Home
ಸುದ್ದಿಜಾಲ

Realme C71: ಕೈಗೆಟುಕುವ ಬೆಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ!

Realme ತನ್ನ ಜನಪ್ರಿಯ ಕೈಗೆಟುಕುವ C-ಸರಣಿಗೆ ಹೊಸ ಸೇರ್ಪಡೆಯಾಗಿ ಹೊಸ Realme C71 ಸ್ಮಾರ್ಟ್‌ಫೋನ್ ಅನ್ನು ಕೆಲವು ಆಯ್ದ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ. ಈ ಹೊಸ Realme ಸ್ಮಾರ್ಟ್‌ಫೋನ್ 45W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ದೊಡ್ಡ 6,300mAh ಬ್ಯಾಟರಿ, AI- ಬೆಂಬಲಿತ 50-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು ಬಜೆಟ್ ಬೆಲೆಯ ಫೋನ್‌ಗಳಲ್ಲಿ ಕಂಡುಬರುವ Unisoc T7250 ಚಿಪ್‌ಸೆಟ್ ನಂತಹ ವೈಶಿಷ್ಟ್ಯಗಳೊಂದಿಗೆ ಪರಿಚಯಗೊಂಡಿದೆ. ಹಾಗಾದರೆ, ಹೊಸ Realme C71 ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬುದನನ್ನು ನೋಡೋಣ ಬನ್ನಿ.

Realme C71: ಪ್ರಮುಖ ವೈಶಿಷ್ಟ್ಯಗಳು
Realme C71 ಸ್ಮಾರ್ಟ್‌ಫೋನ್ ಇದು 6.67-ಇಂಚಿನ HD+ (720x1,604 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ದರ, 240Hz ವರೆಗೆ ಟಚ್ ಸ್ಯಾಂಪ್ಲಿಂಗ್ ದರ ಮತ್ತು 725 ನಿಟ್ಸ್‌ನ ಗರಿಷ್ಠ ಹೊಳಪನ್ನು ಹೊಂದಿದೆ. ಕಾರ್ಯಕ್ಷಮತೆ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ Unisoc T7250 ಆಕ್ಟಾ-ಕೋರ್ ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 6GB RAM ಮತ್ತು 128GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಡ್ಯುಯಲ್ ಸಿಮ್ (ನ್ಯಾನೋ) ಬೆಂಬಲದೊಂದಿಗೆ ಬರುತ್ತದೆ ಮತ್ತು Android 15-ಆಧಾರಿತ Realme UI ನಲ್ಲಿ ಕಾರ್ಯನಿರ್ವಹಿಸುವು ಈ ಸ್ಮಾರ್ಟ್‌ಫೋನಿನ ಆನ್‌ಬೋರ್ಡ್ ಮೆಮೊರಿಯನ್ನು ಡೈನಾಮಿಕ್ RAM ವೈಶಿಷ್ಟ್ಯದ ಮೂಲಕ 18GB ವರೆಗೆ ವಿಸ್ತರಿಸಲು ಅವಕಾಶವಿದೆ.

ಕ್ಯಾಮೆರಾ ವಿಭಾಗದಲ್ಲಿ, Realme C71 ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ AI-ಬೆಂಬಲಿತ ಹಿಂಭಾಗದ ಕ್ಯಾಮೆರಾ ಘಟಕವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, 5-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ. ಈ Realme C71 ಸ್ಮಾರ್ಟ್‌ಫೋನ್‌ನ ಪ್ರಮುಖ ಹೈಲೈಟ್ ಎಂದರೆ 6,300mAh ಸಾಮರ್ಥ್ಯದ ದೊಡ್ಡ ಬ್ಯಾಟರಿ. ಇದು 45W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಒಂದೇ ಚಾರ್ಜ್‌ನಲ್ಲಿ ಒಂಬತ್ತು ಗಂಟೆಗಳ ನಿರಂತರ ಗೇಮಿಂಗ್ ಸಮಯವನ್ನು ಇದು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಈ ಸ್ಮಾರ್ಟ್‌ಪೊನಿನಲ್ಲಿ Beidou, Bluetooth 5.2, GPS, GLONASS, Galileo, Wi-Fi ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳನ್ನು ನೋಡಬಹುದು.

