Home
ಸುದ್ದಿಜಾಲ

ನಾಳೆ Realme C63 5G ಸೇಲ್.. 9,999ಕ್ಕೆ ಸಿಗುತ್ತೆ! ಡಿಸ್ಕೌಂಟ್ ಕೂಡ ಇದೆ

ಹಳೆಯ ಫೋನಿಗೆ ಹೇಳಿ ಟಾಟಾ ಬೈ ಬೈ..! ಹೊಸ ರಿಯಲ್‌ಮಿ ಫೋನ್ ಅಗ್ಗದ ಬೆಲೆಗೆ ಬಂದಿದೆ. ಈ ಫೋನ್‌ 9,999 ರೂ.ಗೆ ಸಿಗುತ್ತೆ! ಹೌದು, ಹಳೆಯ ಫೋನಿನಿಂದ 5G ಮೊಬೈಲ್ ಫೋನ್‌ಗೆ ಅಪ್‌ಗ್ರೇಡ್ ಆಗಲು Realme C63 5G ಫೋನ್ ಉತ್ತಮ ಆಯ್ಕೆಯಾಗಲಿದೆ. ಅಂದಹಾಗೆ, ಈ ರಿಯಲ್‌ಮಿ C63 5G ಫೋನನ್ನು ಖರೀದಿಸುವ ಶುಭದಿನವೂ ಬಂದಿದೆ. ಜೊತೆಗೆ, ಮೊದಲ ದಿನವೇ ಭರ್ಜರಿ ಆಫರ್ ಲಭ್ಯವಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ 1,000 ರೂ.ಗಳ ಡಿಸ್ಕೌಂಟ್ ಪಡೆಯಬಹುದು.

ಹೌದು, ರಿಯಲ್‌ಮಿ C63 5G ನಾಳೆಯಿಂದ (ಆಗಸ್ಟ್ 20) ರಿಯಲ್‌ಮಿ ಇಂಡಿಯಾ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ ಮೂಲಕ ಮಾರಾಟವಾಗಲಿದೆ. ಈ ಫೋನ್ 6.67 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್‌ ಒಳಗೊಂಡಿದೆ. 32MP ಮುಖ್ಯ ಕ್ಯಾಮೆರಾ ಮತ್ತು 8MP ಫ್ರಂಟ್‌ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 5,000mAh ಬ್ಯಾಟರಿಯೊಂದಿಗೆ ಬರುತ್ತದೆ.

ನಾಳೆ Realme C63 5G ಸೇಲ್.. 9,999ಕ್ಕೆ ಸಿಗುತ್ತೆ! ಡಿಸ್ಕೌಂಟ್ ಕೂಡ ಇದೆ

ಭಾರತದಲ್ಲಿ ರಿಯಲ್‌ಮಿ C63 5G ಬೆಲೆ

ಈ ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್‌ನಲ್ಲಿ ಬಿಡುಗಡೆಯಾಗಿದೆ. 4GB ಮತ್ತು 128GB ಸ್ಟೋರೇಜ್‌ ಬೆಲೆ 10,999 ರೂ. ಇದೆ. 6GB ಮತ್ತು 128GB ಸ್ಟೋರೇಜ್‌ ಬೆಲೆ 11,999 ಇದೆ. ಮತ್ತು 8GB ಮತ್ತು 128GB ಸ್ಟೋರೇಜ್‌ ಬೆಲೆ 12,999 ಆಗಿದೆ. ಈ ಫೋನ್ ನಾಳೆ (ಆಗಸ್ಟ್ 20) ಮಧ್ಯಾಹ್ನ 12 ಗಂಟೆಯಿಂದ Flipkart ಮತ್ತು Realme ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟವಾಗಲಿದೆ. ಸ್ಟಾರ್ರಿ ಗೋಲ್ಡ್ ಮತ್ತು ಫಾರೆಸ್ಟ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಕಂಪನಿಯು ಮೊದಲ ಮಾರಾಟದ ಭಾಗವಾಗಿ ಆಫರ್‌ಗಳನ್ನು ಘೋಷಿಸಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಈ ಫೋನ್ ಖರೀದಿಸಿದರೆ ಎಲ್ಲಾ ರೂಪಾಂತರಗಳ ಮೇಲೆ 1,000 ರೂ. ಡಿಸ್ಕೌಂಟ್‌ ಪಡೆಯಬಹುದು. ಬಳಿಕ ಡಿಸ್ಕೌಂಟ್‌ನೊಂದಿಗೆ ನೀವು ಕೇವಲ 9,999 ರೂ.ಗಳ ಆರಂಭಿಕ ಬೆಲೆಯಲ್ಲಿಈ ಫೋನ್ ಖರೀದಿಸಬಹುದು. 6GB + 128GB ರೂಪಾಂತರವನ್ನು 10,999 ರೂ.ಗೆ ಮತ್ತು 8GB + 128GB ರೂಪಾಂತರವನ್ನು 11,999 ರೂ.ಗೆ ಲಭ್ಯವಿರುತ್ತವೆ.

