Home
ಸುದ್ದಿಜಾಲ

ಇಂದು 'ರಿಯಲ್‌ಮಿ C30' ಸ್ಮಾರ್ಟ್‌ಫೋನ್‌ ಫಸ್ಟ್‌ ಸೇಲ್‌! ಸೇಲ್‌ ಆಫರ್‌ ಏನಿದೆ?

ರಿಯಲ್‌ಮಿ ಕಂಪೆನಿ ಕಳೆದ ವಾರ ಭಾರತದಲ್ಲಿ ರಿಯಲ್‌ಮಿ C30 ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ ಬಜೆಟ್‌ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದ್ದು, ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಸದ್ಯ ಇಂದು (ಜೂನ್ 27) ಮಧ್ಯಾಹ್ನ 12:00 ಗಂಟೆಗೆ ಭಾರತದಲ್ಲಿ ತನ್ನ ಮೊದಲ ಸೇಲ್‌ ಅನ್ನು ಆರಂಭಿಸಲಿದೆ. ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಮತ್ತು ಅಧಿಕೃತ ವೆಬ್‌ಸೈಟ್‌ ರಿಯಲ್‌ಮಿ.ಕಾಮ್‌ ಮೂಲಕ ಮಾರಾಟವಾಗಲಿದೆ. ಇನ್ನು ಈ ಫೋನ್‌ ಲೇಕ್ ಬ್ಲೂ ಮತ್ತು ಬ್ಯಾಂಬೂ ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಬರಲಿದೆ.

ಸ್ಮಾರ್ಟ್‌ಫೋನ್‌

ಹೌದು, ಕೆಲದ ದಿನಗಳ ಹಿಂದೆ ಭಾರತಕ್ಕೆ ಎಂಟ್ರಿ ನೀಡಿದ್ದ ರಿಯಲ್‌ಮಿ C30 ಸ್ಮಾರ್ಟ್‌ಫೋನ್‌ ಇಂದು (ಜೂನ್ 27) ತನ್ನ ಫಸ್ಟ್‌ ಸೇಲ್‌ ನಡೆಸಲಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು "ವರ್ಟಿಕಲ್ ಸ್ಟ್ರೈಪ್" ವಿನ್ಯಾಸವನ್ನು ಹೊಂದಿದ್ದು, ತುಂಬಾ ಹಗುರವಾಗಿದೆ. ಏಕೆಂದರೆ ಈ ಸ್ಮಾರ್ಟ್‌ಫೋನ್‌ ಕೇವಲ 8.5 ಮಿಮೀ ಥಿಕ್‌ನೆಸ್‌ ಮತ್ತು 182 ಗ್ರಾಂ ತೂಕವನ್ನು ಹೊಂದಿದೆ. ಆದರಿಂದ ಇದನ್ನು ಹಿಡಿದಿಡಲು ಮತ್ತು ಬಳಸಲು ಸುಲಭವಾಗಿದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ ವಾಟರ್‌ ಡ್ರಾಪ್‌ ನಾಚ್‌ ಶೈಲಿಯ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇದು "ವರ್ಟಿಕಲ್ ಸ್ಟ್ರೈಪ್" ವಿನ್ಯಾಸವನ್ನು ಹೊಂದಿರುವುದರಿಂದ ತುಂಬಾ ನಯವಾದ ಸ್ಮಾರ್ಟ್‌ಫೋನ್‌ ಆಗಿದೆ. ಈ ಫೋನ್‌ ಸಿಂಗಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು, ಎಐ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಜೊತೆಗೆ 5000mah ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಸೈಡ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಅನ್ನು ಕೂಡ ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನಿನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲಾಂಚ್‌ ಆಫರ್‌ ಏನಿದೆ?

ಲಾಂಚ್‌ ಆಫರ್‌ ಏನಿದೆ?

ರಿಯಲ್‌ಮಿ C30 ಇಂದು ಮಧ್ಯಾಹ್ನದಿಂದ ಭಾರತದಲ್ಲಿ ಖರೀದಿಗೆ ಲಭ್ಯವಾಗಲಿದೆ. ಫಸ್ಟ್‌ ಸೇಲ್‌ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಲಾಂಚ್‌ ಆಫರ್‌ ಅನ್ನು ಕೂಡ ನೀಡುತ್ತಿದೆ. ಅದರಂತೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸುವ ಗ್ರಾಹಕರು 5% ಕ್ಯಾಶ್‌ಬ್ಯಾಕ್‌ ಪಡೆಯಲಿದ್ದಾರೆ. ಈ ಕ್ಯಾಶ್‌ಬ್ಯಾಕ್‌ಗಾಗಿ ಗ್ರಾಹಕರು ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ ಬಳಸಬೇಕಾಗುತ್ತದೆ. ಇದಲ್ಲದೆ ಗ್ರಾಹಕರು ರಿಯಲ್‌ಮಿ C30 ಸ್ಮಾರ್ಟ್‌ಫೋನ್‌ ಖರೀದಿಸಿದರೆ ಗೂಗಲ್‌ನ ಕೆಲವು ಪ್ರಾಡಕ್ಟ್‌ಗಳು ನಿಮಗೆ ಡಿಸ್ಕೌಂಟ್‌ನಲ್ಲಿ ದೊರೆಯಲಿದೆ.