Realme C71: ಕೈಗೆಟುಕುವ ಬೆಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ!

ಬಾಳಿಕೆ ವಿಷಯದಲ್ಲಿ, Realme C71 ಆರ್ಮರ್‌ಶೆಲ್ ನಿರ್ಮಾಣವನ್ನು ಹೊಂದಿದೆ. ಇದು ಮಿಲಿಟರಿ ಸ್ಟ್ಯಾಂಡರ್ಡ್ ಶಾಕ್‌ಪ್ರೂಫ್ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ ಎಂದು ಕಂಪನಿ ಹೇಳಿದೆ, ಅಂದರೆ ಇದು 1.5 ಮೀಟರ್‌ಗಳಿಂದ ಬೀಳುವಿಕೆಯನ್ನು ತಡೆದುಕೊಳ್ಳುತ್ತದೆ. ಇದಲ್ಲದೆ, ಸೋನಿಕ್‌ವೇವ್ ವಾಟರ್ ಎಜೆಕ್ಷನ್ ತಂತ್ರಜ್ಞಾನವನ್ನು ಇದು ಹೊಂದಿದೆ, ಇದು ಸಾಧನದೊಳಗೆ ಸಂಗ್ರಹವಾದ ನೀರನ್ನು ಹೊರಹಾಕಲು ಸಹಾಯ ಮಾಡುತ್ತದೆ. ಆನ್‌ಬೋರ್ಡ್ ಸಂವೇದಕಗಳಲ್ಲಿ ವೇಗವರ್ಧಕ ಸಂವೇದಕ, ಫ್ಲಿಕರ್ ಸಂವೇದಕ, ಮ್ಯಾಗ್ನೆಟಿಕ್ ಸಂವೇದಕ, ಲೈಟ್ ಸಂವೇದಕ, ಸೈಡ್ ಕೆಪ್ಯಾಸಿಟಿವ್ ಸಂವೇದಕ ಮತ್ತು ಸಾಮೀಪ್ಯ ಸಂವೇದಕ ಸೇರಿವೆ. ಇನ್ನು ಈ ಸ್ಮಾರ್ಟ್‌ಫೋನ್ 165.80x75.90x7.79mm ಅಳತೆ ಮತ್ತು 196g ತೂಕವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
Realme C71 ಸ್ಮಾರ್ಟ್‌ಪೋನ್ ಪ್ರಸ್ತುತ ಬಾಂಗ್ಲಾದೇಶ ಮತ್ತು ವಿಯೆಟ್ನಾಂ ಸೇರಿದಂತೆ ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ ಮಾತ್ರ ಲಭ್ಯವಿದೆ. ಇದರ 4GB RAM ಮತ್ತು 128GB ಸಂಗ್ರಹಣೆಯ ಮೂಲ ಮಾದರಿಯು BDT 14,999 (ಸುಮಾರು ₹10,000) ಬೆಲೆಯಲ್ಲಿ ಪ್ರಾರಂಭವಾಗುತ್ತದೆ. 6GB RAM ಮತ್ತು 128GB ಸಂಗ್ರಹಣೆಯ ಮಾದರಿಯು BDT 15,999 (ಸುಮಾರು ₹12,000) ಬೆಲೆ ಹೊಂದಿದೆ. ಇದು ಬ್ಲ್ಯಾಕ್ ನೈಟ್ ಔಲ್ ಮತ್ತು ಸ್ವಾನ್ ವೈಟ್ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಪೋನ್ ಭಾರತಕ್ಕೆ ಯಾವಾಗ ಬರಲಿದೆ ಎಂಬ ಬಗ್ಗೆ ಕಂಪೆನಿಯಿಂದ ಯಾವುದೇ ಮಾಹಿತಿ ದೊರೆತಿಲ್ಲ.

Best Mobiles in India

English summary
The dual SIM (nano) Realme C71 operates on Android 15 with Realme UI and boasts a 6.67-inch HD+ display (720x1,604 pixels) that offers a 120Hz refresh rate, a touch sampling rate of up to 240Hz, and a brightness level of 725 nits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+