ರಿಯಲ್‌ಮಿ C53 ಇದೀಗ ಹೊಸ ವೇರಿಯೆಂಟ್ ಆಯ್ಕೆಯಲ್ಲಿ ಲಭ್ಯ.. ಬೆಲೆ ಎಷ್ಟು?
ಸ್ಮಾರ್ಟ್‌ಫೋನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ರಿಯಲ್‌ಮಿ ಕಂಪೆನಿ ಕೂಡ ಒಂದಾಗಿದೆ. ಇತ್ತೀಚಿಗೆ ರಿಯಲ್‌ಮಿ C53 ಸ್ಮಾರ್ಟ್‌ಫೋನ್ ಪರಿಚಯಿಸಿ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಹುಟ್ಟುಹಾಕಿದೆ. ಇದೀಗ ರಿಯಲ್‌ಮಿ C53 ಸ್ಮಾರ್ಟ್‌ಫೋನ್‌ನ ಹೊಸ 6GB RAM ಮತ್ತು 128GB ಸ್ಟೋರೇಜ್ ವೇರಿಯೆಂಟ್ ಆಯ್ಕೆಯನ್ನು ಬಿಡುಗಡೆ ಮಾಡಿದೆ.
ಹೌದು, ರಿಯಲ್‌ಮಿ C53 ಸ್ಮಾರ್ಟ್‌ಫೋನ್‌ನ ಹೊಸ ಸ್ಟೋರೇಜ್ ವೇರಿಯೆಂಟ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ನ ಹೊಸ 6GB RAM + 128GB ಸ್ಟೋರೇಜ್ ರೂಪಾಂತರವು 11,999ರೂ. ಬೆಲೆಯಲ್ಲಿ ಎಂಟ್ರಿ ನೀಡಿದೆ. ಈ ಮೂಲಕ ರಿಯಲ್‌ಮಿ ಫೋನ್ ಖರೀದಿಸೋರಿಗೆ ಮತ್ತೊಂದು ಆಯ್ಕೆ ಸಿಕ್ಕಂತಾಗಿದೆ. ಇನ್ನು ರಿಯಲ್‌ಮಿ C53 ಸ್ಮಾರ್ಟ್‌ಫೋನ್‌ನ ಹೊಸ ವೇರಿಯೆಂಟ್ ಆಯ್ಕೆಯು ಯಾವಾಗ ಖರೀದಿಗೆ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ C53 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ರಿಯಲ್‌ಮಿ C53 ಸ್ಮಾರ್ಟ್‌ಫೋನ್ 6.74 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದೆ. ಜೊತೆಗೆ ಡಿಸ್‌ಪ್ಲೇ 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ 560 ನೀಟ್ಸ್ ವರೆಗಿನ ಬ್ರೈಟ್‌ನೆಸ್ ಅನ್ನು ಪಡೆದುಕೊಂಡಿದೆ.
ರಿಯಲ್‌ಮಿ C53 ಪ್ರೊಸೆಸರ್ ಯಾವುದು?
ರಿಯಲ್‌ಮಿ C53 ಸ್ಮಾರ್ಟ್‌ಫೋನ್ ಯುನಿಸೊಕ್ T612 ಚಿಪ್‌ಸೆಟ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಹೊಸ ಸ್ಟೋರೇಜ್ ವೇರಿಯೆಂಟ್ ಆಯ್ಕೆಯು 6GB RAM + 128GB ರೂಪಾಂತರದಲ್ಲಿ ಎಂಟ್ರಿ ನೀಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ರಿಯಲ್‌ಮಿ C53 ಕ್ಯಾಮೆರಾ ಸೆಟ್‌ಅಪ್ ಏನಿದೆ?
ರಿಯಲ್‌ಮಿ C53 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ. ಇದು 3x ಇನ್-ಸೆನ್ಸರ್ ಡಿಜಿಟಲ್ ಜೂಮ್ ಅನ್ನು ನೀಡಲಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಕ್ಯಾಮೆರಾಗಳಿಗಾಗಿ ಹಿಂಭಾಗದಲ್ಲಿ ಮೂರು ಪ್ರತ್ಯೇಕ ವೃತ್ತಾಕಾರದ ದ್ವೀಪಗಳು ಮತ್ತು ಎಲ್ಇಡಿ ಫ್ಲ್ಯಾಷ್‌ಲೈಟ್ ಅನ್ನು ಹೊಂದಿದೆ.
ರಿಯಲ್‌ಮಿ C53 ಬ್ಯಾಟರಿ ಮತ್ತು ಇತರೆ
ರಿಯಲ್‌ಮಿ C53 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ ಕಾರ್ಡ್‌ಗಳು, 4G, ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.0, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್, ಆಡಿಯೊಗಾಗಿ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.
ರಿಯಲ್‌ಮಿ C53 ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ C53 ಸ್ಮಾರ್ಟ್‌ಫೋನ್ 11,999ರೂ ಬೆಲೆಯಲ್ಲಿ ಬರಲಿದೆ. ಇದನ್ನು ಸೆಪ್ಟೆಂಬರ್ 20 ರಿಂದ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ಸ್ಟೋರ್ಗಳ ಮೂಲಕ ಖರೀದಿಸಬಹುದಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಅನ್ನು ICICI, HDFC ಮತ್ತು SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 1,000ರೂ.ಗಳ ರಿಯಾಯಿತಿ ಕೂಡ ಸಿಗಲಿದೆ. ಈ ಸ್ಮಾರ್ಟ್‌ಫೋನ್ ಚಾಂಪಿಯನ್ ಗೋಲ್ಡನ್ ಮತ್ತು ಚಾಂಪಿಯನ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