ಅಂದರೆ ಈ ಸ್ಮಾರ್ಟ್‌ಫೋನ್‌ ಅನ್ನು ನೀವು ICICI ನೆಟ್ ಬ್ಯಾಂಕಿಂಗ್ ಮೂಲಕ ಖರೀದಿಸಿದರೆ 5% ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಈ ರಿಯಾಯಿತಿ ಆಫರ್‌ ಕೇವಲ ರಿಯಲ್‌ಮಿ ಸ್ಟೋರ್‌ನಲ್ಲಿ ಮಾಡಿದ ಖರೀದಿಗಳಿಗೆ ಮಾತ್ರ ಅನ್ವಯಿಸುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ರಿಯಲ್‌ಮಿ C30 ಅನ್ನು ಖರೀದಿಸುವವರು ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ. ಜೊತೆಗೆ 4,999 ರೂಗಳಲ್ಲಿ ಗೂಗಲ್‌ ನೆಕ್ಸ್ಟ್‌ ಹಬ್‌ ಅನ್ನು ನೀವು ಖರೀದಿಸಬಹುದಾಗಿದೆ. ಜೊತೆಗೆ 1,999 ರೂ ಬೆಲೆಗೆ ಗೂಗಲ್‌ ನೆಕ್ಸ್ಟ್‌ ಮಿನಿಯನ್ನು ಕೂಡ ಪಡೆಯಲು ಸಾಧ್ಯವಾಗಲಿದೆ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ರಿಯಲ್‌ಮಿ C30 ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಬೆಂಬಲಿಸಲಿದೆ. ಇದು 88.7% ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು 120Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಒಳಗೊಂಡಿದೆ. ಇನ್ನು ಈ ಡಿಸ್‌ಪ್ಲೇ 400ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಮತ್ತು 1500: 1 ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿದೆ. ಜೊತೆಗೆ ಇದು 60Hz ರಿಫ್ರೆಶ್ ರೇಟ್ ಹೊಂದಿದ್ದು, ಮುಂಭಾಗದ ಸೆಲ್ಫಿ ಶೂಟರ್ ಅನ್ನು ವಾಟರ್‌ಡ್ರಾಪ್ ನಾಚ್‌ನೊಳಗೆ ಹೊಂದಿದೆ.

ಪ್ರೊಸೆಸರ್‌ ಹೇಗಿದೆ?

ಪ್ರೊಸೆಸರ್‌ ಹೇಗಿದೆ?

ರಿಯಲ್‌ಮಿ C30 ಸ್ಮಾರ್ಟ್‌ಫೋನ್‌ ಯುನಿಸೋಕ್‌ T612 ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು CPU ಆಕ್ಟಾ-ಕೋರ್ 1.82 GHz GPU ಮಾಲಿ-G57 ಸಪೋರ್ಟ್‌ ಅನ್ನು ಕೂಡ ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ 3GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಕೂಡ ನೀಡಲಿದೆ.

ಕ್ಯಾಮೆರಾ ಯಾವುದು?

ಕ್ಯಾಮೆರಾ ಯಾವುದು?

ಈ ಸ್ಮಾರ್ಟ್‌ಫೋನ್‌ ಫ್ರಂಟ್‌ ಹಾಗೂ ಹಿಂಭಾಗದಲ್ಲಿ ಸಿಂಗಲ್‌ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಹಿಂಭಾಗದ ಕ್ಯಾಮೆರಾ 8 ಮೆಗಾಪಿಕ್ಸೆಲ್ AI ಕ್ಯಾಮೆರಾ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 5 ಮೆಗಾಪಿಕ್ಸೆಲ್ AI ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು f/2.2 ಅಪರ್ಚರ್ ಮತ್ತು 3P ಲೆನ್ಸ್‌ ಅನ್ನು ಹೊಂದಿದೆ. ಇನ್ನು ಈ ಕ್ಯಾಮೆರಾ ಮೂಲಕ 1080p @30fps ವೀಡಿಯೊ ರೆಕಾರ್ಡಿಂಗ್‌ ಮಾಡಬಹುದಾಗಿದೆ. ಹಾಗೆಯೇ ಈ ಕ್ಯಾಮೆರಾ HDR, AR ಸ್ಟಿಕ್ಕರ್, ಸ್ಲೋ ಮೋಷನ್, ಪೋರ್ಟ್ರೇಟ್ ಮೋಡ್, ಬ್ಯೂಟಿ ಮೋಡ್, AI ಕ್ಯಾಮೆರಾದಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ರಿಯಲ್‌ಮಿ C30 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಈ ಬ್ಯಾಟರಿ ಬಾಕ್ಸ್‌ನ ಹೊರಗೆ ಸ್ಟ್ಯಾಂಡರ್ಡ್ 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5mm ಹೆಡ್‌ಸೆಟ್ ಜ್ಯಾಕ್, ಮೈಕ್ರೋ ಯುಎಸ್‌ಬಿ, ಬ್ಲೂಟೂತ್ 5.0 ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸಿಲೆರೊಮೀಟರ್, ಫೇಸ್ ಅನ್‌ಲಾಕ್ ಅನ್ನು ಕೂಡ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ 2GB RAM ಮತ್ತು 32GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆಗೆ 7,499ರೂ.ಬೆಲೆಯನ್ನು ಹೊಂದಿದೆ. ಹಾಗೆಯೇ 3GB RAM ಮತ್ತು 32GB ಸ್ಟೋರೇಜ್ ಆಯ್ಕೆಗೆ 8,299ರೂ.ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಲೇಕ್ ಬ್ಲೂ ಮತ್ತು ಬ್ಯಾಂಬೂ ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

English summary
Realme C30 first sale today: Pricing, Offers, Features, Specifications, and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+