಸ್ ಕ್ಯೂ ಇಯರ್‌ಫೋನ್‌ಗಳನ್ನು ಸಹ ಅನಾವರಣಗೊಳಿಸಿದೆ. ಇದು ಈ ಹಿಂದಿನ ರಿಯಲ್‌ಮಿ ವಾಯರ್‌ಲೆಸ್‌ ಇಯರ್‌ಫೋನ್‌ಗಳಂತೆಯೇ ಬಡ್ಸ್ ಏರ್ ನಿಯೋ ವಿನ್ಯಾಸವನ್ನು ಹೊಂದಿದ್ದರೆ, ಬಡ್ಸ್ ಕ್ಯೂ ವಿಭಿನ್ನ ವಿನ್ಯಾಸವನ್ನು ಒಳಗೊಂಡಿದೆ. ಹಾಗಾದ್ರೆ ಈ ಇಯರ್‌ಫೋನ್‌ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಯಲ್‌ಮಿ

ಸದ್ಯ ರಿಯಲ್‌ಮಿ ಕಂಪೆನಿ ಬಿಡುಗಡೆ ಮಾಡಿರುವ ರಿಯಲ್‌ಮಿ ಬಡ್ಸ್ ಕ್ಯೂ ಫ್ರೆಂಚ್ ಡಿಸೈನರ್ ಜೋಸ್ ಲೆವಿ ಅವರ ಸಹಯೋಗದೊಂದಿಗೆ ಬಡ್ಸ್ ಕ್ಯೂ ಇಯರ್‌ಬಡ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಬಡ್ಸ್‌ 10mm ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಇನ್ನು ಈ ಇಯರ್ ಬಡ್ಸ್‌ ಸಿಲಿಕೋನ್‌ನಿಂದ ಮಾಡಿದ ಪರಸ್ಪರ ಬದಲಾಯಿಸಬಹುದಾದ ಇಯರ್‌ ಬಡ್ಸ್‌ಗಳನ್ನ ನೀಡಲಾಗಿದೆ. ಇದಲ್ಲದೆ ಈ ಹೊಸ ಜೋಡಿ ವಾಯರ್‌ಲೆಸ್‌ ಇಯರ್‌ಫೋನ್‌ ಐಪಿಎಕ್ಸ್ 4 ರೇಟ್ ಅನ್ನು ಹೊಂದಿದೆ. ಆದರಿಂದ ಇದು ವಾಟರ್‌ ಹಾಗೂ ದೂಳಿನಿಂದ ರಕ್ಷಣೆ ಪಡೆಯಲಿದೆ.

ಬಡ್ಸ್ ಕ್ಯೂ

ಇನ್ನು ಈ ಬಡ್ಸ್ ಕ್ಯೂ‌ 30W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ರಿಯಲ್‌ಮಿ ಕಂಪೆನಿ ಹೇಳಿಕೊಂಡಿದೆ. ಅಲ್ಲದೆ, ಇಲ್ಲಿ ವಾಯರ್‌ ಲೆಸ್ ಚಾರ್ಜಿಂಗ್ ಟೆಕ್ ಇಲ್ಲ. ಇಯರ್‌ಬಡ್‌ಗಳ ಸಂದರ್ಭದಲ್ಲಿ ಚಾರ್ಜಿಂಗ್‌ಗಾಗಿ ಮೈಕ್ರೋ-ಯುಎಸ್‌ಬಿ ಪೋರ್ಟ್ ಅನ್ನು ಸಹ ಹೊಂದಿದೆ. ಜೊತೆಗೆ ರಿಯಲ್‌ಮಿ ಲಿಂಕ್ ಅಪ್ಲಿಕೇಶನ್, ಸೂಪರ್-ಲೋ ಲೇಟೆನ್ಸಿ ಮೋಡ್, ಟಚ್ ಕಂಟ್ರೋಲ್ಸ್ ಮತ್ತು ಬ್ಲೂಟೂತ್ 5.0 ಕನೆಕ್ಟಿವಿಟಿಯನ್ನು ಈ ಇಯರ್‌ಬಡ್‌ಗಳು ಬೆಂಬಲಿಸಲಿದೆ. ಇದಲ್ಲದೆ ಸಿಂಗಲ್‌ ಚಾರ್ಜಿಂಗ್‌ನಲ್ಲಿ ಬಳಕೆದಾರರು 4.5 ಗಂಟೆಗಳ ನಿರಂತರ ಪ್ಲೇಬ್ಯಾಕ್ ಅನ್ನು ಪಡೆಯಬಹುದಾಗಿದೆ ಎಂದು ಚೀನೀ ಕಂಪನಿ ಹೇಳಿಕೊಂಡಿದೆ.

ರಿಯಲ್‌ಮಿ

ಇನ್ನು ಈ ಇಯರ್‌ಬಡ್ಸ್‌ ಬೆಲೆ RMB 149 ಹೊಂದಿದೆ. ಅಲ್ಲದೆ ಇದು ಭಾರತದಲ್ಲಿ ಸುಮಾರು 1,600 ರೂ. ಗಳಿಗೆ ಲಬ್ಯವಾಗಲಿದೆ. ಇದಲ್ಲದೆ ರಿಯಲ್‌ಮಿ ಕಂಪನಿಯ ಹೊಸ ಏರ್ ನಿಯೋ ಇಯರ್‌ಫೋನ್‌ಗಳು RMB 269 (ಸರಿಸುಮಾರು 2,870 ರೂ.) ಬೆಲೆಯನ್ನ ಹೊಂದಿದೆ. ಜೊತೆಗೆ ಭಾರತದಲ್ಲಿ, ರಿಯಲ್ಮೆ ಬಡ್ಸ್ ಏರ್ ನಿಯೋ 2,999 ರೂ.ಗಳ ಬೆಲೆಯನ್ನ ಹೊಂದಿದೆ.

Best Mobiles in India

English summary
As part of the launch, the company is offering the Realme Buds Q wireless earphones at a discounted price of RMB 129.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X