Realme: ಭಾರತದಲ್ಲಿ ಲಾಂಚ್ ಆಯ್ತು ರಿಯಲ್‌ಮಿ C67 5G ಸ್ಮಾರ್ಟ್‌ಫೋನ್! ಬೆಲೆ ಎಷ್ಟು?
ರಿಯಲ್‌ಮಿ C67 5G ಸ್ಮಾರ್ಟ್‌ಫೋನ್ ಇದೀಗ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ ರಿಯಲ್‌ಮಿ C ಸರಣಿಯಲ್ಲಿ ಭಾರತಕ್ಕೆ ಎಂಟ್ರಿ ನೀಡಿರುವ ಮೊದಲ 5G-ಬೆಂಬಲಿತ ಸ್ಮಾರ್ಟ್‌ಫೋನ್ ಆಗಿದೆ. ಇದು 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್ ಹೊಂದಿದೆ.
ಹೌದು, ರಿಯಲ್‌ಮಿ C67 5G (Realme C67 5G)ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 6nm ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಕೇವಲ 29 ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದವರೆಗೆ ಫೋನ್ ಅನ್ನು ಚಾರ್ಜ್ ಮಾಡಬಹುದು ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಾದ್ರೆ ಈ ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ C67 5G ಡಿಸ್‌ಪ್ಲೇ ರಚನೆ
ರಿಯಲ್‌ಮಿ C67 5G ಸ್ಮಾರ್ಟ್‌ಫೋನ್ 6.72 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ವರೆಗಿನ ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ. ಇದು 680 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದು ಸನ್ನಿ ಓಯಸಿಸ್ ವಿನ್ಯಾಸವನ್ನು ಹೊಂದಿದ್ದು, ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ರಿಯರ್ ಪ್ಯಾನಲ್ ಹೊಳೆಯುವಂತೆ ಮಾಡಲಿದೆ. ಜೊತೆಗೆ ಫೋನ್‌ನಲ್ಲಿ ಮಿನಿ ಕ್ಯಾಪ್ಸುಲ್ 2.0 ಫೀಚರ್ಸ್ ಅನ್ನು ಸಹ ಅಳವಡಿಸಲಾಗಿದೆ.
ರಿಯಲ್‌ಮಿ C67 5G ಪ್ರೊಸೆಸರ್ ದಕ್ಷತೆ?
ರಿಯಲ್‌ಮಿ C67 5G ಸ್ಮಾರ್ಟ್‌ಫೋನ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್ ದಕ್ಷತೆಯನ್ನು ಹೊಂದಿದೆ. ಇದು ಆಂಡ್ರಾಯ್ಡ್ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ RAM ಅನ್ನು ವಾಸ್ತವಿಕವಾಗಿ ಹೆಚ್ಚುವರಿ 6GB ವರೆಗೆ ವಿಸ್ತರಿಸಬಹುದು. ಇದರೊಂದಿಗೆ ಮೈಕ್ರೋ SD ಕಾರ್ಡ್ ಮೂಲಕ 2TB ವರೆಗೆ ಸ್ಟೋರೇಜ್ ಅನ್ನು ವಿಸ್ತರಿಸಬಹುದು.

ರಿಯಲ್‌ಮಿ C67 5G ಕ್ಯಾಮೆರಾ ಸೆಟಪ್ ಏನಿದೆ?
ರಿಯಲ್‌ಮಿ C67 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾದೊಂದಿಗೆ ಬರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಅನ್ನು ಒಳಗೊಂಡಿದೆ. ಇದರ ಸೆಲ್ಫಿ ಕ್ಯಾಮೆರಾದ ವಿವರಗಳನ್ನು ಕಂಪೆನಿ ಬಹಿರಂಗಪಡಿಸಿಲ್ಲ.
ರಿಯಲ್‌ಮಿ C67 5G ಬ್ಯಾಟರಿ ಮತ್ತು ಇತರೆ ಸೌಲಭ್ಯ
ರಿಯಲ್‌ಮಿ C67 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇದಲ್ಲದೆ ವೇಗವಾಗಿ ಚಾರ್ಜಿಂಗ್ ಮಾಡುವುದರಿಂದ ಕೇವಲ 29 ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದವರೆಗೆ ಫೋನ್ ಅನ್ನು ಚಾರ್ಜ್ ಮಾಡಬಹುದು ಎಂದು ರಿಯಲ್‌ಮಿ ಕಂಪನಿ ಹೇಳಿದೆ.

ಭಾರತದಲ್ಲಿ ರಿಯಲ್‌ಮಿ C67 5G ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ C67 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬೇಸ್ ಮಾಡೆಲ್ 4GB + 128GB ರೂಪಾಂತರದ ಆಯ್ಕೆಗೆ 13,999ರೂ ಬೆಲೆ ಹೊಂದಿದೆ. ಇದರ 6GB + 128GB ಆಯ್ಕೆಯು 14,999ರೂ ಬೆಲೆಯನ್ನು ಹೊಂದಿದೆ. ಇದನ್ನು ಡಾರ್ಕ್ ಪರ್ಪಲ್ ಮತ್ತು ಸನ್ನಿ ಓಯಸಿಸ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಇನ್ನು ಸ್ಮಾರ್ಟ್‌ಫೋನ್ ಇದೇ ಡಿಸೆಂಬರ್ 16 ರಿಂದ ದೇಶಾದ್ಯಂತ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಜೊತೆಗೆವ ರಿಯಲ್‌ಮಿ ಅಧಿಕೃತ ವೆಬ್‌ಸೈಟ್ ಮೂಲಕ ಕೂಡ ಖರೀದಿಸಬಹುದಾಗಿದೆ.


Click it and Unblock the Notifications