ರಿಯಲ್‌ಮಿ C63 5G ವೈಶಿಷ್ಟ್ಯಗಳು

ರಿಯಲ್‌ಮಿ C63 5G ಸ್ಮಾರ್ಟ್‌ಫೋನ್ 6.67 ಇಂಚಿನ HD+ ಡಿಸ್ಲ್ಪೇಯನ್ನು ಹೊಂದಿದೆ. HD+ (720×1604) ರೆಸಲ್ಯೂಶನ್, 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 625 nits ಗರಿಷ್ಠ ಬ್ರೈಟ್‌ನೆಸ್ ಪಡೆದಿದೆ. ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್ ಅನ್ನು ಹೊಂದಿದೆ. ಇದು ಆರ್ಮ್ ಮಾಲಿ G57 MC2 GPU ಜೊತೆಗೆ ಬರುತ್ತದೆ. ರಿಯಲ್‌ಮಿ UI 5.0 ಜೊತೆಗೆ Android 14 ಅನ್ನು ರನ್ ಮಾಡುತ್ತದೆ.

ರಿಯಲ್‌ಮಿ C63 5G ಮೊಬೈಲ್ ಟ್ರಿಪಲ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಇದು f/1.85 ಅಪರ್ಚರ್ ಮತ್ತು LED ಫ್ಲ್ಯಾಷ್‌ನೊಂದಿಗೆ 32MP ಮುಖ್ಯ ಕ್ಯಾಮರಾವನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ f/2.0 ದ್ಯುತಿರಂಧ್ರದೊಂದಿಗೆ 8MP ಮುಂಭಾಗದ ಕ್ಯಾಮೆರಾ ಕೂಡ ಇದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಒಳಗೊಂಡಿದೆ.

ನಾಳೆ Realme C63 5G ಸೇಲ್.. 9,999ಕ್ಕೆ ಸಿಗುತ್ತೆ! ಡಿಸ್ಕೌಂಟ್ ಕೂಡ ಇದೆ

ಈ ಫೋನ್ 4GB, 6GB, 8GB RAM ಹಾಗೂ 64GB, 128GB ಸ್ಟೋರೇಜ್‌ ಒಳಗೊಂಡಿದೆ. ಮೈಕ್ರೊ SD ಜೊತೆಗೆ 2TB ವರೆಗೆ ಮೆಮೊರಿಯನ್ನು ವಿಸ್ತರಿಸಬಹುದು. ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ವೇಗದ ಚಾರ್ಜಿಂಗ್‌ನೊಂದಿಗೆ ಬರುತ್ತದೆ. 165.6×76.1×7.94mm ಅಳತೆ ಮತ್ತು 190 ಗ್ರಾಂ ತೂಕ ಹೊಂದಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಪಡೆದಿದೆ.

ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 3.5mm ಆಡಿಯೋ ಜ್ಯಾಕ್, 1115 ಅಲ್ಟ್ರಾ ಲೀನಿಯರ್ ಬಾಟಮ್-ಪೋರ್ಟ್ ಮಾಡಿದ ಸ್ಪೀಕರ್ ಒಳಗೊಂಡಿದೆ. ಹೈಬ್ರಿಡ್ ಡ್ಯುಯಲ್ ಸಿಮ್, 5G SA/NSA, ಡ್ಯುಯಲ್ 4G VoLTE, Wi-Fi 802.11 ac, ಬ್ಲೂಟೂತ್, GPS5, ಗ್ಲೋನಾಸ್, ಗೆಲಿಲಿಯೋ, QZSS, USB ಟೈಪ್-ಸಿ ನಂತಹ ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Realme C63 5G Goes First Sale in India on August 20 via Flipkart: Know Price, Offer and More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+