ಇದೇ ಜುಲೈ 28ಕ್ಕೆ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ರಿಯಲ್‌ಮಿ C15 ಸ್ಮಾರ್ಟ್‌ಫೋನ್‌!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ತನ್ನ ಹೊಸ ಬಜೆಟ್‌ ಶ್ರೇಣಿಯ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಸದ್ಯ ಬಜೆಟ್‌ ಶ್ರೇಣಿಯಲ್ಲಿ ರಿಯಲ್‌ಮಿC15 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದ್ದು, ಈ ಸ್ಮಾರ್ಟ್‌ಫೋನ್‌ ಇದೇ ಜುಲೈ 28 ರಂದು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬಿಡುಗಡೆಯ ಬಗ್ಗೆ ರಿಯಲ್‌ಮಿ ಕಂಪನಿಯು ತನ್ನ ಸೊಶೀಯಲ್‌ ಮಿಡಿಯಾ ವೆಬ್‌ಸೈಟ್‌ ಮೂಲಕ ಮಾಹಿತಿ ಹಂಚಿಕೊಂಡಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪೆನಿ ತನ್ನ ಹೊಸ ರಿಯಲ್‌ಮಿ C15 ಸ್ಮಾರ್ಟ್‌ಫೋನ್‌ ಬಿಡುಗಡೆಯ ದಿನಾಂಕವನ್ನು ಹಂಚಿಕೊಂಡಿದೆ.ಸದ್ಯ ಬಿಡುಗಡೆಗೆ ಸಿದ್ದತೆ ನಡೆಸಿರುವ ಈ ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದ್ದು, 18W ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರುವ ಸಾದ್ಯತೆ ಇದೆ ಎಂದು ಹೇಳಲಾಗ್ತಿದೆ. ಈ ಕುರಿತಂತೆ ರಿಯಲ್‌ಮಿ ಕಂಪೆನಿ ತನ್ನ ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ಹಾಗೂ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ರಿಯಲ್‌ಮಿ

ರಿಯಲ್‌ಮಿ C15 ಸ್ಮಾರ್ಟ್‌ಫೋನ್‌ ಹೊಸ ಮಾದರಿಯ ವಿನ್ಯಾಸವನ್ನು ಒಳಗೊಂಡಿರುವ ಸ್ಮಾರ್ಟ್‌ಫೊನ್‌ ಆಗಿರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಬಜೆಟ್‌ ಬೆಲೆಯಲ್ಲಿ ಲಬ್ಯವಾಗುವ ಉತ್ತಮ ಫಿಚರ್ಸ್‌ ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲಿದೆ ಎಂದು ಹೇಳಲಾಗ್ತಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ದೊಡ್ಡ ಗಾತ್ರದ ಬ್ಯಾಟರಿ ಶಕ್ತಿಯನ್ನ ಹೊಂದಿರಲಿದೆ. ಅಲ್ಲದೆ ಈ ಬ್ಯಾಟರಿ ಪ್ಯಾಕ್‌ಅಪ್‌ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಸ್ಮಾರ್ಟ್‌ಫೋನ್‌

ಅಲ್ಲದೆ ಈ ಸ್ಮಾರ್ಟ್‌ಫೋನ್‌ ಸೆಲ್ಫಿ ಕ್ಯಾಮೆರಾಗೆ ಸ್ಮಾರ್ಟ್‌ ನಾಚ್‌ ಶೈಲಿಯನ್ನ ಹೊಂದಿರಲಿದ್ದು, ರಿಯರ್‌ ಸೆಟ್‌ಅಪ್‌ನಲ್ಲಿ ಕ್ವಾಡ್‌ ಕ್ಯಾಮೆರಾ ಹೊಂದಿರಲಿದೆ ಎನ್ನಲಾಗ್ತಿದೆ. ಇನ್ನು ರಿಯಲ್‌ಮಿ ಕಂಪೆನಿ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ ರಿಯಲ್‌ಮಿ C15 ರಿಯರ್‌ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ ಅನ್ನು ಹೊಂದಿರಲಿದೆ. ಇನ್ನು ಪವರ್ ಮತ್ತು ವಾಲ್ಯೂಮ್ ಬಟನ್‌ಗಳು ಫೋನ್‌ನ ಬಲಭಾಗದಲ್ಲಿರಲಿವೆ. ಜೊತೆಗೆ ಸ್ಮಾರ್ಟ್‌ಫೋನ್‌ ನ ಕೆಳಭಾಗದಲ್ಲಿ 3.5mm ಹೆಡ್‌ಫೋನ್ ಜ್ಯಾಕ್ ಅನ್ನು ನೀಡಲಾಗಿದೆ.

ರಿಯಲ್‌ಮಿ

ಸದ್ಯ ರಿಯಲ್‌ಮಿ ಕಂಪೆನಿ ತನ್ನ ರಿಯಲ್‌ಮಿ c15 ಕುರಿತಂತೆ ಬ್ಯಾಟರಿ ಸಾಮರ್ಥ್ಯ ಹೊರತು ಪಡಿಸಿ ಇನ್ಯಾವುದೇ ಮಾಹಿತಿಯನ್ನ ಹಂಚಿಕೊಂಡಿಲ್ಲ. ಆದರು ಈ ಸ್ಮಾರ್ಟ್‌ಫೋನ್‌ ಕುರಿತು ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ ವಿನ್ಯಾಸ ಹೇಗಿರಲಿದೆ ಅನ್ನೊ ಕುತೂಹಲವೇ ಹೆಚ್ಚಾಗಿ ಕಮಡು ಬರುತ್ತಿದೆ. ಈ ಕುರಿತಂತೆ ಇನ್ನು ಕೆಲವೇ ದಿನಗಳಲ್ಲಿ ರಿಯಲ್‌ಮಿ ಕಂಪೆನಿ ಸ್ಮಾರ್ಟ್‌ಫೋನ್‌ ವಿನ್ಯಾಸದ ಟೀಸರ್‌ ಬಿಡುಗಡೆ ಮಾಡುವ ಸಾದ್ಯತೆ ಇದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬ್ಲೂ ಮತ್ತು ಗ್ರೇ ಎಂಬ ಎರಡು ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Most Read Articles
Best Mobiles in India

English summary
Realme C15 will be the next entrant in the company's budget C series of smartphones and will be unveiled on July 28.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X